ಬೆಂಗಳೂರು : ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಶಂಪಾ ಪ್ರತಿಷ್ಠಾನ (ರಿ)ದ ವತಿಯಿಂದ ಬೆಂಗಳೂರಿನ ವಿಠ್ಠಲ್ ನಗರ, ಇಸ್ರೋ ಲೇ ಔಟ್ ಸಮೀಪ, 1ನೇ ಮುಖ್ಯ ರಸ್ತೆ, 88/ಎ, ಶ್ರೀ ಸದನದಲ್ಲಿ ದಿನಾಂಕ 16-08-2023ರಂದು ‘ದಾನ ಶೂರ ಕರ್ಣ’ ಎಂಬ ವಿಷಯದಲ್ಲಿ ‘ಗಮಕ ವಾಚನ ಮತ್ತು ವ್ಯಾಖ್ಯಾನ’ ನಡೆಯಲಿದೆ.
ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ.ಎನ್.ಮೂಡಿತ್ತಾಯ, ಚಿತ್ರ ಕಲಾವಿದರಾದ ಶ್ರೀ ಟಿ.ಎನ್.ಶ್ರೀನಿವಾಸಮೂರ್ತಿ ಮತ್ತು ವೈದ್ಯರಾದ ಡಾ.ಸುರೇಶ್ ಎಚ್.ಎಸ್. ಹಾಗೂ ಡಾ.ಶರತ್ ಬಿ.ಎನ್. ಇವರ ಗೌರವ ಉಪಸ್ಥಿತಿಯಲ್ಲಿ ಸುಪ್ರಸಿದ್ಧ ಗಮಕ ಕಲಾವಿದರಾದ ಶ್ರೀಮತಿ ಸಂಧ್ಯಾ ರಮೇಶ್ ವಾಚನ ಹಾಗೂ ಕರ್ನಾಟಕ ಕಲಾಶ್ರೀ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರ ವ್ಯಾಖ್ಯಾನದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಶಂಪಾ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸದಸ್ಯರು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.