Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಪುತ್ತೂರು ಮುರದ ಸತ್ಯಶಾಂತ ಪ್ರತಿಷ್ಠಾನದ ಆಶ್ರಯದಲ್ಲಿ ನೀಡಲಾಗುವ ‘ತಲೆಂಗಳ ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭವು 29 ಜುಲೈ2024ರ ಸೋಮವಾರದಂದು ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ “ನಾಡಿನ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ಇದರಿಂದ ಹೊಸ ಕಲಾವಿದರಿಗೆ ಹಿರಿಯ ಕಲಾವಿದರ ಪರಿಚಯ ಮತ್ತು ಅವರ ಆದರ್ಶಗಳನ್ನು ಅರಿಯಲು ಅವಕಾಶವಾಗುತ್ತದೆ.” ಎಂದು ಹೇಳಿದರು. ರಾಜೇಂದ್ರ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟ್ರಮಣ ಭಟ್ಟ ಇವರಿಗೆ ‘ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಕುರಿತು ಪನೆಯಾಲ ರಾಮಚಂದ್ರ ಭಟ್ ಮಾತನಾಡಿದರು. ಉದಯಶಂಕರ ಭಟ್ ಸನ್ಮಾನ ಪತ್ರ ವಾಚಿಸಿದರು. ಯಕ್ಷಗಾನ ಕಲಾವಿದರಾದ ಭಾಸ್ಕರ ಭಾರ್ಯ, ಪಿ. ಜಿ. ಜಗನ್ನಿವಾಸ ರಾವ್, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ಡಾ. ವಿಷ್ಣುಪ್ರಸಾದ್ ಬರೆಕರೆ, ಸತ್ಯಾತ್ಮ ಕುಂಟಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.…
ಬೆಂಗಳೂರು : ಕರ್ನಾಟಕ ಪ್ರಹಸನ ಪಿತಾಮಹ ಹಾಗೂ ಹಿರಿಯ ಸಾಹಿತಿಗಳಾದ ತಂಜಾವೂರು ಪರಮಶಿವ ಕೈಲಾಸಂ ಇವರ 140ನೆಯ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 29 ಜುಲೈ 2024ರಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ““ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಜನಜನಿತ. ಒಮ್ಮೆ ಕೈಲಾಸಂ ಅವರ ಆತ್ಮೀಯರು ಹಾಗೂ ಅಭಿಮಾನಿಯಾಗಿದ್ದ ಅ. ನ. ಕೃ. ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು “ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ.” ಎಂದು ಹೇಳಿ, ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ದರಿಸುತ್ತಿದ್ದರು. ಕೈಲಾಸಂ ಅವರು ಹುಟ್ಟಿದ್ದು 1884ರ ಜುಲೈ 29ರಂದು. ಭೂಗರ್ಭ ಶಾಸ್ತ್ರದ ಉನ್ನತ ಪದವಿಗಾಗಿ ಲಂಡನ್ನಿನ ರಾಯಲ್ ಕಾಲೇಜಿಗೆ ಸೇರಿ ಅಲ್ಲಿ ಪ್ರಶಸ್ತಿ…
ಮಂಗಳೂರು : ಬಹುಮುಖ ಪ್ರತಿಭೆಯ ಹೆಸರಾಂತ ಕಲಾವಿದೆ ಅಯನಾ ವಿ. ರಮಣ್ ಮೂಡುಬಿದಿರೆ ಇವರು ದೂರದರ್ಶನ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರ ಮಾರ್ಗದರ್ಶನದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಎದುರಿಸಿದ್ದ ಅವರು ‘ಬಿ’ ಗ್ರೇಡ್ ಮಾನ್ಯತೆ ಪಡೆದಿದ್ದಾರೆ. ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದ್ವಾನ್ ಸತ್ಯನಾರಾಯಣ ರಾಜು ಅವರಲ್ಲಿ ಕಳೆದ 10 ವರ್ಷಗಳಿಂದ ಭರತನಾಟ್ಯದಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಅಯನಾ ಸಾಧನೆಗೆ ಉಡುಪಿ ಶ್ರೀ ಕೃಷ್ಣ ಮಠ – ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಾದ ಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು, ಅಯನಾ ವಿ. ರಮಣ್ ನಡೆಸುವ ನೃತ್ಯ ಸಂಸ್ಥೆ ‘ನಾಟ್ಯಾಯನ ಮೂಡುಬಿದಿರೆ’ ಮತ್ತು ನೃತ್ಯ ಗುರುವಾಗಿರುವ ‘ರಂಗಭಾರತಿ ಕಲಾಮಂದಿರಮ್’ ಕುಶಾಲನಗರ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಹೆತ್ತವರು ಅಭಿನಂದಿಸಿದ್ದಾರೆ. ಮನೆ-ಮನೆಗೆ…
ಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ದಕ್ಷಿಣ ಕನ್ನಡ ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಯೋಗದೊಂದಿಗೆ ‘21ನೇ ವಾರ್ಷಿಕ ಸಂಭ್ರಮ’ ಕಾರ್ಯಕ್ರಮವು ದಿನಾಂಕ 02 ಆಗಸ್ಟ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ತೌಳವ ಪ್ರಶಸ್ತಿ ಪ್ರದಾನ’, ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮ ಹಾಗೂ ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ಇದರ ಚೈರ್ಮನ್ ಡಾ. ಎಂ. ಮೋಹನ ಆಳ್ವ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಅಪರಾಹ್ನ 2-00 ಗಂಟೆಗೆ ಜಿಲ್ಲೆಯ ವಿವಿಧ ರಂಗ ತಂಡಗಳಿಂದ ಕಿರು ನಾಟಕ ಸ್ಪರ್ಧೆ ನಡೆಯಲಿದೆ.
ಧಾರವಾಡ : ಅಭಿನಯ ಭಾರತಿ ಧಾರವಾಡ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಇವರ ಸ್ಮರಣಾರ್ಥ ‘ಜಿಬಿ-ಕೀರ್ತಿ ನೆನಪು’ ಎಂಬ ವಿಶೇಷ ದತ್ತಿ ಕಾರ್ಯಕ್ರಮವು ದಿನಾಂಕ 29 ಜುಲೈ 2024ರಂದು ಮನೋಹರ ಗ್ರಂಥ ಮಾಲಾದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಚಿಂತಕ ಶ್ರೀ ಹರ್ಷ ಡಂಬಳ ಇವರು ಮಾತನಾಡಿ “ಮನುಷ್ಯ ಮನುಷ್ಯರ ನಡುವಣ ಆತ್ಮೀಯ ಸಂಬಂಧದ ಮಧುರ ನೆನಪುಗಳು ಜೀವನದ ಅವಿಸ್ಮರಣೀಯ ಕ್ಷಣಗಳಾಗಿ ನಮಗೆ ಬಾಳ ಬುತ್ತಿ ನೀಡಬಲ್ಲವು. ಜಿ.ಬಿ. ಮತ್ತು ಕೀರ್ತಿಯವರ ದೇಹಗಳು ಬೇರೆ ಬೇರೆಯಾದರೂ ಜೀವನದ ದೃಷ್ಟಿಕೋನ ಒಂದೇ, ಯಾರನ್ನೂ ಸಣ್ಣವರಾಗಿ ನೋಡದೇ ತಮ್ಮ ಪ್ರೀತಿ ವಾತ್ಸಲ್ಯದ ಅಮೃತ ಸಿಂಚನ ನೀಡುತ್ತಿದ್ದರು” ಎಂದರು. ಜಿ.ಬಿ. ಜೋಶಿಯವರ 120ನೇ ಹುಟ್ಟುಹಬ್ಬ ಹಾಗೂ ಕೀರ್ತಿನಾಥರ 21ನೆಯ ಪುಣ್ಯತಿಥಿ ಅಂಗವಾಗಿ ಅವರಿರುವರ ಅವಿನಾಭಾವ ಸಂಬಂಧದ ವಿವಿಧ ಮಗ್ಗಲುಗಳನ್ನು ಅವರನ್ನು ಹತ್ತಿರದಿಂದ ಬಲ್ಲ ಆತ್ಮೀಯರು ಹಂಚಿಕೊಂಡರು.…
ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಉಡುಪಿ ಈ ಸಂಸ್ಥೆಯ ರಜತ ಮಹೋತ್ಸವವನ್ನು 01 ಆಗಸ್ಟ್ 2024ರಂದು ಕರ್ನಾಟಕ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಇನ್ಫೋಸಿಸ್ ಫೌಂಡೇಶನ್ -ಯಕ್ಷಗಾನ ಕಲಾರಂಗದ (ಐ.ವೈ.ಸಿ.) ಸಭಾಂಗಣದಲ್ಲಿ ಸಂಜೆ ಗಂಟೆ 4-45ಕ್ಕೆ ಉದ್ಘಾಟಿಸಲಿದ್ದಾರೆ. ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶ್ರೀ ರಾಘವೇಂದ್ರ ಆಚಾರ್ಯರು ಪ್ರಾರ್ಥನಾ ಸ್ತುತಿ ಪ್ರಸ್ತುತ ಪಡಿಸಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ‘ಸರಿಗಮ ಭಾರತಿ’ಯು ಕಳೆದ 25 ವರ್ಷಗಳಿಂದ ಮಣಿಪಾಲ, ಉಡುಪಿ ಪರಿಸರದಲ್ಲಿ ನೂರಾರು ಕಿರಿಯ, ಹಿರಿಯ ಸಂಗೀತಾಸಕ್ತರನ್ನು ತರಬೇತುಗೊಳಿಸಿದ್ದಲ್ಲದೆ, ವೇದಿಕೆಯನ್ನು ಕಲ್ಪಿಸಿ ಕೊಡುತ್ತಾ ಸಂಗೀತವನ್ನು ಶ್ರೀಮಂತಗೊಳಿಸುವ ಪ್ರಯತ್ನ ಮಾಡಿದೆ. ತನ್ನ ವೇದಿಕೆಯ ಮೂಲಕ ನಾಡಿನ ಹಾಗೂ ದೇಶದ ಹಲವಾರು ಖ್ಯಾತ ಕಲಾವಿದರ ಸಂಗೀತ ಕಛೇರಿಗಳನ್ನು, ಕಾರ್ಯಾಗಾರಗಳನ್ನು ಹಮ್ಮಿಕೊಂಡು ಬಂದಿದೆ. ಹಿರಿಯ, ಕಿರಿಯ…
ನವದೆಹಲಿ : ದೆಹಲಿ ಕರ್ನಾಟಕ ಸಂಘ (ರಿ.) ಇದರ ವತಿಯಿಂದ ‘ಅಭಿನಂದನಾ ಸಮಾರಂಭ’ವನ್ನು ದಿನಾಂಕ 01 ಆಗಸ್ಟ್ 2024ರಂದು ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮ ಬಳಿಕ ಲಾವಣ್ಯ (ರಿ.) ಬೈಂದೂರು ಇವರು ಶ್ರೀ ರಾಜೇಂದ್ರ ಕಾರಂತ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ನಾಯಿ ಕಳೆದಿದೆ’ ಎಂಬ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ನಾಟಕ : ‘ನಾಯಿ ಕಳೆದಿದೆ’ ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ ಕರಗುವಂತೆ ಮಾಡುತ್ತವೆ. ಅಮೇರಿಕಾದ ಭವ್ಯ ಬದುಕಿನ ಆಸೆ ಹೊತ್ತು ಅಲ್ಲಿಗೆ ತೆರಳಿದ ಮಗ, ಸೊಸೆ ವೃದ್ಯಾಪ್ಯದಲ್ಲಿ ಆಸರೆಯಾಗಲಿಲ್ಲವಲ್ಲ ಎಂಬ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಅವರು ಬಿಟ್ಟು ಹೋದ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಕಾಡುವ ನಾಯಿ, ನಾಯಿಯ ಬೊಗಳುವಿಕೆ ವೃದ್ಧರ ಬದುಕನ್ನು ನರಕ…
ಕಾಸರಗೋಡು : ಸಾಹಿತಿ, ಭಾಷಾಂತರಕಾರ, ಸಮಾಜಸೇವಕ ಕೆ.ವಿ. ಕುಮಾರನ್ ಮಾಸ್ತರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವತಿಯಿಂದ ‘ಗುರುನಮನ’ ಹಾಗೂ ‘ಕನ್ನಡ ಭವನ ಅಭಿನಂದನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ವಿದ್ಯಾನಗರದಲ್ಲಿರುವ ಅವರ ಸ್ವಗೃಹ ಸುಪ್ರಭದಲ್ಲಿ ದಿನಾಂಕ 28 ಜುಲೈ 2024ರಂದು ಜರಗಿತು. ಹಲವು ಕನ್ನಡದ ಕಾದಂಬರಿಗಳನ್ನು ಮಲಯಾಲಕ್ಕೆ ಅನುವಾದಿಸಿದ ಕೆ.ವಿ. ಕುಮಾರನ್ ಇವರಿಗೆ ‘ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಘೋಷಿಸಿದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಲಾಗಿತ್ತು. ಅಭಿನಂದನೆ ಸ್ಚೀಕರಿಸಿ ಮಾತನಾಡಿದ ಅವರು “ಅನುವಾದದಿಂದ ಅನುಭವ ವಿಸ್ತಾರಗೊಳ್ಳುತ್ತದೆ. ಇತರ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯವಾಗುತ್ತದೆ. ನಾನು ಕನ್ನಡವನ್ನು ಸ್ವಪರಿಶ್ರಮದಿಂದ ಕರಗತ ಮಾಡಿಕೊಂಡವನು. ಅದು ಕೇವಲ ಒಂದು ಭಾಷೆಯಲ್ಲ ಅದೊಂದು ಉದಾತ್ತವಾದ ಸಂಸ್ಕೃತಿ” ಎಂದರು. ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪತ್ರಕರ್ತ ಕೆ. ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣಗೈದರು. ಕನ್ನಡ ಸಾಹಿತ್ಯ ಪರಿಷತ್ತಿನ…
ಬಿ.ಸಿ.ರೋಡ್ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ‘ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ’ವು ದಿನಾಂಕ 4 ಆಗಸ್ಟ್ 2024ರಂದು ಪೂರ್ವಾಹ್ನ 10-00 ಗಂಟೆಗೆ ಬಂಟ್ವಾಳ ತಾಲೂಕು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಸಮ್ಮೇಳನವು ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷ ಆದಿರಾಜ ಜೈನ್ ನೇತೃತ್ವದಲ್ಲಿ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಜಯಾನಂದ ಪೆರಾಜೆ ಇವರ ಸರ್ವಾಧ್ಯಕ್ಷತೆಯಲ್ಲಿ ಕ.ಚು.ಸಾ.ಪ. ಹುಬ್ಬಳ್ಳಿಯ ರಾಜ್ಯ ಸಂಚಾಲಕರಾದ ಕೃಷ್ಣ ಮೂರ್ತಿ ಕುಲಕರ್ಣಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಜನಾರ್ದನ ವಾಸುದೇವ ಭಟ್ ಮೊಗರ್ನಾಡು ಇವರಿಗೆ ‘ಕರ್ನಾಟಕ ಚುಟುಕು ರತ್ನ’ ಪ್ರದಾನ ಮಾಡಿ ಪುರಸ್ಕರಿಸಲಾಗುವುದು. ಸಾಹಿತ್ಯ ವಿಚಾರಗೋಷ್ಠಿ, ಕಾಸರಗೋಡಿನ ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ, ಪರಿಸರ ವೈವಿಧ್ಯ…
ಕುಂದಾಪುರ : ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ನಡೆಯುವ ಶಾಲಾ ವಿದ್ಯಾರ್ಥಿಗಳ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 29 ಜುಲೈ 2024ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು-ಪಡುಕೆರೆ ಇಲ್ಲಿನ ಸಭಾಂಗಣದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೀತಾನಂದ ಪೌಂಡೇಶನ್ ಇದರ ಪ್ರವರ್ತಕರಾದ ಆನಂದ ಕುಂದರ್ ಹಾಗೂ ಇತರ ಅಭ್ಯಾಗತರು ದೀಪ ಪ್ರಜ್ವಲನೆಯೊಂದಿಗೆ ಚೆಂಡೆಯನ್ನು ಬಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮದಾಸ ನಾಯಕ ಇವರು ಯಕ್ಷಗಾನ ಕಲಿಕೆಯಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಕುರಿತು ಮಾತನಾಡಿ ಶುಭ ಹಾರೈಸಿದರು. ಯಕ್ಷಗಾನ ಕಲಿಕೆಯ ಗುರು ಶ್ರೀ ರಾಘವೇಂದ್ರ ಯಕ್ಷಗಾನದ ಕಲಿಕೆಯ ವಿವಿಧ ಆಯಾಮಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ವಾಹಿನಿ ಯುವಕ ಮಂಡಲದ ಅಧ್ಯಕ್ಷರಾದ ರಮೇಶ್ ಕುಂದರ್, ಉಪಸ್ಥಿತರಿದ್ದರು. ಪ್ರೌಢಶಾಲಾ ಸಹ ಶಿಕ್ಷಕ ಶ್ರೀಧರ ಶಾಸ್ತ್ರೀ ಸ್ವಾಗತಿಸಿ, ಶ್ರೀಧರ ಶಾಸ್ತ್ರೀ…