ಮೂಡುಬಿದಿರೆ : ಎಕ್ಸಲೆಂಟ್ ಸಮೂಹ ಸಂಸ್ಥೆಗಳು ಇದರ ವತಿಯಿಂದ ‘ತೊರೆದು ಜೀವಿಸಬಹುದೇ’ ಎಕ್ಸಲೆಂಟ್ ಸಂಗೀತ ಸಂಜೆ ಕಾರ್ಯಕ್ರಮವನ್ನು ದಿನಾಂಕ 18 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಎಕ್ಸಲೆಂಟ್ ರಾಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂತರಾಷ್ಟ್ರೀಯ ಹಿಂದೂಸ್ಥಾನಿ ಗಾಯಕರಾದ ಪದ್ಮಶ್ರೀ ಪಂ. ಎಮ್. ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಖ್ಯಾತ ಯುವ ಸಿತಾರ್ ವಾದಕ ಅಂಕುಶ್ ಎನ್. ನಾಯಕ್, ನರೇಂದ್ರ ಎಲ್. ನಾಯಕ್, ಕೇಶವ ಜೋಶಿ, ಹೇಮಂತ್ ಜೋಶಿ ಮತ್ತು ಶ್ರೀದತ್ ಪ್ರಭು ಸಹಕರಿಸಲಿದ್ದಾರೆ. ಆಸಕ್ತರು ದಿನಾಂಕ 17 ಡಿಸೆಂಬರ್ 2025ರೊಳಗೆ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.

