ಉಡುಪಿ : ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಇವರ ಆಶ್ರಯದಲ್ಲಿ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ಕಿದಿಯೂರು, ಉಡುಪಿ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ದಿನಾಂಕ :28-05-2023ನೇ ಭಾನುವಾರ ಮಧ್ಯಾಹ್ನ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿ ಮತ್ತು ಅನುಗ್ರಹ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಡಾ. ನಿ. ಬೀ. ವಿಜಯ ಬಲ್ಲಾಳ್ ಶುಭಾಶಂಸನೆಗೈಯಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ಶ್ರೀ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಿದಿಯೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ಶ್ರೀ ಉದಯ ಕುಮಾರ್ ಶೆಟ್ಟ, ತಿರುಮಲ ಜ್ಯುವೆಲ್ಲರ್ಸ್ ಶ್ರೀ ಗಂಗಾಧರ ಆಚಾರ್ಯ, ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಸೋಮನಾಥ್ ಬಿ.ಕೆ. ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಸಿದ್ಧ ಭಾಗವತರಾದ ಶ್ರೀ ವಿದ್ವಾನ್ ಗಣಪತಿ ಭಟ್ ಇವರಿಗೆ ‘ಯಕ್ಷ ಆರಾಧನಾ’ ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು.
ಸಭಾ ಕಾರ್ಯಕ್ರಮದ ನಂತರ ಟ್ರಸ್ಟಿನ ವತಿಯಿಂದ ಶಿಕ್ಷಣ ಪಡೆದ ಸದಸ್ಯರಿಂದ ಯಕ್ಷಗಾನ ಪ್ರಸಂಗ ‘ಶಶಿಪ್ರಭಾ ಪರಿಣಯ’ ಪ್ರದರ್ಶನಗೊಳ್ಳಲಿದೆ. ಕೆ.ಜೆ. ಗಣೇಶ್ ಕಿದಿಯೂರು ಇವರ ನಿರ್ದೇಶನದಲ್ಲಿ ನಡೆಯುವ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಕೆ.ಜೆ. ಗಣೇಶ್, ಕೆ.ಜೆ. ಕೃಷ್ಣ, ಕೆ.ಜೆ. ಸಧೀಂದ್ರ, ಕೆ.ಜೆ. ದೀಪ್ತ ಆಚಾರ್ಯ ಕಿದಿಯೂರು, ಅರವಿಂದ ಆಚಾರ್ಯ, ಪ್ರಣೇಶ್ ಆಚಾರ್ಯ ಸಹಕರಿಸಲ್ಲಿದ್ದಾರೆ.
ಪಾತ್ರಧಾರಿಗಳು : ಪ್ರತಿಮ ಆಚಾರ್ಯ, ಮಾನ್ಯ ಆಚಾರ್ಯ, ಆದ್ಯಾ ಆಚಾರ್ಯ, ಆಕಾಂಕ್ಷ, ಚಹನ, ರಜಿತ್, ರಿಷಾನ್, ಸ್ವಾತಿ, ಶರಧಿ, ಯುಕ್ತ, ಸೃಷ್ಟಿ, ರೋಹನ್, ದಿಶಾ, ರಾಹುಲ್, ಆದರ್ಶ, ಪೂರ್ವಿ, ಪೂರ್ಣಿಮ, ಉನ್ನತಿ, ಜಾನ್ವಿ, ರಾಜೇಶ ಆಚಾರ್ಯ.
ಈ ಕಾರ್ಯಕ್ರಮಕ್ಕೆ ಕೆ.ಜೆ. ಗಣೇಶ್, ಕೆ.ಜೆ. ಸುಧೀಂದ್ರ ಹಾಗೂ ಕೆ.ಜೆ. ಕೃಷ್ಣ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.