ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ ಇದರ ವತಿಯಿಂದ ‘ವಾರ್ಷಿಕ ಸಂಗೀತ ಉತ್ಸವ 2024’ವನ್ನು ದಿನಾಂಕ 01-09-2024ರಿಂದ 09-09-2024ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಹಾಲ್ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 01 ಸೆಪ್ಟೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ನಾಗೇಶ್ ಬಪ್ಪನಾಡು ಮತ್ತು ತಂಡದವರಿಂದ ನಾಗಸ್ವರ ವಾದನ ಹಾಗೂ ಡಾ. ಬಿಂದಾ ಪಾರಂಜಪೆ ಇವರಿಂದ ತವೈಪ್ ಮತ್ತು ದೇವದಾಸಿಯವರು ಕಲೆಗೆ ನೀಡಿದ ಕೊಡುಗೆಗಳು ಎಂಬ ವಿಷಯದ ಬಗ್ಗೆ ಮಾತುಕತೆ ನಡೆಯಲಿದೆ. ಸಂಜೆ 5-00 ಗಂಟೆಗೆ ಉದ್ಘಾಟನೆ ಹಾಗೂ ರಮಣ ಬಾಲಚಂದ್ರನ್ ಮತ್ತು ಅನಂತ ಆರ್. ಕೃಷ್ಣನ್ ಇವರಿಂದ ವೀಣಾ ವಾದನ, ದಿನಾಂಕ 02 ಸೆಪ್ಟೆಂಬರ್ 2024ರಂದು ಚಾರುಮತಿ ರಘುರಾಮನ್ ಮತ್ತು ಅನಂತ ಆರ್. ಕೃಷ್ಣನ್ ಇವರಿಂದ ವಯೋಲಿನ್ ವಾದನ, ದಿನಾಂಕ 03 ಸೆಪ್ಟೆಂಬರ್ 2024ರಂದು ಸ್ಪೂರ್ತಿ ರಾವ್, ಸಿ.ಎಸ್. ಚಿನ್ಮಯಿ, ಅನೂರ್ ವಿನೋದ್ ಶ್ಯಾಮ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ದಿನಾಂಕ 04 ಸೆಪ್ಟೆಂಬರ್ 2024ರಂದು ಪಾಲ್ ಘಾಟ್ ರಾಮ್ ಪ್ರಸಾದ್, ತ್ರಿವೆಂಡ್ರಮ್ ಸಂಪತ್, ಅರ್ಜುನ್ ಕುಮಾರ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ದಿನಾಂಕ 05 ಸೆಪ್ಟೆಂಬರ್ 2024ರಂದು ಶ್ರೇಯಾ ಕೋಲ್ತಾಯ, ಸ್ಮೃತಿ ಭಾಸ್ಕರ್, ಅತ್ರೇಯಿ ಕೃಷ್ಣ, ಅರ್ಚನಾ, ಅದಿತಿ ಬಿ.ಪಿ. ಸಮಾನ್ವಿ ಇವರ ಹಾಡುಗಾರಿಕೆಗೆ ಶ್ರುತಿ ಸಿ.ವಿ. ವಯೋಲಿನ್, ಅನಿರುದ್ಧ ಭಟ್ ಮೃದಂಗ ಹಾಗೂ ಅನಿಲ್ ಪರಾಶಾರ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 06 ಸೆಪ್ಟೆಂಬರ್ 2024ರಂದು ಶ್ರೀವಲ್ಸನ್ ಮೆನನ್, ಎಡಪಳ್ಳಿ ಅಜಿತ್ ಕುಮಾರ್ ಮತ್ತು ಬಾಲಕೃಷ್ಣ ಕಾಮತ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ದಿನಾಂಕ 07 ಸೆಪ್ಟೆಂಬರ್ 2024ರಂದು ಲತಾಂಗಿಯಲ್ಲಿ ಸತ್ಸಂಗ್ ಭಜನ್ಸ್, ದಿನಾಂಕ 08 ಸೆಪ್ಟೆಂಬರ್ 2024ರಂದು ಡಾ. ಶ್ರೀರಾಮ್ ಪರಶುರಾಮ ಇವರು ಗಾಯಕ ಮತ್ತು ವಾದ್ಯ ಕುರಿತು ಉಪನ್ಯಾಸ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಬಳಿಕ ಎಸ್. ಸ್ವರಾತ್ಮಿಕ, ಶ್ರೀಲಕ್ಷ್ಮಿ ಎಸ್. ಭಟ್ ಮತ್ತು ಸುನಾದ ಕೃಷ್ಣ ಅಮೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ದಿನಾಂಕ 09 ಸೆಪ್ಟೆಂಬರ್ 2024ರಂದು ಜೆ.ಬಿ. ಶ್ರುತಿ ಸಾಗರ, ಕೇಶವ ಮೋಹನ್ ಕುಮಾರ್ ಮತ್ತು ಬಿ.ಸಿ. ಮಂಜನಾಥ್ ಇವರಿಂದ ಕೊಳಲು ವಾದನ ಪ್ರಸ್ತುತಗೊಳ್ಳಲಿದೆ.