ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಮತ್ತು ‘ಸ್ವರ ಚಿನ್ನಾರಿ’ (ಸಂಗೀತ ಘಟಕ) ಪ್ರಸ್ತುತ ಪಡಿಸುವ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ‘ಅಂತರ್ಧ್ವನಿ -10’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡಿನ ಕರೆಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂಗೀತ ಕಾರ್ಯಕ್ರಮವನ್ನು ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ್ ಶೆಣೈ ಇವರು ಉದ್ಘಾಟನೆ ಮಾಡಲಿದ್ದು, ಕೇರಳ ಮಿಷನ್ ಚಾನೆಲ್ ನಿರ್ದೇಶಕರಾದ ಶುಕೂರ್ ಕೋಳಿಕ್ಕರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

