“ವಚನ ಸಂಭ್ರಮ ಎಂಬುದು ಜ್ಞಾನ ಕೇಂದ್ರಿತ ಸಂಭ್ರಮ ಇದು ಪ್ರದರ್ಶನಕ್ಕೆ ಸೀಮಿತವಾಗದೆ ಕಡಲಾಚೆವರೆಗೂ ಬೆಳೆಯಲಿ” ಎಂದು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ.)ಇದರ ವಾರ್ಷಿಕೋತ್ಸವ ಎಂಟನೇ ವಚನ ಸಂಭ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಸನ್ಮಾನವನ್ನು ಸ್ವೀಕರಿಸಿದ ಪ್ರೊ.ವಿಜಯಾದೇವಿಯವರು ಸಭೆಯನ್ನುದ್ದೇಶಿಸಿ ಹೇಳಿದರು. ಇವರು ಹಿರಿಯ ಸಾಹಿತಿ ಮತ್ತು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ವಿಜಯಪುರದ ಎಮಿರೀಟಸ್ ಪ್ರಾಧ್ಯಾಪಕರಾಗಿದ್ದಾರೆ.
ದ.ಕ.ಜಿಲ್ಲಾ ಕ. ಸಾ.ಪ., ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್.ರೇವಣ್ಕರ್ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿ, “ಮಹಿಳೆ ಕುಟುಂಬದ ಸಮಾಜದ ಶಕ್ತಿ. 12ನೇ ಶತಮಾನದಲ್ಲಿ ಸಮಾಜ ತಿದ್ದುವ ಕೆಲಸ ಶರಣೆಯರು ಮಾಡಿದ್ದರೆಂದರೆ ಸಾಧನೆ ಮಾಡಿದರೆ ಮಹಿಳೆಯರು ಏನಾದರೂ ಮಾಡಬಹುದು.” ಎಂದರು.
ಮುಖ್ಯ ಅತಿಥಿ ಸ್ಥಾನದಿಂದ ಶ್ರಿಮತಿ ಸುಮಂಗಲ ಮಾತನಾಡಿ “ಎಳವೆಯಲ್ಲಿ ಶಾಲೆಗಳಲ್ಲಿಯೇ ಮಕ್ಕಳಿಗೆ ಆದಷ್ಟು ವಚನಗಳನ್ನು ತಿಳಿಸಿ ಹೇಳುವಂತೆ ಆಗಬೇಕು”ಎಂದರು. ಶ್ರೀಮತಿ ತಬಸುಂ, ವ್ಯವಸ್ಥಾಪಕರು “ಸ್ನೆಹದೀಪ ಆಶ್ರಮ” ಇವ ಸಾಧನೆಗೆ ಇವರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾ ಅರುಣ್ ಮಾನ್ವಿ “12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಶರಣರ ವಚನಗಳ ಸಾರವನ್ನು ದ.ಕ ಜಿಲ್ಲೆಯಲ್ಲಿ ಮನೆ ಮನೆಗೂ ಮುಟ್ಟಿಸುವ ಒಂದು ಅಳಿಲ ಸೇವೆ ನಮ್ಮದು.ಅಂದು ಶರಣರು ಹಾಕಿದ ಭದ್ರವಾದ ಸಾಮಾಜಿಕ ಬದಲಾವಣೆಯ ಅಡಿಪಾಯ ಇಂದು ನಾವು ನೋಡುತ್ತಿದ್ದೇವೆ” ಎಂದರು.
ಇಂಚರ ತಂಡದಿಂದ ಶ್ರೀಮತಿಯರಾದ ಗೀತಾ ಮಲ್ಲ್ಯ, ರತ್ನಾವತಿ ಜೆ. ಬೈಕಾಡಿ, ಜಯಲಕ್ಷ್ಮೀ ಬಾಲಕೃಷ್ಣ ಮತ್ತು ಸಾವಿತ್ರಿ ರಾವ್. ವಿವಿಧ ಶರಣರ ವಚನಗಳ ಗಾಯನ ಮಾಡಿದರು. ಶ್ರೀಮತಿ ಅನುಪಮ ಸ್ವಾಗತಿಸಿ , ನಿರ್ಮಲಾ ಚಂದ್ರಶೇಖರ್ ವಂದಿಸಿದರು. ಶ್ರೀಮತಿ ಸುರೇಖಾ ಎಳವಾರು ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ.)ಇದರ ವಾರ್ಷಿಕೋತ್ಸವ ಎಂಟನೇ ವಚನ ಸಂಭ್ರಮ
Next Article ಅಳಿಯಿತು ಕಾಯ ಉಳಿಯಿತು ಕಂಚಿನ ಕಂಠದ ನಾದ