ಮಂಗಳೂರು : ಕೊಂಕಣಿ ಅಧ್ಯಯನ ಪೀಠ ಮತ್ತು ಕೆನರಾ ಕಾಲೇಜಿನ ವಿವಿಧ ಭಾಷಾ ಸಂಘಗಳ ಆಶ್ರಯದಲ್ಲಿ ‘ಟ್ರಾನ್ಸ್ಲೇಷನ್ ಟುಡೇ ಪ್ರಿನ್ಸಿಪಲ್ಸ್ ಅಂಡ್ ಚಾಲೆಂಜಸ್’ ಎಂಬ ವಿಷಯದಲ್ಲಿ ವಿಚಾರ ಸಂಕಿರಣವು ದಿನಾಂಕ : 07-06-2023ರಂದು ನಡೆಯಿತು.
“ಭಾಷಾಂತರ ಇಂದು ತಂತ್ರಜ್ಞಾನವನ್ನು ಬಳಸಿಕೊಂಡು ಮಾಡುವ ಕೆಲಸವಾಗಿದೆ. ಭಾಷೆಗಳು ಮಾನವ ಜನಾಂಗದ ಮಧ್ಯೆ ಅಡ್ಡಗೋಡೆ ಕಟ್ಟುತ್ತವೆ. ಆದರೆ ಭಾಷಾಂತರ ಅವುಗಳನ್ನು ಒಡೆಯುತ್ತವೆ. ನಾವು ಕಲಿಯದ ಭಾಷೆಗಳಲ್ಲಿರುವ ಅಮೂಲ್ಯ ವಿಚಾರಗಳನ್ನು ಭಾಷಾಂತರಗಳ ಮೂಲಕ ಕಲಿಯಬಹುದು. ಇಂದು ಉತ್ತಮ ಭಾಷಾಂತರಕಾರನಿಗೆ ಒಳ್ಳೆಯ ಉದ್ಯೋಗಾವಕಾಶವಿದೆ” ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನ ವಿಭಾಗದ ಡಾ. ಬಿ. ದೇವದಾಸ್ ಪೈ ಅಭಿಪ್ರಾಯ ಪಟ್ಟರು.
ಕೊಂಕಣಿ ಅಧ್ಯಯನ ಕೇಂದ್ರದ ಸಂಯೋಜಕರಾಗಿರುವ ಡಾ. ಜಯವಂತ ನಾಯಕ್ ಮಾತನಾಡಿ ಕೊಂಕಣಿ ಭಾಷೆ ಸಾಹಿತ್ಯ ಹಾಗೂ ಕರಾವಳಿಗೆ ಯು.ಶ್ರೀನಿವಾಸ ಮಲ್ಯ, ಜಾರ್ಜ್ ಫೆರ್ನಾಂಡಿಸ್ ಮುಂತಾದ ದೇಶ ಕಂಡ ನಾಯಕರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ಭಾಷಾ ಸಂಘಗಳ ಸಂಯೋಜಕಿಯರಾದ ಶ್ರೀಮತಿ ಕೀರ್ತನ ಭಟ್, ಸುಜಾತ ಜಿ ನಾಯಕ್, ಶೈಲಜಾ ಪುದುಕೋಳಿ, ಚೇತನ ಗಡಿಯಾರ್, ಡಾ. ಕಲ್ಪನಾ ಪ್ರಭು ಉಪಸ್ಥಿತರಿದ್ದರು. ಗಿರೀಶ್ ನಾಯಕ್ ಪ್ರಾರ್ಥಿಸಿ, ವಿನೀತ್ ಭಟ್ ಸ್ವಾಗತಿಸಿದರು. ತ್ರಿವಿಕ್ರಮ ಶೆಣೈ ವಂದಿಸಿ, ವೇದಾಂತ ನಾಯಕ ನಿರೂಪಿಸಿದರು.