ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು 2010ರಿಂದೀಚೆಗೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗಮನಾರ್ಹ ಸಾಧನೆಗೈದು ನಾಡಿನಾದ್ಯಂತ ಹೆಸರು ಪಡೆದಿದೆ. ಯಕ್ಷಗಾನ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಜನ್ ಸಂಗೀತ ತರಗತಿಗಳನ್ನೂ ನಡೆಸುತ್ತಾ ಬಂದಿದೆ. ಇಲ್ಲಿ ತರಬೇತಿ ಪಡೆದ ಹಲವು ಪ್ರತಿಭೆಗಳು ರಾಜ್ಯ, ಅಂತರಾಜ್ಯದ ಹಲವಾರು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ .
ಇದೀಗ ಯಕ್ಷಗಾನ ತರಬೇತಿ ಆರಂಭಗೊಳ್ಳಲಿದ್ದು ಯಾವುದೇ ಜಾತಿ, ಮತ, ವಯೋಮಾನದ ಯಕ್ಷಗಾನ ಕಲಿಕಾಸಕ್ತರೂ ತರಗತಿಗೆ ಸೇರಬಹುದು. ಪ್ರತೀ ಆದಿತ್ಯವಾರ ಸಂಜೆ 4.30ರಿಂದ ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ (ಶ್ರೀಮೂಕಾಂಬಿಕಾ ಸರ್ವೀಸ್ ಸ್ಟೇಶನ್ ಎದುರು) ತರಗತಿ ನಡೆಯುತ್ತದೆ. ಯಕ್ಷಗಾನ ನಾಟ್ಯ, ಭಾಗವತಿಕೆ, ಚೆಂಡೆ, ಮದ್ದಳೆಗಳ ತರಗತಿಗಳೂ ನಡೆಯಲಿವೆ. ಆಸಕ್ತರು 18-6-2023 ಆದಿತ್ಯವಾರ ಸಂಜೆ 4.30ಕ್ಕೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ 9633876833ನ್ನು ಸಂಪರ್ಕಿಸಿರಿ.