ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಆಚರಿಸುವ 23ನೇ ವರ್ಷದ ‘ಭರತಮುನಿ ಜಯಂತ್ಯುತ್ಸವ’ವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಿದಿಯೂರು ಶ್ರೀ ವೇದಮೂರ್ತಿ ಕೆ. ಪದ್ಮನಾಭ ಭಟ್ ಇವರ ಅಧ್ಯಕ್ಷತೆಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಭರತ ಪ್ರಶಸ್ತಿ’, ‘ಕಲಾರ್ಪಣ ಪ್ರಶಸ್ತಿ’ ಮತ್ತು ‘ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. 12-00 ಗಂಟೆಗೆ ರಾಧಾಕೃಷ್ಣ ನೃತ್ಯನಿಕೇತನದ ಶಿಷ್ಯರಿಂದ, ಪ್ರಶಿಷ್ಯರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮ, 3-00 ಗಂಟೆಗೆ ನೃತ್ಯ ಸಿಂಚನ, ಸಂಜೆ 7-00 ಗಂಟೆಗೆ ರಾಧಾಕೃಷ್ಣ ನೃತ್ಯನಿಕೇತನ ಶಿಷ್ಯರಿಂದ ‘ನೃತ್ಯಾಭಿಷೇಕಂ’ ಕೂಚುಪುಡಿ ನೃತ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

