ಮಂಗಳೂರು : ಪುರಭವನದ ಮಿನಿ ಹಾಲಿನಲ್ಲಿ ದಿನಾಂಕ 03-12-2023ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ 16ನೇ ಮಹಾಸಭೆ ನಡೆಯಿತು. ಚುನಾವಣಾ ಅಧಿಕಾರಿಯಾದ ಅಡ್ವಕೇಟ್ ಸತೀಶ್ ಭಟ್ ಅವರು “ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಒಂದು ಸಕ್ರಿಯ ನಡೆಯ ಸಂಘಟನೆ” ಎಂದು ಅಭಿಪ್ರಾಯ ಪಟ್ಟರು. ವರ್ಷದಲ್ಲಿ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಈ ಸಂಸ್ಥೆಯ ತ್ಯಾಗ ಪೂರ್ಣ ಮತ್ತು ಪಾರದರ್ಶಕ ಕೆಲಸವನ್ನು ಅವರು ಶ್ಲಾಘಿಸಿದರು.
2023-24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್ ನಂತೂರು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ತೋನ್ಸೆ ಪುಷ್ಕಳಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ದೀಪಕ್ ರಾಜ್ ಉಳ್ಳಾಲ್ ವರದಿ ವಾಚಿಸಿದರು. ನಿಕಟ ಪೂರ್ವ ಅಧ್ಯಕ್ಷ ರಮೇಶ್ ಸಾಲ್ಯಾನ್ ಲೆಕ್ಕಪತ್ರ ಮಂಡಿಸಿದರು. ವೇದಿಕೆಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಮುರಳಿಧರ ಕಾಮತ್, ಜಗದೀಶ್ ಶೆಟ್ಟಿ, ರವೀಂದ್ರ ಪ್ರಭು, ಮಹಮ್ಮದ್ ಇಕ್ಬಾಲ್, ಮಲ್ಲಿಕಾ ಶೆಟ್ಟಿ ಭಾಗವಹಿಸಿ ಸಲಹೆ ಸೂಚನೆಗಳನ್ನು ಇತ್ತರು. ಐವನ್ ಡಿಸೋಜ, ಸುಭಾಷಿತ್ ಉಡುಪಿ, ಶ್ರೀನಿವಾಸ್ ಭಾಗವತ್, ಸತೀಶ್, ಹುಸೇನ್ ಕಾಟಿಪಳ್ಳ, ದಿನಕರ ಪಾಂಡೇಶ್ವರ್ ಮತ್ತಿತರ ಹಿರಿಯ ಸದಸ್ಯರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಕೇಶವ ಕನಿಲ ವಂದಿಸಿದರು.