ವಿಜಯಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಕುಮಾರ ವಾಲ್ಮೀಕಿ ರಚಿಸಿದ ತೊರವೆ ರಾಮಾಯಣದ ಸೀತಾರಾಮ ಕಲ್ಯಾಣ ಪ್ರಸಂಗದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 19 ಜನವರಿ 2026ರಂದು ಯಶಸ್ವಿಯಾಗಿ ಪೂರ್ಣಗೊಂಡಿತು.
ಹಿರಿಯ ಗಮಕಿ ಶ್ರೀಮತಿ ಶಾಂತಾಬಾಯಿ ಕೌತಾಳ ಇವರು ಸ್ಪಷ್ಟವಾಗಿ, ನಿರಾಯಾಸವಾಗಿ ಗಮಕ ವಾಚನ ಮಾಡಿದರು ಮತ್ತು ಹಿರಿಯ ಸಾಹಿತಿ, ಗಮಕ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಶ್ರೀ ಕಲ್ಯಾಣರಾವ ದೇಶಪಾಂಡೆ ವ್ಯಾಖ್ಯಾನ ಮಾಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ 55ಕ್ಕಿಂತ ಹೆಚ್ಚು ಆಸಕ್ತರಿಗೆ ಹಿರಿಯ ಕಲಾವಿದರಿಬ್ಬರೂ ಗಮಕದ ಸವಿ ಉಣಬಡಿಸಿದರು.

