ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತಪಡಿಸುವ ಹನು ರಾಮಸಂಜೀವ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಅಣು ರೇಣು ತೃಣ ಕಾಷ್ಠ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 27 ಅಕ್ಟೋಬರ್ 2025ರಂದು ಸಂಜೆ 8-00 ಗಂಟೆಗೆ ಬೆಂಗಳೂರು ಬನ ಶಂಕರಿ 2 ನೇ ಹಂತ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ನಾಣಿ ಅಂಗಳದಲ್ಲಿ ಆಯೋಜಿಸಲಾಗಿದೆ.
ಕಾವ್ಯಾ ಕಡಮೆ ರಚಿಸಿರುವ ಈ ನಾಟಕಕ್ಕೆ ಅಕ್ಷಯ್ ಭೊಂಸ್ಲೆ ಸಂಗೀತ ನೀಡಿರುತ್ತಾರೆ. ರಂಗದ ಮೇಲೆ ನಾಗಶ್ರೀ ಪುಟ್ಟರಾಜು, ವರ್ಚಸ್ವಿನಿ ರವೀಂದ್ರ, ವಿಕಾಸ್ ಗೌಡ, ಸಂಜೀವಿನಿ, ರಾಜೇಶ್ವರಿ ಪ್ರಭು, ಪ್ರವೀಣ್ ಕೆಮ್ತೂರ್, ಚಂದನ್ ರಾಮಚಂದ್ರೇ ಗೌಡ ಇವರುಗಳು ಅಭಿನಯಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.

