ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಆರೋಹಣ’ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ಆಯೋಜಿಸಲಾಗಿದೆ.
ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಇವರು ಅತಿಥಿಯಾಗಿ ಭಾಗವಹಿಸಲಿದ್ದು, ಗಾನ ನೃತ್ಯ ಅಕಾಡೆಮಿಯ ಮಯೂರ ಮತ್ತು ಚಾತುರ ತಂಡಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಹಾಡುಗಾರಿಕೆಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ನಟುವಾಂಗದಲ್ಲಿ ವಿದುಷಿ ರಶ್ಮಿ ಉಡುಪ, ಮೃದಂಗದಲ್ಲಿ ಉಡುಪಿಯ ವಿದ್ವಾನ್ ಬಾಲಚಂದ್ರ ಭಾಗವತ್ ಮತ್ತು ಕೊಳಲಿ ನಲ್ಲಿ ವಿದ್ವಾನ್ ರಾಜಗೋಪಾಲ ಕಂಞಗಾಡ್ ಇವರು ಸಹಕರಿಸಲಿದ್ದಾರೆ.