ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯು ದಿನಾಂಕ 25 ಅಕ್ಟೋಬರ್ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಶ್ರೀ ರಾಮ ಪಟ್ಟಾಭಿಷೇಕ’ ತಾಳಮದ್ದಳೆಯೊಂದಿಗೆ ಪ್ರಾರಂಭವಾಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಸತೀಶ್ ಇರ್ದೆ, ಆನಂದ ಸವಣೂರು, ಪದ್ಯಾಣ ಜಯರಾಂ ಭಟ್, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ, ಪರೀಕ್ಷಿತ್ ಹಂದ್ರಟ್ಟ, ಅದ್ವೈತ ಕೃಷ್ಣ ಮುಡೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ದಶರಥ (ಭಾಸ್ಕರ್ ಬಾರ್ಯ), ಶ್ರೀ ರಾಮ (ಗುಡ್ಡಪ್ಪ ಬಲ್ಯ), ಕೈಕೇಯೀ (ವಿ.ಕೆ. ಶರ್ಮ ಅಳಿಕೆ), ಮಂಥರೆ (ಮಾಂಬಾಡಿ ವೇಣುಗೋಪಾಲ ಭಟ್), ಲಕ್ಷ್ಮಣ (ಪ್ರೇಮಲತಾ ಟಿ. ರಾವ್) ಸಹಕರಿಸಿದರು. ಸಹಕಾರ್ಯದರ್ಶಿ ಅಚ್ಯುತ ಪಾಂಗಾಣ್ಣಾಯ ಸ್ವಾಗತಿಸಿ, ವಂದಿಸಿದರು.

