Subscribe to Updates
Get the latest creative news from FooBar about art, design and business.
Author: roovari
ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವರ ಸಹಕಾರದಲ್ಲಿ ನಾಟಕ ಪ್ರದರ್ಶನವನ್ನು ದಿನಾಂಕ 08 ಜುಲೈ 2025ರಂದು ಸಂಜೆ 7-00 ಗಂಟೆಗೆ ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು (ರಿ.) ಇದರ ಜನಮನದಾಟ ಕಲಾವಿದರು ಅಭಿನಯಿಸುವ ರಂಜಿತ್ ಶೆಟ್ಟಿ ಕುಕ್ಕಡೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ‘ಮಾಯಾಮೃಗ’ ಮತ್ತು ಡಾ. ಎಂ. ಗಣೇಶ್ ಹೆಗ್ಗೋಡು ಇವರ ನಿರ್ದೇಶನದಲ್ಲಿ ಬೂಕರ್ ವಿಜೇತೆ ಬಾನು ಮುಷ್ತಾಕ್ ಇವರ ಕಥೆಯಾಧಾರಿತ ‘ಎದೆಯ ಹಣತೆ’ ಎಂಬ ಕನ್ನಡ ನಾಟಕಗಳ ಪ್ರದರ್ಶನ ನಡೆಯಲಿದೆ.
ಬೆಂಗಳೂರು : ಅಕಾಡೆಮಿ ಆಫ್ ಮ್ಯೂಜಿಕ್ (ರಿ.) ಮತ್ತು ಚೌಡಯ್ಯ ಸ್ಮಾರಕ ಭವನ ಅರ್ಪಿಸುವ ‘ರಂಗ ರಂಗೋಲಿ’ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವವನ್ನು ದಿನಾಂಕ 9, 10 ಮತ್ತು 11 ಜುಲೈ 2025ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡದ ಮಹಾನ್ ಸಾಹಿತಿಗಳ ಅತ್ಯಂತ ಪ್ರಸಿದ್ಧ ಕಾದಂಬರಿಗಳು ರಂಗ ರೂಪವಾಗಿ ಅನಾವರಣಗೊಳ್ಳುವ ರಾಜ್ಯ ಮಟ್ಟದ ನಾಟಕೋತ್ಸವ ಇದಾಗಿದೆ. ದಿನಾಂಕ 9 ಜುಲೈ 2025ರಂದು ಸಂಜೆ 6-30 ಗಂಟೆಗೆ ಹಾವೇರಿ ಜಿಲ್ಲೆಯ ಶೇಷಗಿರಿ ಗ್ರಾಮದ ಶ್ರೀ ಗಜಾನನ ಯುವಕ ಮಂಡಳಿ ತಂಡದಿಂದ ಜ್ಞಾನಪೀಠ ಪುರಸ್ಕೃತ ಲೇಖಕ ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಆಧಾರಿತ ‘ವಾಲಿ ವಧೆ’ ನಾಟಕ ಪ್ರದರ್ಶನಗೊಳ್ಳಲಿದೆ. ಗಣೇಶ ಮಂದರ್ತಿ ಇವರು ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಪದ್ಮಶ್ರೀ ಎಮ್.ಎಸ್. ಸತ್ಯು ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಇವರಿಗೆ ಇದೇ ಸಂದರ್ಭದಲ್ಲಿ ರಂಗ ಗೌರವ ನೀಡಲಾಗುವುದು. ದಿನಾಂಕ 10 ಜುಲೈ 2025ರಂದು ಸಂಜೆ…
ಉಡುಪಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಡುಪಿ ಘಟಕ ವತಿಯಿಂದ ಗೌರವಾರ್ಪಣಾ ಕಾರ್ಯಕ್ರಮವು ದಿನಾಂಕ 05 ಜುಲೈ 2025ರಂದು ಉಡುಪಿಯ ಪುರಭವನದಲ್ಲಿ ನಡೆಯಿತು. ಪ್ರೊ. ಪವನ್ ಕಿರಣ್ ಕೆರೆ ಇವರು ಫೌಂಡೇಷನ್ನಿನ ಕಾರ್ಯವೈಖರಿಯ ಬಗ್ಗೆ ಆಶಯ ಭಾಷಣದಲ್ಲಿ ನುಡಿದರು. ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಮಾಹೆ ಮಣಿಪಾಲ ಇದರ ಡಾ. ಹೆಚ್.ಯಸ್. ಬಲ್ಲಾಳ್, ಪ್ರೊ ಎಂ.ಎಲ್. ಸಾಮಗ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರು ಪಟ್ಲ ಸತೀಶ್ ಶೆಟ್ಡಿ, ಉಡುಪಿ ಘಟಕದ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಸಂಚಾಲಕರಾದ ಸುಧಾಕರ ಆಚಾರ್ಯ, ಮಹಿಳಾ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರೀಯ ಘಟಕಕ್ಕೆ ಗೌರವನಿಧಿಯನ್ನು ಸಮರ್ಪಿಸಲಾಯಿತು. ಉಡುಪಿ ಘಟಕದ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಇವರು ಸ್ವಾಗತಿಸಿ, ಶಿಲ್ಪಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ತೆಂಕು ಬಡಗುತಿಟ್ಟಿನ ಕಲಾವಿದರಿಂದ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನ ನಡೆಯಿತು.
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕ ಮತ್ತು ಕ್ರಿಯೇಟಿವ್ ಪುಸ್ತಕ ಮನೆ ಇದರ ಸಹಯೋಗದೊಂದಿಗೆ ‘ವಿದ್ಯಾರ್ಥಿಗಳೆಡೆ ಪುಸ್ತಕದ ನಡೆ’ ಕನ್ನಡ ಡಿಂಡಿಮ ಸರಣಿ ಕಾರ್ಯಕ್ರಮವನ್ನು ದಿನಾಂಕ 12 ಜುಲೈ 2025ರಂದು ಅಪರಾಹ್ನ 1-30 ಗಂಟೆಗೆ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಬಾಲ್ಯದಿಂದಲೂ ಯಕ್ಷಗಾನ ಹಾಗೂ ಭರತನಾಟ್ಯ ಕಲೆಯ ಮೇಲೆ ಆಸಕ್ತಿ ಹಾಗೂ ತಂದೆಯವರ ಯಕ್ಷಗಾನ ವೇಷದ ಪ್ರಭಾವ ನಂತರದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ ಬಳ್ಕೂರು, ರಾಮಚಂದ್ರ ಹೆಗಡೆ ಕೊಂಡದಕುಳಿ ಅಂತಹ ಯಕ್ಷ ದಿಗಜ್ಜರ ವೇಷವನ್ನು ನೋಡಿ ಹಾಗೂ ಬಾಲ್ಯದಿಂದಲೂ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯ ಕಲೆಯಡೆಗೆ ಆಕರ್ಷಿತರಾಗಿ ಆರನೇ ತರಗತಿಯಲ್ಲಿ ಇರುವಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು ಇಲ್ಲಿ ಪ್ರಥಮ ವೇಷ ಮಾಡಿ ಇಂದು ಯಕ್ಷಗಾನ ಹಾಗೂ ಭರತನಾಟ್ಯ ರಂಗದಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದೆ ಶ್ರುತಿ ಭಟ್ ಮಾರಣಕಟ್ಟೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾರಣಕಟ್ಟೆಯ ಎಂ.ಶಂಕರ್ ಭಟ್ ಹಾಗೂ ವನಿತಾ ಭಟ್ ಇವರ ಮಗಳಾಗಿ ಜೂನ್ 30ರಂದು ಶ್ರುತಿ ಭಟ್ ಮಾರಣಕಟ್ಟೆಯವರ ಜನನ. ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಯಕ್ಷಗಾನ ಗುರುಗಳು: ಶ್ರೀಯುತ ಪ್ರಭಾಕರ ಆಚಾರ್ಯ ಹೆಮ್ಮಾಡಿ. ನಂತರದಲ್ಲಿ ಹೆಜ್ಜೆಗಾರಿಕೆ ಹಾಗೂ ಭಾಗವತಿಕೆಯನ್ನು…
ಮಂಗಳೂರು : ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್2025-27ರ ಸಾಲಿನ ಅವಿಭಜಿತ ದ. ಕ ಜಿಲ್ಲಾ ಅಧ್ಯಕ್ಷರಾಗಿ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ, ಕಾರ್ಯದರ್ಶಿಯಾಗಿ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಜತೆ ಕಾರ್ಯದರ್ಶಿಯಾಗಿ ಗುರು ಶ್ರೀಧರ ಹೊಳ್ಳ, ಕೋಶಾಧಿಕಾರಿ ವಿದ್ವಾನ್ ಸುರೇಶ್ ಅತ್ತಾವರ, ಖಾಯಂ ಟ್ರಸ್ಟಿಯಾಗಿ ಕಲಾಶ್ರೀ ವಿದುಷಿ ನಯನ ವಿ. ರೈ, ವಿದ್ವಾನ್ ಸುಧೀರ್ ಕೊಡವೂರು, ನಿಕಟಪೂರ್ವ ಅಧ್ಯಕ್ಷರಾಗಿ ವಿದ್ವಾನ್ ಪ್ರವೀಣ್ ಯು.ಕೆ, ಸದಸ್ಯರಾಗಿ ಮಂಗಳೂರು ವಲಯದಿಂದ ವಿದುಷಿ ಲತಾ ಶಶಿಧರ್, ವಿದ್ವಾನ್ ಸುದರ್ಶನ್, ವಿದುಷಿ ಸವಿತಾ ಜೀವನ್ , ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಪುತ್ತೂರು ವಲಯದಿಂದ ವಿದ್ವಾನ್ ದೀಪಕ್ ಪುತ್ತೂರು, ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಉಡುಪಿ ವಲಯದಿಂದ ಗುರು ರಾಮಕೃಷ್ಣ ಕೊಡಂಚ, ವಿದ್ವಾನ್ ಭವಾನಿ ಶಂಕರ ಮೊದಲಾದವರು ಆಯ್ಕೆಯಾಗಿರುತ್ತಾರೆ ಎಂದು ಪರಿಷತ್ ತಿಳಿಸಿದೆ.
ಉಡುಪಿ : ಖ್ಯಾತ ವಿದ್ವಾಂಸ, ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರು ತಮ್ಮ ಮಾತಪಿತರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಮೂಲಕ ಕೊಡ ಮಾಡುವ ಪ್ರತಿಷ್ಠಿತ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 04 ಜುಲೈ 2025ರ ಶುಕ್ರವಾರದಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ, ಖ್ಯಾತ ವಿದ್ವಾಂಸ ಹಾಗೂ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ, ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿ ಇದರ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗoಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಯೋಜಿತ ಈ ಪ್ರಶಸ್ತಿಯು 60 ಸಾವಿರ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಅಭಿನಂದನೀಯ ನುಡಿಗಳನ್ನಾಡಿದ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ‘ಮಂದಾರ ‘ರಾಮಾಯಣ : ಮಿತ್ತ ಲೋಕದ ಬಿತ್ತೆ’ ಎಂಬ ವಿಷಯದಲ್ಲಿ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 26 ಜೂನ್ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ. ನಾವೂರು ಮಾತನಾಡಿ ತುಳುವಿನ ಜಾನಪದ ನಂಬಿಕೆ, ‘ಧಾರ್ಮಿಕ ಆಚರಣೆಗಳು, ಕೃಷಿ ಸಂಸ್ಕೃತಿಗಳ ಬದುಕು ಶ್ರೀಮಂತವಾಗಿದ್ದು ಮಂದಾರ ಕೇಶವ ಭಟ್ಟರ ಮಂದಾರ ರಾಮಾಯಣ ಈ ತುಳು ಸಂಸ್ಕೃತಿಯನ್ನು ಹಿಡಿದಿಟ್ಟಿದೆ ಎಂದು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ‘ಮಂದಾರ ‘ರಾಮಾಯಣ : ಮಿತ್ತ ಲೋಕದ ಬಿತ್ತೆ’ ಎಂಬ ವಿಷಯದಲ್ಲಿ ನಡೆದ ವಾಚನ ವ್ಯಾಖ್ಯಾನ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ|…
ಕೋಲಾರ : ಪಿಟೀಲು ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಕೋಲಾರ ನಗರದ ನಾದಸ್ವರ ವಿದ್ವಾನ್ ಆರ್. ಶ್ರೀರಾಮುಲು ದಿನಾಂಕ 04 ಜುಲೈ 2025ರಂದು ಅವರ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 88 ವರ್ಷ ವಯಸ್ಸಾಗಿತ್ತು. ಬಾಲ್ಯದಲ್ಲೇ ನಾದಸ್ವರದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಕೋಲಾರ ಕೃಷ್ಣಮೂರ್ತಿ, ರಾಮರಾಯಲು, ಟಿ.ಆರ್. ಗಂಗಾಧರ೦, ಕುಂಭಕೋಣಂ ಸ್ವಾಮಿ ಅಯ್ಯರ್ ಮುಂತಾದ ಗುರುಗು ಮಾರ್ಗದರ್ಶದಲ್ಲಿ ಸಂಗೀತ ಶಿಕ್ಷಣ ಪಡೆದರು. ಆ ನಂತರ ಸಭೆ-ಸಮಾರಂಭ-ಶುಭಕಾರ್ಯಗಳಲ್ಲಿ ನಾದಸ್ವರ ನುಡಿಸಿದರು. ಕರ್ನಾಟಕದಾದ್ಯಂತ ಮಾತ್ರವಲ್ಲದೆ, ಕಾಣಿದಾಕಂ, ಚಿತ್ತೂರು ಮುಂತಾದ ಹಲವಾರು ಹೊರರಾಜ್ಯಗಳಲ್ಲೂ ನಾದಸ್ವರ ಕಛೇರಿ ನೀಡಿದ ಹೆಗ್ಗಳಿಕೆ ಹೊಂದಿದ್ದರು. ಇವರು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು..
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ-ಯಕ್ಷಶಿಕ್ಷಣ ನಾಟ್ಯ ಅಭ್ಯಾಸವು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಟೀಲು ಎಕ್ಕಾರು ಘಟಕದ ನೇತೃತ್ವದಲ್ಲಿ ದಿನಾಂಕ 04 ಜುಲೈ 2025ರಂದು ಬಡಗ ಎಕ್ಕಾರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಈ ಯಕ್ಷಶಿಕ್ಷಣ ತರಗತಿಯನ್ನು ಉದ್ಘಾಟನೆಗೈದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಕಟೀಲು ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಶೆಟ್ಟಿ ಇವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಾ “ಯಕ್ಷ ಶಿಕ್ಷಣವು ವಿದ್ಯಾರ್ಥಿಗಳಿಗೆ ಮೊಳಕೆಯಿಂದಲೇ ಲಭ್ಯವಾದರೆ ಅದು ಹೆಮ್ಮರವಾಗಿ ಬಹುಕಾಲ ಉಳಿಯುತ್ತದೆ. ಲಕ್ಷಾಂತರ ಜನರು ಯಕ್ಷಗಾನ ಕಲೆಯ ಅಭಿಮಾನಿಗಳು, ಅದರ ಸೇವೆಯ ಆರಾಧಕರು, ಯಕ್ಷಗಾನದಲ್ಲಿ ಅರ್ಥಗಾರಿಕೆ ಮಾತುಗಾರಿಕೆ ಮೊದಲಾದ ನೀತಿ ನಿಯಮಗಳಿವೆ. ಶಿಕ್ಷಣ ರಂಗದಲ್ಲಿ ನೀಡುವ ಶಿಸ್ತಿನ ಜೊತೆಗೆ ಯಕ್ಷಗಾನವು ದೈಹಿಕ ವ್ಯಾಯಾಮವನ್ನು ಹೆಚ್ಚಿಸುತ್ತದೆ. ಇದರಿಂದ ಕಲಿಕೆಯಲ್ಲಿ ಏಕಾಗ್ರತೆ ಶಿಸ್ತು ಸ್ಮರಣೆ ಹೆಚ್ಚಾಗುತ್ತದೆ. ಅನೇಕ ಕಲಾವಿದರು ಶಿಕ್ಷಣ ಸಂಸ್ಥೆಗಳು ಇದರಿಂದ ಸಹಾಯವನ್ನು ಪಡೆದುಕೊಂಡು ಅಭಿವೃದ್ಧಿ…