ಸಾಲಿಗ್ರಾಮ : ಪಟ್ಟಣ ಪಂಚಾಯತ್ ಸಾಲಿಗ್ರಾಮ ಇದರ ಸುವರ್ಣ ಸಂಭ್ರಮದ ಉತ್ಸವದ ಪ್ರಯುಕ್ತ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 25 ಅಕ್ಟೋಬರ್ 2025ರಂದು ರಾತ್ರಿ ಗಂಟೆ 8-00ಕ್ಕೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಳೆಮಕ್ಕಿ ರಾಮ ಇವರು ವಿರಚಿತ ‘ಕೃಷ್ಣಾರ್ಜುನ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನದಲ್ಲಿ ಪರಮೇಶ್ವರ ನಾಯ್ಕ್, ಗಜೇಂದ್ರ ಶೆಟ್ಟಿ ಆಜ್ರಿ, ಗಣೇಶ ಶಣೈ ಶಿವಪುರ, ವಾಗ್ವಿಲಾಸ ಭಟ್ಸ್, ಕೋಟ ಸುರೇಶ, ನಾಗೂರು ಮಾಧವ, ಪಂಜು ಪೂಜಾರಿ, ವಿಘ್ನೇಶ ಪೈ ಸಿದ್ದಾಪುರ, ಸತೀಶ ಹಾಲಾಡಿ, ಆದಿತ್ಯ ಹೆಗಡೆ, ಅಶೋಕ ಆಚಾರ್, ಯುವರಾಜ ಇವರುಗಳು ಸಹಕರಿಸಲಿದ್ದಾರೆ.

