ಮಂಗಳೂರು : ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಗುರು ಡಾ. ಭ್ರಮರಿ ಶಿವಪ್ರಕಾಶರ ನಿರ್ದೇಶನದಲ್ಲಿ ಆಯೋಜಿಸುತ್ತಿರುವ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಈ ಬಾರಿ ಕುಮಾರಿ ವರ್ಣಿಕಾ ಆಚಾರ್ಯ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವರ್ಣಿಕಾ ಕಳೆದ ಎಂಟು ವರುಷಗಳಿಂದ ಡಾ. ಭ್ರಮರಿಯವರಲ್ಲಿ ನೃತ್ಯಾಭ್ಯಾಸಗೈಯುತ್ತಿದ್ದಾಳೆ. ಕಾವೂರಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ವಠಾರದಲ್ಲಿರುವ ಶ್ರೀ ರವಿಚಂದ್ರನ್ ಸಭಾಭವನದಲ್ಲಿ ದಿನಾಂಕ 25 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀಮಠದ ಆಡಳಿತ ವ್ಯವಸ್ಥಾಪಕರಾದ ಶ್ರೀ ಸುದರ್ಶನ ಬನ್ನಿಂತಾಯರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದು, ಹೈದರಾಬಾದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ವಿದ್ಯಾಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ವಸಂತಿ ಸಿರಿಗುರಿಯವರು ಶುಭಹಾರೈಸಲಿದ್ದಾರೆ. ಸಹೃದಯರಿಗೆ ಮುಕ್ತ ಪ್ರವೇಶವಿದೆ.

