18 ಫೆಬ್ರವರಿ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜನೆಯಲ್ಲಿ ಸಂತ ಅಲೋಸಿಯಸ್ ಕಾಲೇಜು ಸಮುದಾಯ ಬಾನುಲಿ ರೇಡಿಯೋ ಸಾರಂಗ್ ಸಹಯೋಗದಲ್ಲಿ ಕಾಲೇಜು ಮಟ್ಟದ `ಏಕಾಂಕ ನಾಟಕ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ತುಳುನಾಡಿನ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿರುವ ಉಳ್ಳಾಲದ ಅಬ್ಬಕ್ಕ ರಾಣಿಯ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಐತಿಹಾಸಿಕ ಘಟನೆಗಳ ಮೂಲಕ ಏಕಾಂಕ ನಾಟಕ ಪ್ರದರ್ಶನ ನೀಡಬೇಕು.
ಸ್ಪರ್ಧೆಯ ನಿಯಮಗಳು:
1. ದಿನಾಂಕ 18.03.2023 ಬೆಳಿಗ್ಗೆ 9.3೦ ರಿಂದ
2. ಸ್ಥಳ : ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಎಲ್ .ಸಿ. ಆರ್. ಸಭಾಂಗಣ
3. ಸ್ಪರ್ಧೆಯು ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಕಾಲೇಜುಗಳಿಗೆ ಸೀಮಿತವಾಗಿರುತ್ತದೆ.
4. ನಾಟಕದ ಅವಧಿ 20+5 ಅಂದರೇ 25 ನಿಮಿಷಗಳು .
5. ಭಾಗವಹಿಸುವ ಕಾಲೇಜು ತಂಡಗಳು ಫೆಬ್ರವರಿ 28ರ ಒಳಗೆ ತಮ್ಮ ಕಾಲೇಜಿನ ಪ್ರಾಂಶುಪಾಲರ ಅನುಮತಿ ಪತ್ರದೊಂದಿಗೆ ನೋಂದಾವಣೆ ಮಾಡಿಕೊಳ್ಳಬೇಕು.
6. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದೊಂದಿಗೆ ಪ್ರಮಾಣಪತ್ರ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
7. ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಮಾಣಪತ್ರ ಮತ್ತು ಫಲಕಗಳನ್ನು ನೀಡಲಾಗುವುದು.
8. ತೀರ್ಪುಗಾರರ ತೀರ್ಮಾನವೇ ಅಂತಿಮ.
ಹೆಚ್ಚಿನ ವಿವರಗಳಿಗೆ ಪೀಠದ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ (9845665807) ಮತ್ತು ರೇಡಿಯೋ ಸಾರಂಗ್ ಕಾರ್ಯಕ್ರಮ ಸಂಯೋಜಕರಾದ ಆರ್.ಜೆ. ಅಭಿಷೇಕ್ ಶೆಟ್ಟಿ (9743082922) ಇವರನ್ನು ಸಂಪರ್ಕಿಸಬಹುದು.