ನಿವೃತ್ತ ಶಿಕ್ಷಕ, ಖ್ಯಾತ ಗಮಕಿ, ನಾಟಕ, ರೂಪಕಗಳ ಸಂಗೀತ ನಿರ್ದೇಶಕ, ಭಾವಗೀತೆಗಳಿಗೆ ಜೀವ ತುಂಬಿದ ಸರದಾರ, ಸರಳ ಸಜ್ಜನಿಕೆಯ ಕಂಚಿನ ಕಂಠದ ಗಾಯಕ ಶ್ರೀ ಚಂದ್ರಶೇಖರ ಕೆದಿಲಾಯರು 24 ಜನವರಿ 2023ರಂದು ಇಹವನ್ನು ತ್ಯಜಿಸಿದ್ದಾರೆ.
ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಭೇದ ಭಾವವಿಲ್ಲದೆ ಸರ್ವರಿಗೂ ಸಂಗೀತದ ಸ್ವಾದವನ್ನುಣಿಸಿದವರು. ತಮಗೆ ಅರಿವಿಲ್ಲದಂತೆಯೇ ತಮ್ಮ ಸಂಗೀತದ ಮೂಲಕ ಕನ್ನಡ ಭಾಷೆ , ಸಂಸ್ಕೃತಿ ಉಳಿಸಿ, ಮಕ್ಕಳಲ್ಲಿ ದೇಶ ಪ್ರೇಮ ಸ್ಪುರಿಸುವಲ್ಲಿ ಸಹಾಯಕರಾದವರು. “ನೂಲೋಲ್ಯಾಕ ಚೆನ್ನಿ”, “ಅವ್ವ ಹೆಚ್ಚೋ ಅಪ್ಪ ಹೆಚ್ಚೋ “, ಕುಣಿಯೋಣು ಬಾರಾ ಕುಣಿಯೋಣು ಬಾ”, ” ಟೊಂಕದ ಮ್ಯಾಲಾ ಕೈ ಇಟ್ಟು ಕೊಂಡು” ಇತ್ಯಾದಿ ಹಾಡುಗಳಿಂದ ಮಕ್ಕಳ ಮನಸ್ಸನ್ನು ಸೂರೆ ಗೊಂಡವರು. ನೂರಾರು ವಿದ್ಯಾರ್ಥಿ ಶಿಬಿರಗಳಲ್ಲಿ ಪಾಲ್ಗೊಂಡು, ಸಾವಿರಾರು ವಿದ್ಯಾರ್ಥಿಗಳನ್ನು ತಿದ್ದಿ, ಅವರ ಜೀವನಕ್ಕೆ ದೀವಿಗೆಯಾಗಿ ಜೀವನ ಪಾಠ ಕಲಿಸಿದ ಕೆದಿಲಾಯರನ್ನು ಕಳೆದುಕೊಂಡು ಭಾವಗೀತ ಪ್ರಪಂಚ ಬಡವಾಗಿದೆ.
Subscribe to Updates
Get the latest creative news from FooBar about art, design and business.