Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮಾಸಿಕ ಕೂಟ

    May 21, 2025

    ವಿನಮ್ರ ಇಡ್ಕಿದು ಹಾಡಿದ ದೃಶ್ಯ ಗೀತೆಗಳು ಬಿಡುಗಡೆ ಕಾರ್ಯಕ್ರಮ

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಭರತನಾಟ್ಯ ಕಲಾವಿದೆ ಆಸ್ತಿಕಾ ಸುನಿಲ್ ಶೆಟ್ಟಿ ಇನ್ನಿಲ್ಲ
    News

    ಭರತನಾಟ್ಯ ಕಲಾವಿದೆ ಆಸ್ತಿಕಾ ಸುನಿಲ್ ಶೆಟ್ಟಿ ಇನ್ನಿಲ್ಲ

    March 10, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    0 ಮಾರ್ಚ್ 2023, ಪುತ್ತೂರು: ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ ಅವರು ಅನಾರೋಗ್ಯದಿಂದ ಮಂಗಳವಾರ 07-03-2023ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.
    ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಸಮೀಪದ ಪದಡ್ಕದಲ್ಲಿ ವಿಶ್ವ ಕಲಾನಿಕೇತನ ಸಂಸ್ಥೆಯನ್ನು ನಡೆಸುತ್ತಿದ್ದ ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ-ನಯನಾ ವಿ. ರೈ ದಂಪತಿಯ ಕಿರಿಯ ಪುತ್ರಿ ಆಸ್ತಿಕಾ ರೈ. ಇವರು ವಿಶ್ವ ಕಲಾನಿಕೇತನದಲ್ಲಿ ಕಲಿತು ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಪಳಗಿದ್ದರು.
    ಎಳೆಯ ಪ್ರಾಯದಲ್ಲಿಯೇ ತಂದೆ ತಾಯಿಯ ನೃತ್ಯ ಗರಡಿಯಲ್ಲಿ ಪಳಗಿದ ಆಸ್ತಿಕಾ ಒಂದು ಕಲಾ ಕುಟುಂಬದಲ್ಲಿ ಜನಿಸಿದ ಕಲಾವಿದೆಯಾಗಿ ಸುದೀರ್ಘ ಕಾಲ ಕಲಾಸರಸ್ವತಿಯನ್ನು ಆರಾಧಿಸುತ್ತಾ ಬಂದು ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿದ್ದವರು. ವಿವಾಹದ ಬಳಿಕ ಬಹರೈನ್ ನಲ್ಲಿ ಪತಿಯ ಜೊತೆ ನೆಲೆಸಿ ಇಲ್ಲಿಯ ಕಲೆಯನ್ನು ಅಲ್ಲಿ ಪರಿಚಯಿಸಿದರು. ಬಹರೈನ್ ಯಕ್ಷಗಾನ ರಂಗದಲ್ಲಿ ಅವರು ಸುಧನ್ವ ಮೋಕ್ಷದ ಕೃಷ್ಣನಾಗಿ, ಕೋಟಿ-ಚೆನ್ನಯದ ಕಿನ್ನಿದಾರುವಾಗಿ, ಶಾಂಭವಿ ವಿಲಾಸದ ಶಾಂಭವಿ ಇತ್ಯಾದಿ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿ ಜನಮನ ರಂಜಿಸಿದ್ದರು. ಇವರ ಮಾವ ವಿನೋದ್ ಆಳ್ವಾ ಕನ್ನಡ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಳ್ಳಾಲ ತಾಲೂಕು ಸಾಹಿತ್ಯ ಸಮ್ಮೇಳನ : ಶ್ಯಾಮಲಾ ಮಾಧವ ಅಧ್ಯಕ್ಷತೆ
    Next Article ಪುತ್ತೂರಿನಲ್ಲಿ “ಅತಿಕಾಯ ಕಾಳಗ” ಯಕ್ಷಗಾನ ತಾಳಮದ್ದಳೆ
    roovari

    Add Comment Cancel Reply


    Related Posts

    “Sri Krishna Leela Amrutham” Transcends audiences at Bharat Nritya Utsav 2025, Chennai

    February 5, 2025

    ಮಂಗಳೂರಿನಲ್ಲಿ ಗಾಯಕಿ ಸೂರ್ಯಗಾಯತ್ರಿ ‘ರಾಮಂ ಭಜೇ’ | ಜ. 12ರಂದು

    January 11, 2025

    ಮಂಗಳೂರಿನ ಪುರಭವನದಲ್ಲಿ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ | ಜನವರಿ 04

    December 31, 2024

    ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ  

    October 21, 2024

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.