ಧಾರವಾಡ: ಧಾರವಾಡದ ಅಭಿನಯ ಭಾರತಿ ಪ್ರದರ್ಶಿಸುವ, ಶ್ರೀ ಗಜಾನನ ಯುವಕ ಮಂಡಳ (ಶೇಷಗಿರಿ ಕಲಾತಂಡ ) ಪ್ರಸ್ತುತಪಡಿಸುವ ‘ಚಾವುಂಡರಾಯ’ ನಾಟಕವು ದಿನಾಂಕ 28-05-2023ರ ಸಂಜೆ ಕರ್ನಾಟಕ ಕಾಲೇಜು ಆವರಣದಲ್ಲಿರುವ ಅಣ್ಣಾಜಿರಾವ ಸಿರೂರ ರಂಗ ಮಂದಿರ ‘ಸೃಜನಾ’ ದಲ್ಲಿ ಪ್ರದರ್ಶನಗೊಳ್ಳಲಿದೆ .
ಜಯರಾಮ್ ರಾಯ್‌ಪುರ ರಚಿಸಿದ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಶ್ವೇತಾರಾಣಿ ಎಚ್. ಕೆ ಅವರದ್ದು. ಹರೀಶ ಗುರಪ್ಪನವರ ಬೆಳಕಿನ ವಿನ್ಯಾಸ ಮಾಡುವ ಈ ನಾಟಕಕ್ಕೆ ಡಾ. ಶ್ರೀಪಾದ ಭಟ್ ಸಂಗೀತ ನೀಡಿದ್ದು ಗಣೇಶ್ ಹೆಗ್ಗೋಡು ಮತ್ತು ಲಕ್ಷ್ಮಣ ರೊಟ್ಟಿ ಸಂಗೀತ ನಿರ್ವಹಿಸಲಿರುವರು.

