Subscribe to Updates

    Get the latest creative news from FooBar about art, design and business.

    What's Hot

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ಶಿರಸಿಯ ರಂಗಧಾಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 01

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡ ‘ಅರದರ್ ಬಿರದೆರ್’ ಕೃತಿ
    Book Release

    ಮಂಗಳೂರಿನ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡ ‘ಅರದರ್ ಬಿರದೆರ್’ ಕೃತಿ

    January 16, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಬಂಟ್ವಾಳದ ಯುವ ಸಾಹಿತಿ ದಾ. ನಾ. ಉಮಾಣ್ಣ ಇವರ ಜಾನಪದ ಅಧ್ಯಯನ ಕೃತಿ ‘ಅರದರ್ ಬಿರದೆರ್’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 16 ಜನವರಿ 2025ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡಿತು.

    ಸಮಾರಂಭದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಕವಿ, ಸಾಹಿತಿ ಮತ್ತು ವಿದ್ವಾಂಸರಾದ ಡಾ. ವಸಂತಕುಮಾರ ಪೆರ್ಲ ಮಾತನಾಡಿ “ತುಳು ಜಾನಪದ ಕ್ಷೇತ್ರವು ಅಕ್ಷಯವಾದ ಗಣಿ ಇದ್ದಂತೆ. ಜಾನಪದ ಕ್ಷೇತ್ರದಲ್ಲಿ ಸಂಸ್ಕೃತಿ ಅಧ್ಯಯನ ಮಾಡುವವರಿಗೆ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಬಹುಮುಖಿಯಾದ ವಸ್ತುವಿಷಯಗಳಿವೆ. ತುಳು ಪಾಡ್ದನದಲ್ಲಿ ಬರುವಂತೆ ‘ಅರದರ್ ಬಿರದೆರ್ ವರದರ್’ ಎಂದರೆ ಪಾಂಡವರು ಕೌರವರು ಮತ್ತು ಯಾದವರು. ಯಾದವರ ಪತನದ ಬಳಿಕ ಕೃಷ್ಣನು ಅಳಿದುಳಿದ ಕೊನೆಯ ಒಬ್ಬ ಪುರುಷನಿಗೆ ಮಹಾಭಾರತ ಕಥೆಯನ್ನು ಬರೆದಿಡುವಂತೆ ಹೇಳುತ್ತಾನೆ. ಅದರಂತೆ ಆತ ಬರೆದ ಕಥೆ ಪಾಡ್ದನದಲ್ಲಿ ವರ್ಣಿತವಾಗಿದೆ. ಇದೊಂದು ಅತ್ಯಂತ ವಿಶಿಷ್ಟವಾದ ಪಾಡ್ದನ. ಮಹಾಭಾರತದ ಬಗ್ಗೆ ಜನಪದರ ದೃಷ್ಟಿ ಇದರಲ್ಲಿ ಕಂಡುಬರುತ್ತದೆ. ಅದಕ್ಕೆ ಉಮಾಣ್ಣ ಅವರು ಅರ್ಥವಿವರಣೆಯನ್ನೂ ನೀಡಿದ್ದಾರೆ. ತುಳುನಾಡಿನ ಅಪರೂಪದ ಇತರ ಹಲವಾರು ಜಾನಪದ ವಿಷಯಗಳನ್ನು ಕೈಗೆತ್ತಿಕೊಂಡು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಕೃತಿಕಾರರು ನಲಿಕೆ ಜನಾಂಗಕ್ಕೆ ಸೇರಿದವರಾಗಿರುವುದರಿಂದ ಬರವಣಿಗೆಗೆ ಅಧಿಕೃತತೆ ಪ್ರಾಪ್ತವಾಗಿದೆ” ಎಂದು ಹೇಳಿದರು.

    ಕೃತಿ ಪರಿಚಯಿಸಿದ ಯುವ ಸಾಹಿತಿ ರಘು ಇಡ್ಕಿದು “ಇಲ್ಲಿನ ಹಲವು ಪಾಡ್ದನಗಳು ಈ ಹಿಂದೆ ಸಂಗ್ರಹಗೊಂಡವೇ ಆದರೂ ಅರ್ಥ ವಿವರಣೆಯಲ್ಲಿ ವಿನೂತನತೆ ಇದೆ. ಇದುವರೆಗೆ ಯಾರೂ ಹೇಳಿರದ ಹೊಸ ವಿವರಣೆ ಮತ್ತು ಅರ್ಥಗಳು ಈ ಕೃತಿಯಲ್ಲಿ ಕಂಡು ಬರುತ್ತದೆ. ಪಾಡ್ದನಗಳಲ್ಲದೆ ಜನಪದರ ನಿತ್ಯಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳು ಇಲ್ಲಿ ಸಂಗ್ರಹಗೊಂಡಿವೆ” ಎಂದರು. ಕವಿ ಬರಹಗಾರ ಎನ್. ಸುಬ್ರಾಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರರ ಪತ್ನಿ ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು.

    ಈ ಕೃತಿಯ ಮುಖಬೆಲೆ ರೂಪಾಯಿ 200ಆಗಿದ್ದು, ಆಸಕ್ತರು ಮಂಗಳೂರಿನ ‘ಆಕೃತಿ ಆಶಯ’ ಪಬ್ಲಿಕೇಷನ್ಸ್ ಅಥವಾ ಲೇಖಕ ದಾ. ನಾ. ಉಮಾಣ್ಣ – 9449903215 ಇವರನ್ನು ಸಂಪರ್ಕಿಸಬಹುದು.

    Book release Literature Tulu writer
    Share. Facebook Twitter Pinterest LinkedIn Tumblr WhatsApp Email
    Previous Articleಬಂಟ್ವಾಳದಲ್ಲಿ ‘ಸುವರ್ಣ ಸರಪಾಡಿ’ ಯಕ್ಷಪಯಣದ 50ರ ಸಂಭ್ರಮ
    Next Article ವಿಶೇಷ ಲೇಖನ – ವೈಜ್ಞಾನಿಕ ಕನ್ನಡ ಸಾಹಿತ್ಯದ ಅಧಿಕೃತ ಜನಕ ಪ್ರೊ. ರಾಜಶೇಖರ ಭೂಸನೂರಮಠ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಮೈಸೂರಿನಲ್ಲಿ ಸಿತಾರ್ ವಾದನ, ಪುಸ್ತಕ ಲೋಕಾರ್ಪಣೆ ಮತ್ತು ಸಿತಾರ್ ತರಗತಿಗಳ ಪ್ರಾರಂಭೋತ್ಸವ | ಮೇ 31

    May 30, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.