ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ) ಧಾರವಾಡ ಮತ್ತು ಕ್ಷಮತಾ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ರಂಗಕಲಾವಿದ ನಿರ್ದೇಶಕ ಯಶವಂತ ಸರದೇಶಪಾಂಡೆಯವರಿಗೆ ನುಡಿ ನಮನ ಕಾರ್ಯಕ್ರಮವನ್ನು ದಿನಾಂಕ 08 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಧಾರವಾಡದ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾನ್ಯ ಶಾಸಕರಾದ ಅರವಿಂದ ಬೆಲ್ಲದ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ನುಡಿ ನಮನ ಕಾರ್ಯಕ್ರಮದಲ್ಲಿ ಮೋಹನ ಸಿದ್ಧಾಂತಿ, ಅರವಿಂದ ಕುಲಕರ್ಣಿ, ಬಂಡು ಕುಲಕರ್ಣಿ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ, ರವಿ ಕುಲಕರ್ಣಿ, ವಿಶ್ವನಾಥ ಕುಲಕರ್ಣಿ, ಶ್ರೀನಿವಾಸ ವಾಡಪ್ಪಿ, ಮಲ್ಲಿಕಾರ್ಜುನ ಸಿದ್ದಣ್ಣವರ ಇವರುಗಳು ನೆನಪು ಹಂಚಿಕೊಳ್ಳಲಿದ್ದಾರೆ.

