ಬೆಂಗಳೂರು : ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 01 ನವೆಂಬರ್ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.

 
									 
					