Author: roovari

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ಬನ್ನೂರು ಭಾರತೀ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಆಶ್ರಯದಲ್ಲಿ ದಿನಾಂಕ 21 ಜನವರಿ 2025ರಂದು ‘ಶ್ರೀ ಕೃಷ್ಣ ಸಂಧಾನ’ ಎಂಬ ಅಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ನಿತೀಶ್ ಎಂಕಣ್ಣಮೂಲೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ‌ ಪಾಂಗಣ್ಣಾಯ ‌ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ವಿದುರ (ಮಾಂಬಾಡಿ ವೇಣುಗೋಪಾಲ ಭಟ್), ದ್ರೌಪದಿ (ಅಚ್ಯುತ ಪಾಂಗಣ್ಣಾಯ), ಕೌರವ (ಶ್ರುತಿ ವಿಸ್ಮಿತ್ ಬಲ್ನಾಡು) ಸಹಕರಿಸಿದರು. ಇಂಜಿನಿಯರ್ ಶಂಕರ್ ಭಟ್ ಕಾರ್ಯಕ್ರಮ ಪ್ರಾಯೋಜಿಸಿದರು.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗ 119ನೇ ಸರಣಿಯಲ್ಲಿ ಸಂಸ್ಥೆಯ ಕಲಾವಿದರಾದ ಅಕ್ಷತಾ ಕೆ., ಅಪೂರ್ವ ಗೌರಿ ದೇವಸ್ಯ, ಶಮಾ ಚಂದುಕೂಡ್ಲು, ವಿಭಾಶ್ರೀ ವಿ. ಗೌಡ, ಪ್ರಣಮ್ಯ ಪಾಲೆಚ್ಚಾರು ಮತ್ತು ವಿಷ್ಣುಪ್ರಿಯ ಇವರಿಂದ ಭರತನಾಟ್ಯ ಕಾರ್ಯಕ್ರಮವು ದಿನಾಂಕ 04 ಜನವರಿ 2025ರಂದು ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಅಭ್ಯಾಗತರಾದ ವಿಭಾ ಫ್ಯಾಷನ್ ನ ಮಾಲಕರಾದ ಹಾಗೂ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸಮಿತಿಯ ನಿಕಟಪೂರ್ವ ಸದಸ್ಯರಾದ ಶ್ರೀಮತಿ ವೀಣಾ ಬಿ.ಕೆ. ಇವರು ಮೆಚ್ಚುಗೆ ವ್ಯಕ್ತಪಡಿಸಿದರು. ಭರತನಾಟ್ಯ ಕಲಾವಿದರೆಲ್ಲ ವಿದ್ವಾನ್ ದೀಪಕ್ ಕುಮಾರರಲ್ಲಿ ತರಬೇತು ಪಡೆಯುತ್ತಿದ್ದಾರೆ. ಸಭಾಕಲಾಪದಲ್ಲಿ ಕು. ಆದ್ಯ ಕೆ. ನಿರೂಪಣೆಯಲ್ಲಿ, ನಿಶಿ ವಿಷಯ ಮಂಡನೆಯಲ್ಲಿ, ಅಕ್ಷರಿ ಪಂಚಾಂಗ ವಾಚನದಲ್ಲಿ, ಭಾರ್ಗವಿ ಶೆಣೈ ಅಭ್ಯಾಗತರ ಪರಿಚಯ, ಕು. ಅದಿತ್ಯ, ಅಭಿನವ್ ರಾಜ್, ಅಭಿನವ್, ಹೃಷಿಕೇಶ್, ಪ್ರಚೇತ್ – ಪ್ರಾರ್ಥನೆ ಹಾಡಿದರೆ, ಪ್ರೀತಿಕಲಾ ಮತ್ತು ಗಿರೀಶ್ ಕುಮಾರ್ ಓಂಕಾರ ನಾದ ಹಾಗೂ ಶಂಖನಾದಗೈದರು.

Read More

ಕೋಟ : ಪ್ರಪ್ರಥಮ ಯಕ್ಷಗಾನವನ್ನು ವಿದೇಶಕ್ಕೊಯ್ದ ಶ್ರೇಯಸ್ಸಿನ ಕೋಟದ ಸಾಲಿಗ್ರಾಮ ಮಕ್ಕಳ ಮೇಳ (ರಿ.) ಇದರ ವತಿಯಿಂದ ಸುವರ್ಣ ಪರ್ವ -6ರ ಸರಣಿಯಲ್ಲಿ ಎರಡು ದಿನಗಳ ‘ಕಲೋತ್ಸವ 2025’ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಹಂದೆ ಉಡುಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 31 ಜನವರಿ 2025 ಮತ್ತು 01 ಫೆಬ್ರವರಿ 2025ರಂದು ಕೋಟ ಪಟೇಲರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 31 ಜನವರಿ 2025ರಂದು ಸಂಜೆ 4-00 ಗಂಟೆಗೆ ‘ಯಕ್ಷ ಕಿಶೋರ-ಗಾನ ಮಧುರ’ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇವರಿಂದ ಪ್ರಸ್ತುತಗೊಳ್ಳಲಿದೆ. 5-00 ಗಂಟೆಗೆ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿ ಇವರು ಈ ಕಲೋತ್ಸವ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ರಾಷ್ಟ್ರೀಯ ರಂಗ ನಿರ್ದೇಶಕರಾದ ಡಾ. ಶ್ರೀಪಾದ ಭಟ್ ಇವರಿಗೆ ‘ಹಂದೆ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಹಂದೆ ಕುಟುಂಬದ ಕಲಾವಿದ ಬಂಧುಗಳಿಂದ ಸಂಗೀತ ನೃತ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ. ದಿನಾಂಕ 01 ಫೆಬ್ರವರಿ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಡಾ. ಇರುವೈಲು ರಘುರಾಮ ಅಸ್ರಣ್ಣ ಮತ್ತು ಶ್ರೀಮತಿ ಲೀಲಾ ಅಸ್ರಣ್ಣ ನೆನಪಿನ ದತ್ತಿನಿಧಿ ಉಪನ್ಯಾಸದಲ್ಲಿ ‘ಕೊಡಗಿನ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ’ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 20 ಜನವರಿ 2025ರಂದು ಭಾಗಮಂಡಲ ಹೋಬಳಿಯ ಕೋರಂಗಲದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸವನ್ನು ನೀಡಿದ ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ದಿವಾಕರ್ “ಕೊಡಗು ಜಿಲ್ಲೆಯ ಜನ ಅತ್ಯಂತ ಸಾಮರಸ್ಯದಿಂದ ಬದುಕು ಸಾಧಿಸುವವರು. ಎಲ್ಲೋ ಕೆಲವೆಡೆ ಅಪವಾದವಿರಬಹುದು, ಆದರೆ ನಮ್ಮಲ್ಲಿ ಜಾತಿ ಕೇಳಿ ಮನೆಗೆ ಸೇರಿಸುವ ಪದ್ಧತಿ ಇಲ್ಲ. ಅತ್ಯಂತ ಪ್ರಬುದ್ಧ ಸಾಮರಸ್ಯದ ಬದುಕು ಕೊಡಗಿನಲ್ಲಿದೆ. ಇಂದು ಕೊಡಗಿನಲ್ಲಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಬೇಕಾದಷ್ಟು ಅವಕಾಶಗಳಿದ್ದು, ನಮ್ಮ…

Read More

ಉಡುಪಿ : ಮುದ್ದಣ 155ನೇ ಜನ್ಮದಿನ ಸಂಭ್ರಮದ ಪ್ರಯುಕ್ತವಾಗಿ ದಿನಾಂಕ 24 ಜನವರಿ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಣಿಪಾಲ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಮತ್ತು ಮುದ್ದಣ ಪ್ರಕಾಶನ ನಂದಳಿಕೆ ಇವರ ಜಂಟಿ ಆಶ್ರಯದಲ್ಲಿ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಮುದ್ದಣ ಕವಿ ರಚಿತಂ (ಪರಿಷ್ಕೃತ ತೃತೀಯ ಮುದ್ರಣ-ಟಿಪ್ಪಣಿ ಸಾರ ಸಮೇತ) ಡಾ. ಪಾದೇಕಲ್ಲು ವಿಷ್ಣು ಭಟ್ಟರ ಸಂಪಾದಕತ್ವದಲ್ಲಿ ‘ಶ್ರೀರಾಮಾಶ್ವಮೇಧಂ’ ಹಾಗೂ ಕೆ.ಎಲ್. ಕುಂಡಂತಾಯ ಮತ್ತು ನಂದಳಿಕೆ ಬಾಲಚಂದ್ರ ರಾವ್ ಇವರ ಸಂಪಾದಕತ್ವದಲ್ಲಿ ‘ನಂದಳಿಕೆ ಐಸಿರಿ ದರ್ಶನ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ವಹಿಸಲಿದ್ದು, ಖ್ಯಾತ ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ ಇವರು ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ. ಬಹುಭಾಷಾ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಕೃತಿ…

Read More

ಬಿ.ಸಿ. ರೋಡು : ಮಂಗಳೂರು ಆಕಾಶವಾಣಿ ಕಲಾವಿದರಾದ ಮೌನೇಶ್ ಕುಮಾರ್ ಛಾವಣಿ ಇವರಿಂದ ‘ಉದಯ ಗಾನ’ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಬೆಳಿಗ್ಗೆ 6-00 ಗಂಟೆಗೆ ಬಿ.ಸಿ. ರೋಡಿನಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಗೌತಮ್ ಜಪ್ಪಿನಮೊಗರು ತಬಲಾ ಮತ್ತು ಲೋಕೇಶ್ ಸಂಪಿಗೆ ಕೊಳಲು ಸಾಥ್ ನೀಡಲಿದ್ದಾರೆ. ಡಾ. ವಿಜಯ ನಾರಾಯಣ ತೋಳ್ಪಾಡಿ ಮತ್ತು ಡಾ. ವೀಣಾ ತೋಳ್ಪಾಡಿ ಇವರು ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More

ಮೈಸೂರು : ರೋಟರಿ ಮೈಸೂರು ಉತ್ತರ ಹಾಗೂ ಕದಂಬ ರಂಗವೇದಿಕೆ ಇದರ ವತಿಯಿಂದ ‘ರೋಟರಿ- ಕದಂಬ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 17 ಜನವರಿ 2025ರಂದು ಜೆ.ಎಲ್‌.ಬಿ. ರಸ್ತೆಯ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಮಾತನಾಡಿ “ಕನ್ನಡ ರಂಗಭೂಮಿಯು ವಿಶ್ವದಲ್ಲೇ ವಿಶಿಷ್ಟ ಗೌರವಕ್ಕೆ ಪಾತ್ರವಾಗಿದ್ದು, ಅದಕ್ಕೆ ಇಲ್ಲಿನ ಮಣ್ಣಿನ ಗುಣ ಹಾಗೂ ಜಾನಪದ ಕಾರಣ. ಮೈಸೂರಿನಲ್ಲಿ ರಾಜರ ಕಾಲದಿಂದ ನಾಟಕಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಗುಬ್ಬಿ ವೀರಣ್ಣ ಕಂಪನಿಯನ್ನು ಕರೆಸಿ, ಜಗನ್ಮೋಹನ ಅರಮನೆಯಲ್ಲಿ ರಾಜರು ನಾಟಕ ಮಾಡಿಸಿ ಪ್ರೋತ್ಸಾಹಿಸಿದ್ದರು. ಈಗಲೂ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿದರೆ ಜನ ಬೆಂಬಲ ನೀಡುತ್ತಾರೆ. ಉತ್ತಮ ನಾಟಕಕ್ಕೆ ಸೋಲೇ ಇಲ್ಲ. ಜನ ಬರುತ್ತಾರೆ. ಸುಳ್ಳನ್ನು ಹೇಳುತ್ತಲೇ ಸತ್ಯವನ್ನು ಅನಾವರಣ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಆ ಮೂಲಕ ಉತ್ತಮ ಸಂಸ್ಕಾರ ರೂಪಿಸಲು ನೆರವಾಗುತ್ತಿದೆ. ರೋಟರಿ ಸಂಸ್ಥೆಯವರು ಕೇವಲ…

Read More

ಬೆಳಗಾವಿ : ಲಿಂ. ಶ್ರೀ ರಾಮಪ್ಪ ಬಸಪ್ಪ ಅಜೂರ ಮತ್ತು ಲಿಂ. ಶ್ರೀಮತಿ ಗಂಗಮ್ಮ ರಾಮಪ್ಪ ಅಜೂರ ಇವರ ಗಂಗಾರಾಮೋತ್ಸವ 35 ಹಾಗೂ ಅಜೂರ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 26 ಜನವರಿ 2025ರಂದು ಮುಂಜಾನೆ 10-00 ಗಂಟೆಗೆ ಬೆಳಗಾವಿಯ ಅಜೂರ ತೋಟದ ಮಹಾಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮುಗಳಖೋಡ ಜಿಡಗಾ ಶ್ರೀ ಶ್ರೀ ಶ್ರೀ ಷ.ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಇವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಬಾಗ ಹಂದಿಗುಂದ ಆಡಿ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಲಿರುವರು. ಕಾರವಾರದ ಶ್ರೀ ಎ.ಎನ್. ರಮೇಶ ಗುಬ್ಬಿ, ಮಡಿಕೇರಿಯ ಶ್ರೀಮತಿ ಕೃಪಾ ದೇವರಾಜ್, ಬಳ್ಳಾರಿಯ ಶ್ರೀಮತಿ ಎ.ಎಂ. ಜಯಶ್ರೀ, ಹುನಗುಂದದ ಡಾ. ತಿಪ್ಪೆಸ್ವಾಮಿ ಡಿ.ಎಸ್., ಮಹಾಲಿಂಗಪೂರದ ಡಾ. ಅಶೋಕ ನರೋಡೆ, ಇಟಗಿ ಬೆಳಗಾವಿಯ ಶ್ರೀ ವಿಜಯ ಬಡಿಗೇರ, ಗದಗ ಜಂತಲಿ-ಶಿರೂರು ಶ್ರೀಮತಿ ಭಾಗ್ಯಶ್ರೀ ಗವಿಶಿದ್ದಯ್ಯಾ ಹಳ್ಳಿಕೇರಿಮಠ, ಹಿಡಕಲ್ಲ ಶ್ರೀ ಟಿ.ಎಸ್. ವಂಟಗುಡಿ ಮತ್ತು ಜಮಖಂಡಿ ಡಾ. ಮಂಜುನಾಥ ಎಸ್. ಪಾಟೀಲ ಇವರುಗಳಿಗೆ ಅಜೂರ…

Read More

ಕಟೀಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಇದರ ವತಿಯಿಂದ ‘ಪೇಜಾವರ ಸದಾಶಿವ ರಾವ್ ನೆನಪು’ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಸಂಜೆ 4-00 ಗಂಟೆಗೆ ಪೇಜಾವರ ಸದಾಶಿವ ರಾಯರಿದ್ದ ಕಟೀಲಿನ ಮನೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಬರಹಗಾರರಾದ ಡಾ. ಜನಾರ್ದನ ಭಟ್ ಇವರು ಪೇಜಾವರರ ಕುರಿತು ಮಾತನಾಡಲಿದ್ದಾರೆ. ಶ್ರೀಮತಿ ಶೈಲಜಾ ಇವರಿಂದ ಪೇಜಾವರರ ಕಥೆಯ ಓದು ಮತ್ತು ಶ್ರೀಮತಿ ಜ್ಯೋತಿ ಉಡುಪ ಮತ್ತು ಬಳಗದವರಿಂದ ಪೇಜಾವರರ ಕವಿತೆಗಳ ಗಾಯನ ನಡೆಯಲಿದೆ.

Read More

ಮಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ ನಾ. ಡಿಸೋಜ ಇವರ ಶ್ರದ್ಧಾಂಜಲಿ ಸಭೆಯು ದಿನಾಂಕ 18 ಜನವರಿ 2025ರಂದು ಮಂಗಳೂರಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆಯಿತು. ಮಾತನಾಡಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನಾ. ಡಿ’ಸೋಜರವರ ಪ್ರಕೃತಿ ಜೊತೆ ಸಂಬಂಧ ಮತ್ತು ಬಡವ, ದೀನರನ್ನು ಹಿಂಸಿಸಿದ ಚಿತ್ರವನ್ನು ಅವರ ಕೃತಿಗಳಲ್ಲಿ ವರ್ಣಿಸಿದ ಬಗೆ, ಮಕ್ಕಳ ಸಾಹಿತ್ಯದಲ್ಲಿ ಅವರ ಆಸಕ್ತಿಗಳ ಬಗ್ಗೆ ಮಾತಾನಾಡಿದರು. ಇದೇ ಸಂದರ್ಭದಲ್ಲಿ ದೈವಾಧೀನರಾದ ಕೊಂಕಣಿ ಸಾಹಿತಿಗಳಾದ ಶ್ರೀ ಲುವಿಸ್‌ ಡಿ. ಅಲ್ಮೆಡಾ ಮತ್ತು ಶ್ರೀ ಎಮ್. ಪಿ. ರೊಡ್ರಿಗಸ್‌ ಇವರಿಗೂ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಸರ್ವರೂ ಗೌರವಪೂರ್ವಕವಾಗಿ ನಾ. ಡಿ’ಸೋಜರವರಿಗೆ ಹೂಗಳನ್ನು ಅರ್ಪಿಸಿ ಶೃದ್ದಾಂಜಲಿ ನೀಡಿದರು. ದಿ. ನಾ. ಡಿಸೋಜರವರ ಜೀವನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಗಳ ಬಗ್ಗೆ ಕವಿ, ಸಾಹಿತಿಗಳಾದ ಶ್ರೀ ವಿಕ್ಟರ್‌ ಮಥಾಯಸ್‌(ವಿತೊರಿ ಕಾರ್ಕಳ) ಶ್ರದ್ಧಾಂಜಲಿ ಭಾಷಣವನ್ನು…

Read More