ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ 16ನೇ ವಾರ್ಷಿಕೋತ್ಸವವನ್ನು ದಿನಾಂಕ 31 ಜನವರಿ 2026ರಂದು ಅಪರಾಹ್ನ 3-00 ಗಂಟೆಗೆ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವೇದಿಕೆಯಲ್ಲಿ ಆಯೋಜನೆಗೊಳಿಸಲಾಗಿದೆ.
ಕೀರ್ತನ ಕುಟೀರ ಕುಂಬ್ಳೆ ಇದರ ವಿದ್ಯಾರ್ಥಿನಿಯರಾದ ರಾಜ್ಯ ಮಟ್ಟದ ಹರಿಕಥಾ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ದೇವಿಕಾ ಕೆ. ಹಾಗೂ ಕುಮಾರಿ ಭಾವನಾ ನಾಯಕ್ ಇವರಿಂದ ಹರಿಕಥೆ ಜರಗಲಿದೆ. ಬಳಿಕ ಸಭಾ ಕಲಾಪವನ್ನು ಶ್ರೀ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣ್ ಐತಾಳ್ ಉದ್ಘಾಟಿಸಲಿದ್ದು, ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದ ಜೀ ಆಶೀರ್ವಚನ ನೀಡಲಿದ್ದಾರೆ. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಡ್ವಕೇಟ್ ಎಚ್.ವಿ. ರಾಘವೇಂದ್ರ, ಬಿ. ಅಶೋಕ್ ಕುಮಾರ್, ದಿಲ್‌ರಾಜ್ ಆಳ್ವ, ಶ್ರೀಮತಿ ಹೇಮಾ ದಾಮೋದರ ನಿಸರ್ಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹಿರಿಯ ಹರಿದಾಸ ಉಮೇಶ್ ಗೌತಮ್ ನಾಯಕ್, ಕಲಾಪೋಷಕ ಸುಧಾಕರ ರಾವ್ ಪೇಜಾವರ, ಹಾರ್ಮೋನಿಯಂ ಕಲಾವಿದೆ ಗುಣವತಿ ಜೆ. ಆಚಾರ್ ಇವರನ್ನು ಸಮ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಹರಿದಾಸ ಉಮೇಶ್ ಗೌತಮ್ ನಾಯಕ್ ಇವರಿಂದ ಹರಿಕಥೆ ಜರಗಲಿದೆ ಎಂದು ಹರಿಕಥಾ ಪರಿಷತ್ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ತಿಳಿಸಿದ್ದಾರೆ.

