ಬೆಂಗಳೂರು: ಮಧುರತರಂಗ (ರಿ) ದ.ಕ. ಮಂಗಳೂರು ಪ್ರಸ್ತುತಪಡಿಸುವ ಸಂಗೀತ ಕ್ಷೇತ್ರದ ಗಾಯನ ಜೀವನದ ಐದು ದಶಕಗಳನ್ನು ಪೂರೈಸಿದ ಹೊಸ್ತಿಲಲ್ಲ ‘ಸ್ವರಕಂಠೀರವ’ (ಡಾ. ರಾಜ್ ಸವಿನೆನಪು) ಕಾರ್ಯಕ್ರಮವು ದಿನಾಂಕ : 01-07-2023ರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಶ್ರೀ ಜಗದೀಶ್ ಶಿವಪುರ ನಿರ್ವಹಿಸಲಿದ್ದು ಪ್ರಜಾವಾಣಿ ಕಾರ್ಯನಿರ್ವಾಹಕ ಮತ್ತು ಸಂಪಾದಕರಾದ ಶ್ರೀ ರವೀಂದ್ರ ಭಟ್ಟ ಶುಭಾಶಂಸನೆ ಗೈಯ್ಯಲಿದ್ದಾರೆ . ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿಯ ನಗರಸಭಾ ಸದಸ್ಯೆಯಾದ ಶ್ರೀಮತಿ ಮಾನಸ ಚಿದಾನಂದ ಪೈ ನೆರವೇರಿಸಲಿದ್ದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಎಸ್. ಕಲ್ಕೂರ ಕನ್ನಡ ಭುವನೇಶ್ವರಿಗೆ ‘ಪುಷ್ಪಾಂಜಲಿ’ ಸಲ್ಲಿಸಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರುಗಳಾದ ಶ್ರೀ ವಿ. ಮನೋಹರ್ ಹಾಗೂ ಶ್ರೀ ಮಣಿಕಾಂತ್ ಕದ್ರಿ ವರನಟರ ಭಾವಚಿತ್ರಕ್ಕೆ ‘ಪುಷ್ಪಾಂಜಲಿ’ ಸಲ್ಲಿಸಲಿದ್ದಾರೆ ಹಾಗೂ ಹಿರಿಯ ಕಲಾ ಸಾಹಿತಿ ಶ್ರೀ ಹೆಚ್. ಜನಾರ್ದನ ಹಂದೆ ಚಂಪುಕಾವ್ಯ ಪ್ರಸ್ತುತಪಡಿಸಲಿದ್ದಾರೆ. ಗಾಯಕಿಯಾದ ಶ್ರೀಮತಿ ಸುಮ ಎಲ್. ಎನ್. ಶಾಸ್ತ್ರಿಯವರು ಸಂಗೀತದಲ್ಲಿ ಒಲವು, ಸ್ಪೂರ್ತಿ ಮತ್ತು ಆತುರದ ಬಗ್ಗೆ ವಿಚಾರಮಂಡಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಗುರುಕಿರಣ್ ವಹಿಸಲಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ಟಾಪ್ ಸ್ಟಾರ್ ರೇಣುಕುಮಾರ್ ಸಭಾಧ್ಯಕ್ಷತೆ ವಹಿಸಲಿರುವರು.ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ನಿರ್ದೇಶಕರಾದ ಶ್ರೀ ವಿಶ್ವನಾಥ ಹಿರೇಮಠ, ಬೆಂಗಳೂರಿನ ನಗರ ಯೋಜನಾ ಇಲಾಖೆಯ ನಗರ ಯೋಜನಾ ಜಂಟಿ ನಿರ್ದೇಶಕರಾದ ಶ್ರೀ ಸದಾನಂದ ಆಚಾರ್ಯ, ಬೆಂಗಳೂರಿನ ದ. ಕ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ತುಕಾರಾಮ ಆಚಾರ್ಯ, ಬೆಂಗಳೂರಿನ ಭ್ರಾಮರಿ ಕ್ರಿಯೇಷನ್ಸ್ ನ ಶ್ರೀ ಹರಿಶ್ಚಂದ್ರ ಏನ್. ಆಚಾರ್ಯ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕುಮಾರಿ ಶರಣ್ಯ ಹಾಗೂ ಬಿ. ಎಸ್. ವೇಣುಗೋಪಾಲ ರಾಜು ಇವರನ್ನು ಸನ್ಮಾನಿಸಲಾಗುವುದು.ಉಪನ್ಯಾಸಕಿಯಾದ ಶ್ರೀಮತಿ ಮಾಧುರಿ ಶ್ರೀ ರಾಮ್ ಕಾರ್ಯಕ್ರಮ ನಿರ್ವಹಿಸಲಿದ್ದು ಶ್ರೀಮತಿ ದೀಪಿಕಾ ದಿವಾಕರ ಆಚಾರ್ಯ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿರುವುದು.