ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದೆ. 2025 ಜನವರಿ 1ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು, ಪ್ರಕಾಶಕರು ಕಳಿಸಿಕೊಡಬಹುದಾಗಿದೆ. 2025ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 55 ದತ್ತಿ ಪುಸ್ತಕಗಳಿಗೆ ವಿವಿಧ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದು, ಇದಕ್ಕಾಗಿ 59 ವಿವಿಧ ಪ್ರಕಾರಗಳ ಪುಸ್ತಕ ಆಹ್ವಾನಿಸಲಾಗಿದೆ.
