ಧಾರವಾಡ : ಭಾರತದ ಮಹತ್ವದ ಸಾಹಿತಿಗಳಲ್ಲೊಬ್ಬರಾದ ದಿ. ಮಹಾಶ್ವೇತಾದೇವಿ (1926-2016) ಬಂಗಾಳಿ ಲೇಖಕಿಯಾದರೂ ಸಹ ತಮ್ಮ ಬರವಣಿಗೆ ಮತ್ತು ಹೋರಾಟದ ಮೂಲಕ ಅಖಿಲ ಭಾರತೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯು ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರ ಸಾಹಿತ್ಯದ ಕುರಿತು ಒಂದು ವಿಚಾರಗೋಷ್ಠಿ ಮತ್ತು ಅಪ್ರಕಟಿತ ಕಥಾಸಂಕಲನವೊಂದಕ್ಕೆ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಪ್ರಶಸ್ತಿ ಒಂದು ಸಾಂಕೇತಿಕ ಮೊತ್ತದ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ.
ಪ್ರಶಸ್ತಿ ಆಯ್ಕೆಯ ನಿಯಮಗಳು :
* ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
* ಲಿಂಗ, ವಯೋಮಿತಿ, ಜಾತಿ, ಪ್ರದೇಶ, ಸ್ವಹಿತಾಸಕ್ತಿ ಪೋಷಣೆ ಸೇರಿದಂತೆ ಯಾವುದೇ ಕೃತಕ ಮಾನದಂಡಗಳಿರುವುದಿಲ್ಲ.
* ಕಥೆಗಳ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ.
* ಸ್ಪರ್ಧಿಗಳು 8ರಿಂದ 12 ಸಣ್ಣ ಕಥೆಗಳಿರುವ ಅಪ್ರಕಟಿತ ಕಥಾಸಂಕಲನದ ಎರಡು ಪ್ರತಿಗಳನ್ನು ಕಳುಹಿಸಬೇಕು.
* ಸ್ವತಂತ್ರ ಕಥೆಗಳನ್ನು ಮಾತ್ರ ಕಳುಹಿಸಬೇಕು.
* ಅನುವಾದ, ಅನುಸೃಷ್ಟಿ, ರೂಪಾಂತರ, ಪ್ರೇರಣೆ ಅಥವಾ ಸ್ಫೂರ್ತಿ ಪಡೆದ ಕಥೆಗಳಿಗೆ ಅವಕಾಶವಿಲ್ಲ.
* ಬೇರಾವುದೇ ಸ್ಪರ್ಧೆಗೆ ಕಳುಹಿಸಿ ವಿಜೇತವಾದ ಅಥವಾ ಫಲಿತಾಂಶದ ನಿರೀಕ್ಷೆಯಲ್ಲಿರುವ ಹಸ್ತಪ್ರತಿಯನ್ನು ಈ ಪ್ರಶಸ್ತಿಗೆ ಕಳುಹಿಸುವಂತಿಲ್ಲ.
* ತಪ್ಪಿಲ್ಲದಂತೆ ಟೈಪಿಸಿ, ಪ್ರಿಂಟೌಟ್ ತೆಗೆದು, ಬೈಂಡ್ ಮಾಡಿಸಿದ ಎರಡು ಹಾರ್ಡ್ ಕಾಪಿಗಳನ್ನು ನಮ್ಮ ವಿಳಾಸಕ್ಕೆ ಕಳುಹಿಸಬೇಕು.
*ಲೇಖಕ/ಕಿಯ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಕವರ್ ಲೆಟರನ್ನು ಪ್ರತ್ಯೇಕವಾಗಿ ಲಗತ್ತಿಸಿ ಕಳಿಸಬೇಕು.
* ಸ್ಪರ್ಧಿಗಳು ದಿ ಮಹಾಶ್ವೇತಾದೇವಿ ಮತ್ತು ಸಾಹಿತ್ಯ ಗಂಗಾ ಸಂಸ್ಥೆಯ ಕುರಿತು ಪ್ರಾಥಮಿಕ ಮಾಹಿತಿಯನ್ನಾದರೂ ತಿಳಿದಿರುವುದು ಅಪೇಕ್ಷಣೀಯ.
* ಹಸ್ತಪ್ರತಿ ಕಲಿಸಲು 25 ಮಾರ್ಚ್ 2026 ಕೊನೆಯ ದಿನ.
* ಫಲಿತಾಂಶವನ್ನು ದಿನಾಂಕ 30 ಎಪ್ರಿಲ್ 2026ರಂದು ಪ್ರಕಟಿಸಲಾಗುವುದು.
* ಆಯ್ಕೆಯಾದ ಲೇಖಕ/ಕಿ ಪ್ರಶಸ್ತಿ ಘೋಷಣೆಯಾದ 25 ದಿನಗಳಲ್ಲಿ ರಕ್ಷಾಪುಟ ಮತ್ತು ಮುಖಪುಟದಲ್ಲಿ ಪ್ರಶಸ್ತಿ ವಿಜೇತ ಕೃತಿ ಎಂದು ಕಡ್ಡಾಯವಾಗಿ ನಮೂದಿಸಿ, ಪುಸ್ತಕ ಪ್ರಕಟಿಸಬೇಕು.
* ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ – 581 110, ಹಾವೇರಿ ಜಿಲ್ಲೆ.
* ಮೊಬೈಲ್ ನಂಬರ್ : 9110687473
