Subscribe to Updates

    Get the latest creative news from FooBar about art, design and business.

    What's Hot

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಆಳ್ವಾಸ್ ವಿರಾಸತ್ ಮೇಳಗಳ ಉದ್ಘಾಟಿಸಿದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ
    Cultural

    ಆಳ್ವಾಸ್ ವಿರಾಸತ್ ಮೇಳಗಳ ಉದ್ಘಾಟಿಸಿದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ

    December 22, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿದ್ಯಾಗಿರಿ (ಮೂಡುಬಿದಿರೆ):  ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’29ನೇ ಆಳ್ವಾಸ್ ವಿರಾಸತ್’ ಅಂಗವಾಗಿ ಕೃಷಿಸಿರಿ ಆವರಣದಲ್ಲಿ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆದ ನಾಲ್ಕು ದಿನಗಳ ಪ್ರದರ್ಶನ ಹಾಗೂ ಮಹಾಮೇಳವನ್ನು ದಿನಾಂಕ 11-12-2023ರ ಗುರುವಾರದಂದು ಭಾರತ್ ಸ್ಕೌಟ್ಸ್-ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ. ಜಿ. ಆರ್. ಸಿಂಧ್ಯ ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಅವರು “ಲಕ್ಷಾಂತರ ಮಕ್ಕಳನ್ನು ಸತ್ಪ್ರಜೆ ಮಾಡುವ ಆಳ್ವಾಸ್ ವಿರಾಸತ್, ವಿವಿಧ ಮೇಳಗಳ ಮೂಲಕ ಎಲ್ಲರ ಹೃದಯದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ. ಆಳ್ವಾಸ್ ವಿರಾಸತ್ ಇಂದು ರಾಜ್ಯದಾದ್ಯಂತ ಮನೆಮಾತಾಗಿದೆ. ಡಾ.ಎಂ. ಮೋಹನ ಆಳ್ವ ಅವರು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಅದ್ವಿತೀಯ ನಾಯಕರಾಗಿದ್ದಾರೆ. ಪ್ರತಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಅವರ ಗುಣ ಹಾಗೂ ಶೈಕ್ಷಣಿಕ ಬದಲಾವಣೆಗೆ ತ್ವರಿತವಾಗಿ ಸ್ಪಂದಿಸುವ ರೀತಿ ಅನನ್ಯ. ಸ್ಕೌಟ್ಸ್ ಗೈಡ್ಸ್ ಒಳ್ಳೆಯ ವ್ಯಕ್ತಿಗಳನ್ನು ರೂಪಿಸುವ ಅಂತರ ರಾಷ್ಟ್ರೀಯ ಚಳವಳಿ, 200ದೇಶಗಳಲ್ಲಿದೆ. ಜಾಂಬೂರಿ ನಡೆಸುವ ಮೂಲಕ ಆಳ್ವರು ದೇಶಕ್ಕೆ ಹೆಸರು ತಂದರು.” ಎಂದು ಶ್ಲಾಘಿಸಿದರು.

    ಮೂಡುಬಿದಿರೆ ಜೈನ ಮಠದ  ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ “ಮಾರುಕಟ್ಟೆ ಸಿಗದ ಕೃಷಿ ತಲೆ ಇಲ್ಲದ ದೇಹದ ಹಾಗೆ. ನಮ್ಮೆಲ್ಲರಿಗೆ ಬದುಕು ನೀಡುವ ಕೃಷಿಯ ಪರಿಸ್ಥಿತಿ ಇದಾಗಿದೆ. ಸರ್ಕಾರವು ಯುವ ಕೃಷಿಕರಿಗೆ ಶಿಷ್ಯವೇತನ ನೀಡಿ ಬೆಂಬಲಿಸಬೇಕು. ಮಂಗಳೂರು ಸುರಕ್ಷಿತ ನಗರ ಎಂದು ವಿಶ್ವ ಸಂಸ್ಥೆಯ ವರದಿಯೊಂದು ಹೇಳಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಇದು ಹೆಚ್ಚಿನ ಬಲ ನೀಡಿದೆ ಎಂದರು. ಪುತ್ತಿಗೆಯ ಗುಡ್ಡವನ್ನು ಆಳ್ವರು ನಂದನವನ ಮಾಡಿದ್ದಾರೆ. ಇದು ಅವರ ಕರ್ತೃತ್ವ ಶಕ್ತಿ.” ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ “ಮೂಡುಬಿದಿರೆಯ ಸಮಾಜಮಂದಿರದಲ್ಲಿ ಸಣ್ಣದಾಗಿ ಆರಂಭಗೊಂಡ ‘ವಿರಾಸತ್’ ಊರಿನಿಂದ ವಿಶ್ವಕ್ಕೆ ಪಸರಿಸಿದೆ. ನಾಡಿನೆಲ್ಲೆಡೆಯ ಜನ ವಿರಾಸತ್‌ಗಾಗಿ ಕಾಯುತ್ತಾರೆ.” ಎಂದರು.

    ಜಾಗತಿಕ ಪರಿಕಲ್ಪನೆಯ ಪುಷ್ಪಮೇಳ, ಸ್ವಾಸ್ಥ್ಯ ಚಿಂತನೆಯ ಆಹಾರ ಮೇಳ, ಪರಿಸರ ಸಂರಕ್ಷಣೆಯ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ, ಮಕ್ಕಳಿಗೆ ಬಲ ನೀಡುವ ಸಾಹಸಮಯ ಚಟುವಟಿಕೆ ಕೇಂದ್ರ, ಕೃಷಿಕರನ್ನು ಗೌರವಿಸುವ ಕೃಷಿ ಮೇಳಗಳ ಜೊತೆಗೂಡಿ, ಒಟ್ಟು ವಿರಾಸತ್ ಮೂಲಕ ಮನಸ್ಸು ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ಮನೋರಂಜನೆಗಾಗಿ ಮಾತ್ರವಲ್ಲ, ಸಂಸ್ಕೃತಿಯ ಅರಿವು, ಜ್ಞಾನ, ಪಠ್ಯದ ಜೊತೆಗೆ ಬಯಲು ಶಾಲೆ ಕಲ್ಪನೆಯನ್ನು ಒದಗಿಸಿದೆ.” ಎಂದರು.

    ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಕೆ. ಶ್ರೀಪತಿ ಭಟ್, ಮೂಡುಬಿದಿರೆಯ ಎಂ. ಸಿ. ಎಸ್. ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಮೂಡುಬಿದಿರೆ ಎಂ. ಸಿ. ಎಸ್. ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸತೀಶ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ  ಹಿರಿಯ ವಿಜ್ಞಾನಿ ಮತ್ತು  ಮುಖ್ಯಸ್ಥ ಡಾ. ಬಿ. ಧನಂಜಯ್,  ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ,  ನಿವೃತ್ತ ಐ. ಎಫ್. ಎಸ್ ಅಧಿಕಾರಿ, ವನ್ಯಜೀವಿ ಛಾಯಾಗ್ರಾಹಕ ಎನ್. ಜಯಕುಮಾರ್, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಚೌಟರ ಅರಮನೆಯ ಕುಲದೀಪ್ ಎಂ., ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ಮೋಹನ್ ದೇವ ಆಳ್ವ, ಶ್ರೀನಿವಾಸ ಆಳ್ವ ಉಪಸ್ಥಿತರಿದ್ದು, ಕೆ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಡುಬಿದಿರೆ ಎಂ. ಸಿ. ಎಸ್. ಸೊಸೈಟಿ, ರೈತ ಸಂಘಟನೆಗಳು, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಗಳು ಮೇಳಕ್ಕೆ ಸಹಯೋಗ ನೀಡಿವೆ.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಪಾದುಕಾ ಪ್ರದಾನ’ ತಾಳಮದ್ದಳೆ
    Next Article ಕುಡ್ಲದ ತುಳು ಕೂಟ ( ರಿ) ದ ಬಂಗಾರ್ ಪರ್ಬೊ ಸಮಾರೋಪ ಸಮಾರಂಭ | ದಶಂಬರ 30
    roovari

    Add Comment Cancel Reply


    Related Posts

    ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಕನ್ನಡ ನುಡಿ ಸಮ್ಮೇಳನ’ | ಜುಲೈ 12

    July 8, 2026

    ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಲಾಪ್ರಕಾರಗಳ ಉದ್ಘಾಟನೆ

    June 22, 2026

    ಭಾರತೀಯ ವಿದ್ಯಾ ಭವನನಲ್ಲಿ ‘ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ’ | ಜೂನ್ 22ರಿಂದ 25

    June 22, 2026

    ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನ -2026 | ಜೂನ್ 23

    June 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.