ಕಾಸರಗೋಡು : ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ‘ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್’ 2001ರಲ್ಲಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದು 25 ವರ್ಷ ಪೂರೈಸುತ್ತಿದೆ. ಈಗಾಗಲೇ ಆರು ಬಾರಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿರುತ್ತದೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ಬೆಳ್ಳಿ ಹಬ್ಬ ವರ್ಷಾಚರಣೆ ಸಂಭ್ರಮಕ್ಕೆ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಸ್ಥಾಪಕರಾದ ರಾಜ್ಯ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಇವರು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಸಮಗ್ರ ಸಾಧನೆ, ಕಾರ್ಯ ಚಟುವಟಿಕೆಗೆ ವಾರ್ಷಿಕ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿ ಪ್ರೋತ್ಸಾಹಿಸಲಾಗುವುದೆಂದು ಘೋಷಿಸಿದ್ದಾರೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ಬೆಳ್ಳಿ ಹಬ್ಬ ವರ್ಷಾಚರಣೆಯ ಸಂದರ್ಭದ ನೆನಪಿಗಾಗಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು ಹೊಸದುರ್ಗ ಉದುಮ ಹಾಗೂ ಇತರ ಭಾಗಗಳಲ್ಲಿ ತಾಲೂಕು ಘಟಕವನ್ನು ರಚಿಸಿ ನೂತನ ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಎಲ್ಲಾ ತಾಲೂಕು ಘಟಕದ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾರ್ಥಮಿಕ ಶಾಲೆ, ಹೈಸ್ಕೂಲ್, ಮಟ್ಟದಲ್ಲಿ ಇರುವ ಶಾಲೆಗಳನ್ನು ಕೇಂದ್ರೀಕರಿಸಿ 25 ಗ್ರಾಮ ಪಂಚಾಯತ್ ಮಟ್ಟದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗ್ರಾಮ ಪಂಚಾಯತು ಘಟಕವನ್ನು ಶೀಘ್ರದಲ್ಲೇ ರೂಪಿಸಲಾಗುವುದು.
ಆಯಾಯ ತಾಲೂಕು, ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಕನ್ನಡಪರ ಸಂಘ, ಸಂಸ್ಥೆಗಳು, ರಚನಾತ್ಮಕವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿರುವ ಕನ್ನಡ ಸಂಘಟಕರು ಹಾಗೂ ಚುಟುಕು ಕವಿಗಳು, ಕವಯತ್ರಿಯರು, ಅಧ್ಯಾಪಕರು, ವಿದ್ಯಾರ್ಥಿಗಳು, ಸಾಹಿತಿಗಳು, ಲೇಖಕರು, ಮಾಧ್ಯಮದವರು, ಸಾಹಿತ್ಯ ಪೋಷಕರು ದಾನಿಗಳನ್ನೊಳಗೊಂಡು ತಲಾ 25 ಸದಸ್ಯರನ್ನು ಗುರುತಿಸಿ, ಮನವರಿಕೆ ಮಾಡಿ, ಅವರ ಒಪ್ಪಿಗೆಯನ್ನು ಪಡೆದು ಚುಟುಕು ಸಾಹಿತ್ಯ ಪರಿಷತ್ ಗ್ರಾಮ ಪಂಚಾಯತು ಘಟಕ ಎಂದು ನಮೂದಿಸಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡಿನ ಪ್ರತಿ, ಎರಡು ಪಾಸ್ ಪೋರ್ಟ್ ಗಾತ್ರದ ಭಾವಚಿತ್ರವನ್ನು ಸಂಗ್ರಹಿಸಿ ದಿನಾಂಕ 31 ಜನವರಿ 2025ರ ಒಳಗಾಗಿ ಕಳುಹಿಸಲು ಕೋರಲಾಗಿದೆ.
ಕಾಸರಗೋಡು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಚು.ಸಾ.ಪ. ತಾಲೂಕು ಘಟಕ ಹಾಗೂ ಚು.ಸಾ.ಪ. ಗ್ರಾಮ ಪಂಚಾಯತು ಘಟಕವನ್ನು ರೂಪಿಸಿ, ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಕಾಸರಗೋಡು ಕನ್ನಡ ಗ್ರಾಮದಲ್ಲಿ 27 ಮಾರ್ಚ್ 2025ರಂದು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ಚುಟುಕುಗಳನ್ನು ವಾಚಿಸಲು ಇಚ್ಚಿಸುವ ಚುಟುಕು ಕವಿಗಳು ನಾಲ್ಕು ಸಾಲಿನ ಮೂರು ಚುಟುಕುಗಳನ್ನು ಬಿಳಿ ಕಾಗದದಲ್ಲಿ ಬರೆದು ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ 28 ಫೆಬ್ರವರಿ 2025ರ ಒಳಗಾಗಿ ಅಂಚೆ ಮೂಲಕ ಕಳುಹಿಸಬೇಕು.
ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಸಾಧಕರಿಗೆ ‘ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ’ ಹಾಗೂ ಮಾಧ್ಯಮ ಕ್ಷೇತ್ರದ ಸಾಧಕರಿಗೆ ‘ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಾಧ್ಯಮ ಪ್ರಶಸ್ತಿ’ ಪ್ರಧಾನ ಮಾಡಲಾಗುವುದು.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ಬೆಳ್ಳಿ ಹಬ್ಬ ವರ್ಷಾಚರಣೆಯ ನೆನಪಿಗಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಕೇರಳ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯದ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 250 ಚುಟುಕು ಕವಿಗಳು, ಜಿಲ್ಲಾ, ತಾಲೂಕು ಚು.ಸಾ.ಪ. ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಆಗಮಿಸಲಿದ್ದಾರೆ.
ಸಂಪರ್ಕ ವಿಳಾಸ : ಶಿವರಾಮ ಕಾಸರಗೋಡು ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ ಕಾಸರಗೋಡು-671121, ಮೊಬೈಲ್ : 9448572016.