ಮೆಲ್ಬೋರ್ನ್: ಆಸ್ಟ್ರೇಲಿಯಾ ಏಶಿಯಾದ ಬಸವ ಸಮಿತಿಯ ಮೆಲ್ಬೋರ್ನ್ ಘಟಕದಲ್ಲಿ ಹಮ್ಮಿಕೊಂಡ ‘ಮಹಾನ್ ಮಾನವತಾವಾದಿ ಬಸವಣ್ಣ’ ಎಂಬ ವಿಷಯದ ಬಗ್ಗೆ ವಿಶೇಷ ಸಂವಾದ ಕಾರ್ಯಕ್ರಮವು ದಿನಾಂಕ 10-07-2023ರಂದು ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಭಾಗವಹಿಸಿ ಮಾತನಾಡುತ್ತಾ “1999ರ ಏಪ್ರಿಲ್ ತಿಂಗಳಿನಲ್ಲಿ ಮೆಲ್ಬೋರ್ನ್‌ನಲ್ಲಿ ಬಸವ ಸಮಿತಿ ಸ್ಥಾಪನೆಯಾದಾಗ ಡಾ. ಮಲ್ಲಿಕಾರ್ಜುನ ಮಾಲಿ ಪಾಟೀಲ್ ಅವರು ಸಂಸ್ಥಾಪಕ ಅಧ್ಯಕ್ಷರಾಗಿ, ಶ್ರೀ ಗಂಗಾಧರ ಬೇವಿನಕೊಪ್ಪ ಅವರು ಉಪಾಧ್ಯಕ್ಷರಾಗಿ ಘಟಕವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮಹಾನ್ ಮಾನವತಾವಾದಿ ಬಸವಣ್ಣನವರು ಕಾಯಕ ಧರ್ಮದ ತಿರುಳನ್ನು ಮನುಜಕುಲಕ್ಕೆ ತಿಳಿಸಿದ ವಿಶ್ವಮಾನವರು. ಅವರ ತತ್ವಗಳನ್ನು ಕಾಂಗರೂ ನಾಡಿನಲ್ಲಿ ಪಾಲಿಸುತ್ತಿರುವ ಆಸ್ಟ್ರೇಲಿಯನ್ ಏಷಿಯಾ ಬಸವ ಸಮಿತಿಯ ಮೆಲ್ಬೋರ್ನ್ ಘಟಕವು ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದೆ. ಮೆಲ್ಬೋರ್ನ್‌ನಲ್ಲಿರುವ ಬಸವ ಸಮಿತಿಯ ‘ಮಾಹಾಮನೆ’ಯಲ್ಲಿ ನಡೆಯುವ ಚಟುಟಿಕೆಗಳ ಬಗ್ಗೆ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದರು. ಬಸವಣ್ಣನವರ ತತ್ವವನ್ನು ಒಪ್ಪಿಕೊಂಡು ಅದನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಈ ʻಮಹಾಮನೆʼ ಸಾರ್ಥಕತೆ ಮೆರೆಯುತ್ತಿದೆ. ಬಸವಣ್ಣನವರು ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಜಗತ್ತಿಗೆ ಕನ್ನಡಭಾಷೆಯಲ್ಲಿ ತತ್ವಗಳನ್ನು ನೀಡಿದವರು. ಅವರ ವಚನಗಳನ್ನು ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೇಳಿಕೊಡುವ ಮೂಲಕ ಉತ್ತಮ ಕೆಲಸವನ್ನು ಮಾಡಲಾಗುತ್ತಿದೆ”.
ಮೆಲ್ಬೋರ್ನ್ ಕನ್ನಡ ಸಂಘದವರಿಗೆ ಕನ್ನಡ ಭಾಷೆಯನ್ನು ಕಲಿಯುವಲ್ಲಿ ಹಾಗೂ ಅಧ್ಯಯನ ಮಾಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹಾಯ ಮಾಡಬೇಕು. ಬಸವಣ್ಣನವರ ವಚನಗಳಲ್ಲಿ ಬರುವ ಕೆಲವು ಕನ್ನಡ ಪದಗಳು ಅರ್ಥವಾಗದ ಸಂದರ್ಭದಲ್ಲಿ ಅದಕ್ಕೆ ಬೇಕಾದ ಪುಸ್ತಕಗಳನ್ನು ಪರಿಷತ್ತು ಕಲ್ಪಿಸಬೇಕು ಎನ್ನುವ ಬೇಡಿಕೆಗಳನ್ನು ಸಂಘದವರು ಮುಂದಿಟ್ಟರು. ಈ ಬಾರಿ ಮಂಡ್ಯದಲ್ಲಿ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಮೆಲ್ಬೋರ್ನ್ ಬಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಮತ್ತು ಮೆಲ್ಬೋರ್ನ್ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಗೌರವ ಪೂರ್ವಕ ಆಹ್ವಾನವನ್ನು ನೀಡಿದರು. ವಿದೇಶಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರು ಕನ್ನಡದ ಪ್ರೀತಿಯಿಂದ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಬೈಲಹೊಂಗಲದಲ್ಲಿ ‘ರಂಗ ರಸಗ್ರಾಹಿ’ ಶಿಬಿರ