Subscribe to Updates

    Get the latest creative news from FooBar about art, design and business.

    What's Hot

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಕರ್ಮಿ ಆಸಿಫ್ ಕ್ಷತ್ರಿಯ ಇವರಿಗೆ 2024ನೇ ಸಾಲಿನ ‘ಅರೆಹೊಳೆ ರಂಗ ಭೂಮಿ ಪುರಸ್ಕಾರ’
    Awards

    ರಂಗಕರ್ಮಿ ಆಸಿಫ್ ಕ್ಷತ್ರಿಯ ಇವರಿಗೆ 2024ನೇ ಸಾಲಿನ ‘ಅರೆಹೊಳೆ ರಂಗ ಭೂಮಿ ಪುರಸ್ಕಾರ’

    March 21, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ರಂಗಭೂಮಿ ಕಲಾವಿದ, ರಂಗಕರ್ಮಿಗಳಿಗೆ ನೀಡುವ, ಅರೆಹೊಳೆ ಪ್ರತಿಷ್ಠಾನದ ‘ಅರೆಹೊಳೆ ರಂಗ ಭೂಮಿ ಪುರಸ್ಕಾರ’ದ 2024ನೇ ಸಾಲಿನ ಪ್ರಶಸ್ತಿಗೆ ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ, ನಿರ್ದೇಶಕ ಆಸಿಫ್ ಕ್ಷತ್ರಿಯ ಆಯ್ಕೆಯಾಗಿದ್ದಾರೆ.
    ಬೆಂಗಳೂರಿನ ಆಸಿಫ್ ಕ್ಷತ್ರಿಯ ಈಗಾಗಲೇ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದು, ನಾನಾ ದಿಗ್ಗಜ ಸಿನಿಮಾ ಕಲಾವಿದರೊಂದಿಗೆ ಅನೇಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲೂ ನಾಟಕ ನಿರ್ದೇಶಿಸಿರುವ ಇವರು, ಕನ್ನಡದ ಅನೇಕ ರಂಗ ಕೃತಿಗಳಿಗೆ ತಮ್ಮದೇ ಸ್ಪರ್ಶ ಮೂಲಕ, ವಿಭಿನ್ನ ಆಯಾಮದ ನಾಟಕಗಳನ್ನು ಕಟ್ಟಿಕೊಟ್ಟಿದ್ದಾರೆ.
    ಬೆಂಗಳೂರಿನಲ್ಲಿ ‘ರಂಗರಥ ಟ್ರಸ್ಟ್’ ಎಂಬ ಭಾರತೀಯ ಕಲೆಗಳ ಪ್ರದರ್ಶನ ತಂಡದ ಮೂಲಕ, ರಂಗ ಶಿಬಿರ, ಪ್ರದರ್ಶನಗಳನ್ನು ನೀಡುತ್ತಾ, ಅನೇಕ ಯುವ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುತ್ತಿದ್ದಾರೆ. ಇವರ ರಂಗಭೂಮಿಯ ಒಟ್ಟು ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯು ರೂಪಾಯಿ 10 ಸಾವಿರ ನಗದು ಹಾಗೂ ಫಲಕಗಳನ್ನೊಳಗೊಂಡಿದೆ.
    ದಿನಾಂಕ 27 ಮಾರ್ಚ್ 2025 ರಂದು ಮಂಗಳೂರಿನ ಬೋಂದೆಲ್‌ನಲ್ಲಿ ಅರೆಹೊಳೆ ಪ್ರತಿಷ್ಠಾನ ಆಯೋಜಿಸುವ 10ನೇ ವರ್ಷದ ರಾಜ್ಯ ಮಟ್ಟದ ನಾಟಕೋತ್ಸವದ ಆರಂಭದಂದು, ನೂತನವಾಗಿ ಲೋಕಾರ್ಪಣೆಗೊಳ್ಳಲಿರುವ ಕಲಾಗ್ರಾಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
    ನಾಟಕೋತ್ಸವಕ್ಕೆ ಕಲಾಭಿ, ಅಸ್ತಿತ್ವ ಹಾಗೂ ಆಯನ ನಾಟಕದ ಮನೆಯ ಸಹಯೋಗವಿದ್ದು, ಮಾರ್ಚ್ 27ರಿಂದ 31 ರ ತನಕ ಈ ನಾಟಕೋತ್ಸವ ನಡೆಯಲಿದೆ.

    award baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Article’ಮಹಾರಾಷ್ಟ್ರ ಭೂಷಣ’ ಪ್ರಶಸ್ತಿಗೆ ಹಿರಿಯ ಶಿಲ್ಪಿ,ಶತಾಯುಷಿ ರಾಮ ಸುತಾರ್ ಆಯ್ಕೆ
    Next Article ಅಭಿನಯ ಸರಸ್ವತಿ ಪ್ರಿಯಾ ಸರೋಜಾ ದೇವಿಗೆ “ಮಲಬಾರ್ ವಿಶ್ವರಂಗ ಪುರಸ್ಕಾರ 2025.”
    roovari

    Add Comment Cancel Reply


    Related Posts

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿಯವರಿಗೆ ಗೃಹ ಸನ್ಮಾನ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.