ಮಂಜೇಶ್ವರ: ಬಾಕುಡ ಸಮಾಜ ಕೇಂದ್ರ ಸಮಿತಿಯ ನೇತೃತ್ವದಲ್ಲಿ ರಂಗ ಚೇತನ ಕಾಸರಗೋಡು ಇದರ ಸಹಬಾಗಿತ್ವದಲ್ಲಿ GWLPS ಮಂಜೇಶ್ವರ ಶಾಲೆಯಲ್ಲಿ ಮೇ 12 ಮತ್ತು 13 ರಂದು ದ್ವಿದಿನ ಸಹವಾಸ ಶಿಬಿರ ಜರಗಿತು. ಬಾಕುಡ ಸಮುದಾಯದ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳು ದೀಪ ಪ್ರಜ್ವಲನೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ಹಿರಿಯ ಸಾಮಾಜಿಕ ಮುಂದಾಳು ವಿಜಯ್ LIC ಅಂಬ್ಲಮೊಗರು ಸತ್ಯದ ಬೊಲ್ಪು ಫೋಟೋವನ್ನು ಅನಾವರಣ ಗೊಳಿಸಿ ಶಿಬಿರ ನಿರ್ದೇಶಕರಾದ ಅಶೋಕ್ ಕೊಡ್ಲಮೊಗರು ರವರಿಗೆ ಹಸ್ತಾಂತರಿಸುವುದರೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು. ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಜಯ್ ಪಂಡಿತ್ ಮಂಗಲ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣವೇಣಿ ಟೀಚರ್,ಸದಾಶಿವ ಬಾಲಮಿತ್ರ ,ದೈವದ ಪಾತ್ರಿಗಳಾದ ಬಾಸ್ಕರನ್ ಪಚ್ಲಂಪಾರೆ,ಅಡ್ವಕೇಟ್ ಭರತ್ ರಾಜ್ ಅಟ್ಟೆಗೋಳಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಏಕಾನಂದ ಮಂಗಳೂರು, ಚಂದ್ರಶೇಖರ ಅಂಗಡಿಪದವು,ವಿಠಲ ನಾರಾಯಣ ಬಂಬ್ರಾಣ ಮೊದಲಾದವರು ಉಪಸ್ಥಿತರಿದ್ದರು.ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಮಂಗಳ ಪೊಸೋಟ್ ಮತ್ತು ಸುಮಿತ್ರಾ ಬ0ಬ್ರಾಣ ಪ್ರಾರ್ಥನೆ ಹಾಡಿದರು. ಶಿಬಿರ ನಿರ್ದೇಶಕರಾದ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವನ್ ಹೊಸಂಗಡಿ ಸ್ವಾಗತಿಸಿ,ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಕಾರ್ಯದರ್ಶಿ ರಾಜೇಶ್ ಕೊಡ್ಲಮೊಗರು ವಂದಿಸಿದರು. ಸುರೇಶ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು