ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಇದರ ವತಿಯಿಂದ ರಸರಾಗ ಚಕ್ರವರ್ತಿ ಶ್ರೀ ದಿನೇಶ ಅಮ್ಮಣ್ಣಾಯ ಇವರಿಗೆ ‘ಸಾವಿರದ ಗಾನಕೋಗಿಲೆಗೆ ಸಾವಿರದ ಗೌರವ’ ಕಾರ್ಯಕ್ರಮವನ್ನು ದಿನಾಂಕ 28 ಅಕ್ಟೋಬರ್ 2025ರಂದು ಬೆಳಗ್ಗೆ 9-30 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನದ ಖ್ಯಾತ ಹಿರಿಯ ಕಿರಿಯ ಹಿಮ್ಮೇಳ ಕಲಾವಿದರಿಂದ ‘ಗಾನ ಗೌರವ’, ಅಪರಾಹ್ನ 2-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ನುಡಿ ಗೌರವ’ ಮತ್ತು ಸಂಜೆ 5-30 ಗಂಟೆಗೆ ‘ಯಕ್ಷಗೌರವ’ ಯಕ್ಷಗಾನದ ಖ್ಯಾತ ಹಿರಿಯ ಕಿರಿಯ ಹಿಮ್ಮೇಳ ಕಲಾವಿದರಿಂದ ‘ಅಕ್ಷಯಾಂಬರ ವಿಲಾಸ’ ಯಕ್ಷಗಾನ ಬಯಲಾಟ ಪ್ರಸ್ತುತಗೊಳ್ಳಲಿದೆ.

