ಉಡುಪಿ : ಹಿರಿಯ ಕಲಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಇವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಿ ಅಕಾಡೆಮಿ ಆದೇಶ ಹೊರಡಿಸಿದೆ. ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಆಸ್ಟ್ರೋ ಮೋಹನ್ ಕಳೆದ ಮೂರುವರೆ ದಶಕಗಳಿಂದ ಸುದ್ದಿ ಹಾಗೂ ಕಲಾತ್ಮಕ ಛಾಯಾಗ್ರಹಣದಲ್ಲಿ ಸುಪ್ರಸಿದ್ಧರು. ಸುಮಾರು 750ಕ್ಕೂ ಅಧಿಕ ರಾಷ್ಟ್ರೀಯ-ಅಂತಾರಾಷ್ಟೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಉಡುಪಿ – ಮಣಿಪಾಲ ಕುರಿತಂತೆ ಐದು, ಪೇಜಾವರ ಶ್ರೀ ಹಾಗೂ ಪತ್ರಿಕಾ ಛಾಯಾಗ್ರಹಣ ಕುರಿತಂತೆ ಎಂಟು ಪುಸ್ತಕಗಳು ಪ್ರಕಟವಾಗಿವೆ. ಆಂಧ್ರಪ್ರದೇಶ ಫೋಟೋಗ್ರಫಿ ಅಕಾಡೆಮಿಯೂ ಇವರ ಕೃತಿಗಳ ಕುರಿತಾಗಿ ಪುಸ್ತಕವನ್ನು ಪ್ರಕಟಿಸಿದೆ. ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕ ಸಂಸ್ಥೆಯು ಆಸ್ಟ್ರೋ ಮೋಹನ್ ಇವರನ್ನು ಅಸಿಸ್ಟೆಂಟ್ ಕಂಟ್ರಿ ಮೆಂಬರ್ಶಿಪ್ ಡೈರೆಕ್ಟರ್ ಆಗಿ ಆಯ್ಕೆಮಾಡಿಕೊಂಡಿದೆ.
Subscribe to Updates
Get the latest creative news from FooBar about art, design and business.
ಆಸ್ಟ್ರೋ ಮೋಹನ್ ಇವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ
No Comments1 Min Read
Previous Articleಕ.ಸಾ.ಪ.ದಿಂದ ‘ಜಿಲ್ಲಾ ಮಟ್ಟದ ಯುಗಾದಿ ಕವಿಗೋಷ್ಠಿ -2025’ | ಏಪ್ರಿಲ್ 06
