ಮಂಗಳೂರು : ಅಲೆವೂರಾಯ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ದಿ. ಲಕ್ಷ್ಮೀನಾರಾಯಣ ಅಲೆವೂರಾಯರ ಸಂಸ್ಮರಣೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ದಿನಾಂಕ 25, 26 ಮತ್ತು 27 ಡಿಸೆಂಬರ್ 2025ರಂದು ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ‘ಯಕ್ಷ ತ್ರಿವೇಣಿ’ಯಾಗಿ ಆಚರಿಸಲ್ಪಡುತ್ತದೆ. ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಅಂದರೆ 50 ವರ್ಷಗಳ ತಿರುಗಾಟ ನಡೆಸಿದ ‘ಯಕ್ಷ ಸಾಧಕರು’ ಸರಣಿಯ ಶ್ರವಣ ಕಾರಂತ ಕುಡುಪು, ವಸಂತ ಗೌಡ ಕಾಯರ್ತ್ಕಡ ಹಾಗೂ ಸಂಘಟಕ ಸತೀಶ ಅಡಪ ಸಂಕಬೈಲು ಇವರಿಗೆ ಪ್ರತಿಷ್ಠಾನದ ಗೌರವ ಸನ್ಮಾನವೂ ನಡೆಯಲಿದೆ.
ದಿನಾಂಕ 25 ಡಿಸೆಂಬರ್ 2025ರಂದು ಶ್ರೀ ಕ್ಷೇತ್ರದ ಮೊಕ್ತೇಸರ ಅರುಣ್ ಐತಾಳ್ ಇವರು ದೀಪ ಪ್ರಜ್ವಲಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮದ ಬಳಿಕ ‘ಮಂಡೋದರಿ ಪರಿಣಯ’ ಯಕ್ಷಗಾನ ನಡೆಯಲಿದೆ. ದಿನಾಂಕ 26 ಡಿಸೆಂಬರ್ 2025ರಂದು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ದೀಪ ಪ್ರಜ್ವಲಿಸಲಿದ್ದು, ‘ಶಾಂಭವಿ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ದಿನಾಂಕ 27 ಡಿಸೆಂಬರ್ 2025ರಂದು ಮಂಗಳಾದೇವಿಯ ವೇದಮೂರ್ತಿ ಭಾಸ್ಕರ ಐತಾಳ್ ಇವರು ದೀಪ ಪ್ರಜ್ವಲಿಸಲಿದ್ದು, ‘ಏಕಾದಶೀ ಮಹಾತ್ಮೆ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

