ದುಬೈ : ಕಥಾ ಬಿಂದು ಪ್ರಕಾಶನದ ವತಿಯಿಂದ ದುಬೈ ರೀಜೆಂಟ್ ಪ್ಯಾಲೇಸ್ ಹೋಟೆಲ್ ಬುರ್ಜುಮನ್ ಶಾಪಿಂಗ್ ಮಾಲ್ ಬಳಿ, ಬರ್ ದುಬೈ ಇಲ್ಲಿನ ರೆಸ್ಟೋರೆಂಟ್ ನಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ದಿನಾಂಕ 18 ಫೆಬ್ರವರಿ 2026ರಂದು ‘ಕನ್ನಡ ಕಂಪು ಸರಣಿ -9’ ಕಾರ್ಯಕ್ರಮವು ಅಧ್ಯಾಪಕಿ ಶ್ರೀಮತಿ ಶೋಭಾ ಲೋಕೇಶ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಶ್ರೀ ಜಗದೀಶ್ ಪೈ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಶ್ರೀ ಹರಿಶ್ಚಂದ್ರ ಪಿ. ಸಾಲಿಯಾನ್ ಇವರು ಕಾರ್ಯಕ್ರಮದ ಉದ್ಘಾಟನೆಗೈದರು. ಶ್ರೀಮತಿ ಮಂಜುಳ ಅನಿಲ್ ರಾವ್ ಹಾಗೂ ಶ್ರೀ ಮಂಜುನಾಥ್ ಕಾಸರಗೋಡು, ಶ್ರೀ ಗಂಗಾಧರ ಅಮೀನ್ ಮುಖ್ಯ ಅತಿಥಿಯಾಗಿದ್ದರು. ಶ್ರೀಮತಿ ಗೀತಾ ಭಟ್ ಉಪಸ್ಥಿತಿ ವಹಿಸಿದ್ದರು. ಲೇಖಕ ಹರಿಶ್ಚಂದ್ರ ಪಿ. ಸಾಲಿಯನ್ ಇವರ ‘ತುಳುನಾಡ ತುಳು ಗಾದೆಲು’, ಲೇಖಕಿ ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ ಇವರ ‘ಆಪ್ತ ಸಂಗಾತಿ’ ವ್ಯಕ್ತಿತ್ವ ವಿಕಸನ ಲೇಖನ ಹಾಗೂ ಲೇಖಕಿ, ಶಿಕ್ಷಕಿ ರೇಖಾ ಸುರೇಶ್ ರಾವ್ ಇವರ ‘ಸುಷುಮ್ನ’ ಕವನ ಸಂಕಲನ ಈ ಕಾರ್ಯಕ್ರಮದ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿತು. ಶ್ರೀಮತಿ ವಿಜಯ ಎಚ್. ಸಾಲಿಯಾನ್, ಶ್ರೀಮತಿ ಆಶಾ ಜಗದೀಶ್, ಶ್ರೀಮತಿ ಗೀತಾ ಭಟ್, ಶ್ರೀಮತಿ ಬಿಂದು, ಶ್ರೀ ಗ್ಲಾಡ್ ಸನ್, ಕುಮಾರಿ ಸಹನಾ, ಡಾ. ಪೃಥ್ವಿ ರಾವ್ ಉಪಸ್ಥಿತಿಯಲ್ಲಿದ್ದರು. ಲೇಖಕಿ ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ ನಿರೂಪಣೆಗೈದರು. ಅಧ್ಯಾಪಕಿ ಶ್ರೀಮತಿ ರೇಖಾ ಸುದೇಶ್ ರಾವ್ ವಂದನಾರ್ಪಣೆಗೈದರು. ನಾಡ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

