ಬೆಂಗಳೂರು : ದಿ. ಡಾ. ಮಂಜುನಾಥ ಭಟ್ ಹಿರೇಮನೆ ಬೆಂಗಳೂರು ಇವರ ಸ್ಮರಣಾಂಜಲಿ, ಸ್ಮೃತಿ ಗೌರವ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 24 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ಹಿರೇಮನೆ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಸ್ಮರಣಾಂಜಲಿ, ಸ್ಮೃತಿ ಗೌರವ ಕಾರ್ಯಕ್ರಮದಲ್ಲಿ ರವೀಂದ್ರ ಭಟ್ ಐನಕೈ, ಬಿ.ಆರ್. ಗಣಪತಿ ರಾವ್, ಹೆಚ್.ವಿ. ಶ್ರೀಧರ ಭಟ್, ಟಿ.ಡಿ. ಲಕ್ಷ್ಮೀನಾರಾಯಣ ಭಟ್, ತಿರುಮಲ ಶರ್ಮ ಮತ್ತು ರಾಘವೇಂದ್ರ ಶರ್ಮ ಇವರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಶ್ರೇಷ್ಠ ಭಾಗವತರಾದ ಕೊಳಗಿ ಕೇಶವ ಹೆಗಡೆ ಮತ್ತು ಉಪನ್ಯಾಸಕರಾದ ವಿದ್ವಾನ್ ದತ್ತಮೂರ್ತಿ ಭಟ್ ಇವರಿಗೆ ಸ್ಮೃತಿ ಗೌರವಾರ್ಪಣೆ ಹಾಗೂ ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡ ಮತ್ತು ಪ್ರಸಿದ್ಧ ಕಲಾವಿದರಿಂದ ‘ಕಂಸ ದಿಗ್ವಿಜಯ – ಕಂಸವಧೆ’ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.