Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ | ಮಾರ್ಚ್ 01ರಿಂದ 08
    Felicitation

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ | ಮಾರ್ಚ್ 01ರಿಂದ 08

    February 25, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ ಇದರ ಆಶ್ರಯದಲ್ಲಿ ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮವನ್ನು ದಿನಾಂಕ 01ರಿಂದ 08 ಮಾರ್ಚ್ 2026ರವರೆಗೆ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಆವರಣದಲ್ಲಿರುವ ಶ್ರೀಮತಿ ಲೀಲಾವತಿ ಬೈಪಡಿತ್ತಾಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದಾರೆ.

    ದಿನಾಂಕ 01 ಮಾರ್ಚ್ 2026ರಂದು ಅಪರಾಹ್ನ 2-00 ಗಂಟೆಗೆ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಗೀತಾ ಲಕ್ಷ್ಮೀಶ್ ಇವರ ಅಧ್ಯಕ್ಷತೆಯಲ್ಲಿ ಭಾರತ ಮಾತ ಪೂಜನಾ ಕಾರ್ಯಕ್ರಮದೊಂದಿಗೆ ಚಾಲನೆ ದೊರೆಯಲಿದೆ. ಗಾನಗಂಗೋತ್ರಿ ಸಂಗೀತ ಶಾಲೆಯ ಶ್ರೀಮತಿ ರಶ್ಮಿ ರವಿ ಕುಮಾರ್ ಇವರ ಶಿಷ್ಯ ವೃಂದದವರಿಂದ ವಂದೇ ಮಾತರಂ ಗೀತಾ ಗಾಯನ ಮತ್ತು ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಕಲಾವಿದರಿಂದ ಮಧುಸೂದನ್ ಅಲೆವೂರಾಯ ವರ್ಕಾಡಿ ಇವರ ನಿರ್ದೇಶನದಲ್ಲಿ ‘ಸುದರ್ಶನ ಗರ್ವಭಂಗ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸಂಜೆ 5-00 ಗಂಟೆಗೆ ಬಾಲಕೃಷ್ಣ ಕೊಟ್ಟಾರಿ ಇವರ ಅಧ್ಯಕ್ಷತೆಯಲ್ಲಿ ಉದ್ಘಟನ ಸಮಾರಂಭ ನಡೆಯಲಿದೆ. 6-00 ಗಂಟೆಗೆ ಮಂಗಳೂರು ಕದ್ರಿ ಯಕ್ಷ ಮಂಜುಳಾ ಮಹಿಳಾ ತಂಡದವರಿಂದ ರವಿ ಅಲೆವೂರಾಯ ವರ್ಕಾಡಿ ಇವರ ನಿರ್ದೇಶನದಲ್ಲಿ ‘ಇಂದ್ರಜಿತು ಕಾಳಗ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

    ದಿನಾಂಕ 02 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಶ್ರೀ ದುರ್ಗಾಪದಮೇಶ್ವರಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷರಾದ ಲಕ್ಷ್ಮಣ್ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ 6-00 ಗಂಟೆಗೆ ಕಾರಿಂಜ ಯಕ್ಷಾವಾಸ್ಯಮ್ (ರಿ.) ತಂಡದ ಸದಸ್ಯರಿಂದ ‘ಇಂದ್ರ ಕೀಲಕ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

    ದಿನಾಂಕ 03 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಖ್ಯಾತ ನಿರೂಪಕ ಕದ್ರಿ ನವನೀತ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ 6-00 ಗಂಟೆಗೆ ಸುರತ್ಕಲ್ ಯಕ್ಷ ಕಲಾ ಮಹಿಳಾ ತಂಡದ ಸದಸ್ಯರಿಂದ ‘ಕದಂಬ ಕೌಶಿಕೆ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

    ದಿನಾಂಕ 04 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಗುತ್ತಿಗೆದಾರರಾದ ಮಹಾಬಲ ಕೊಟ್ಟಾರಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ 6-00 ಗಂಟೆಗೆ ತಳಪಾಡಿ ಯಕ್ಷ ಸಿಂಧೂರ ಮಹಿಳಾ ಯಕ್ಷಗಾನ ಕೂಟದ ಸದಸ್ಯರಿಂದ ‘ಭಕ್ತ ಸುಧನ್ವ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

    ದಿನಾಂಕ 05 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಆರತಿ ಆಳ್ವ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ 6-00 ಗಂಟೆಗೆ ಅಶೋಕ ನಗರ ಶ್ರೀ ಭ್ರಾಮರಿ ಮಹಿಳಾ ಕಲಾವೃಂದದ ಸದಸ್ಯರಿಂದ ‘ಸುದರ್ಶನ ವಿಜಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

    ದಿನಾಂಕ 06 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಮಾಜಿ ಸಚಿವರಾದ ಬಿ. ನಾಗರಾಜ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ 6-00 ಗಂಟೆಗೆ ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ಭಾಸ್ಕರ ಬಾರ್ಯ ಇವರ ನಿರ್ದೇಶನದಲ್ಲಿ ‘ಶ್ಯಮಂತಕ ಮಣಿ, ಜಾಂಬವತಿ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

    ದಿನಾಂಕ 07 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಸಹಾಯಕ ಪೊಲೀಸ್ ಆಯುಕ್ತರು ಶ್ರೀಮತಿ ಗೀತಾ ಕುಲಕರ್ಣಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ 6-00 ಗಂಟೆಗೆ ಮಂಗಳೂರು ಕೋಡಿಕಲ್ ಸರಯೂ ಮಹಿಳಾ ವೃಂದದ ಸದಸ್ಯರಿಂದ ರವಿ ಅಲೆವೂರಾಯ ವರ್ಕಾಡಿ ಇವರ ನಿರ್ದೇಶನದಲ್ಲಿ ‘ಶ್ರೀ ಏಕಾದಶಿ ದೇವಿ ಮಹಾತ್ಮೆ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

    ದಿನಾಂಕ 08 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಕಲಾ ಪೋಷಕರಾದ ಶ್ರೀಮತಿ ಆಶಾ ಪ್ರಭಾಕರ ರಾವ್ ಆರೂರು ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ 6-00 ಗಂಟೆಗೆ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಕಲಾವಿದರಿಂದ ಮಧುಸೂದನ್ ಅಲೆವೂರಾಯ ವರ್ಕಾಡಿ ಇವರ ನಿರ್ದೇಶನದಲ್ಲಿ ‘ಗಿರಿಜಾ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಇದೇ ಸಂದರ್ಭದಲ್ಲಿ ನೃತ್ಯ ಗುರು ವಿದುಷಿ ಸೌಮ್ಯ ಸುಧೀಂದ್ರ ರಾವ್ ಮತ್ತು ಯಕ್ಷಗಾನ ಕಲಾವಿದೆ ಶ್ರೀಮತಿ ಯೋಗಾಕ್ಷಿ ಗಣೇಶ್ ತಲಕಳ ಇವರನ್ನು ಸನ್ಮಾನಿಸಲಾಗುವುದು.

    baikady felicitation roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01
    Next Article ಮಂಗಳೂರು ವಿ.ವಿ.ಯ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರಕಟ
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.