ಬೆಂಗಳೂರು : ಜಗದೀಶ ಹೊಸಬಾಳೆ ಮತ್ತು ವಿನಾಯಕ ವಾಜಗದ್ದೆ ಇದರ ಸಂಯೋಜನೆಯಲ್ಲಿ ಕವಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಅಂಬಾ ಶಪಥ’ ತಾಳಮದ್ದಳೆಯು ದಿನಾಂಕ 14-07-2024ರಂದು ಮಧ್ಯಾಹ್ನ 3-15 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾಭವನದಲ್ಲಿ ನಡೆಯಲಿದೆ.
ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ವಾಸುದೇವ ರಂಗ ಭಟ್ಟ, ಸಂಕದಗುಂಡಿ ಗಣಪತಿ ಭಟ್ಟ ಹಾಗೂ ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಅನಂತ ಪದ್ಮನಾಭ ಘಾಟಕ್ ಮತ್ತು ಗಣೇಶ ಗಾಂವ್ಕರ್ ಇವರುಗಳು ಭಾಗವಹಿಸಲಿದ್ದಾರೆ.