ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆ ಇದೀಗ 11ನೇ ವರುಷದ ಸಂಭ್ರಮದಲ್ಲಿದೆ. ಈಗಾಗಲೇ ಹಿರಿಯ ಕಿರಿಯ ಸಾಹಿತಿಗಳ ಕೃತಿಗಳನ್ನು ಪತ್ರಿಕೆ ವತಿಯಿಂದ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಡಿ 41 ಕೃತಿಗಳು ಬಿಡುಗಡೆಗೊಂಡಿವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಾಹಿತ್ಯ ಅಭಿರುಚಿವೆನ್ನುವ ವಿನೂತನ ಕಾರ್ಯಾಕ್ರಮ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಈಗಾಗಲೇ 101 ಯಶಸ್ವಿ ಕಾರ್ಯಯಕ್ರಮ ಮಾಡಿದೆ. ಈ ಕಾರ್ಯರಕ್ರಮ ನಿರಂತರ ಈ ವರುಷವೂ ನಡೆಯಲಿದೆ. ಹಿರಿಯ ಕಿರಿಯ ಸಾಹಿತಿಗಳ ಮನೆಗೆ ತೆರಳಿ, ಗುರುತಿಸಿ, ಗೌರವಿಸುವ ಕಾರ್ಯಕ ನಿರಂತರ ಹತ್ತು ವರುಷದಿಂದ ನಡೆಯುತ್ತಾ ಬಂದಿದೆ. ರಾಜ್ಯ ಮಟ್ಟದ ಲೇಖನ, ಕವನ, ಚುಟುಕು ಸ್ಪರ್ಧೆ ಮಾಡಿ ಬಹುಮಾನ ನೀಡುತ್ತಾ ಬಂದಿದೆ.
ಇದೀಗ ಅಮೃತ ಪ್ರಕಾಶ ಪತ್ರಿಕೆ 11 ವರುಷ ಸವಿ ಸಂಭ್ರಮದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯ ಕ್ರಮ ಮಂಗಳೂರು ಪತ್ರಿಕಾ ಭವನದಲ್ಲಿ ದಿನಾಂಕ 22-07-2024ರಂದು ಬೆಳಗ್ಗೆ 10-30ಕ್ಕೆ ಬಿಡುಗಡೆಗೊಳ್ಳಲಿದೆ. ಕಾರ್ಯಈಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸುವರು. ಅಮೃತ ಪ್ರಕಾಶ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಯನ್ನು ಎಸ್.ವಿ.ಎಸ್. ವೆಂಕಟರಮಣ ದೇಗುಲ ಪದವಿ ಪೂರ್ವ ಕಾಲೇಜ್ ಬಂಟ್ವಾಳ ಪ್ರಾಂಶುಪಾಲರಾದ ಕೆ.ಎನ್. ಗಂಗಾಧರ್ ಆಳ್ವ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಯುಗಪುರುಷ ಪತ್ರಿಕೆ ಕಿನ್ನಿಗೋಳಿ ಇದರ ಸಂಪಾದಕರಾದ ಭುವನಾಭಿರಾಮ ಉಡುಪ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕ ಮಂಡಳಿ, ಸದಸ್ಯರಾದ ಸತ್ಯಪ್ರಕಾಶ ಶೆಟ್ಟಿ, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಕವಯತ್ರಿ ಶಿಕ್ಷಕಿ ಸುರೇಖಾ ಯಾಳವಾರ, ಡಾ. ಅರುಣಾ ನಾಗರಾಜ್ ಉಪಸ್ಥಿತರಿರುವರು.