ಉಡುಪಿ: ಕೋಟೇಶ್ವರ ಎನ್.ಆರ್.ಎ.ಎಂ.ಎಚ್ ಪ್ರಕಾಶನ ಮತ್ತು ’ಸ್ಥಿತಿಗತಿ’ ತ್ರೈಮಾಸಿಕ ಪತ್ರಿಕೆ ಆಶ್ರಯದಲ್ಲಿ ದಿ.ಪಾಂಡೇಶ್ವರ ಸೂರ್ಯನಾರಾಯಣ ಚಡಗ ನೆನಪಿನಲ್ಲಿ ನೀಡುವ ಕಾದಂಬರಿ ಪ್ರಶಸ್ತಿಗೆ 2022ರಲ್ಲಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ ಅಥವಾ ಪ್ರಕಾಶಕರಿಂದ ಆಹ್ವಾನಿಸಲಾಗಿದೆ.
ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆ ಸಂಚಾಲಕ ಪ್ರೊ. ಉಪೇಂದ್ರ ಸೋಮಯಾಜಿ, ‘ಶ್ರೀ’ ಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ-575225 (ಸಂಪರ್ಕ ಸಂಖ್ಯೆ :9740842722) ಅವರಿಗೆ ಆಗಸ್ಟ್ 30ರೊಳಗೆ ತಲುಪುವಂತೆ ಕಳಿಸಿಕೊಡಬೇಕು ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಡಾ.ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.