Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (94) ಇವರು ವಯೋ ಸಹಜ ಖಾಯಿಲೆಯಿಂದ ಬೆಂಗಳೂರಿನಲ್ಲಿ ದಿನಾಂಕ 24 ಸೆಪ್ಟೆಂಬರ್ 2025ರಂದು ನಿಧನ ಹೊಂದಿದ್ದಾರೆ. 1934ರ ಜುಲೈ 26ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ಎಸ್.ಎಲ್. ಭೈರಪ್ಪರವರು ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ಅಮರವಾದುದು. ಇವರ ಪ್ರಮುಖ ಕೃತಿಗಳು : ‘ವಂಶವೃಕ್ಷ’, ‘ದಾಟು’, ‘ತಂತು’, ‘ಅಂಚು’, ‘ಪರ್ವ’, ‘ಗೃಹಭಂಗ’, ‘ಸಾರ್ಥ’, ‘ಮಂದ್ರ’ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಎಸ್ ಎಲ್ ಭೈರಪ್ಪ ಅವರ ಕಾದಂಬರಿಗಳು: ‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ‘ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ಗೃಹಭಂಗ’ ಸೇರಿದಂತೆ ಹಲವಾರು ಕಾದಂಬರಿಗಳು ಪ್ರಖ್ಯಾತಿಯನ್ನು ಹೊಂದಿದೆ. ಎಸ್.ಎಲ್. ಭೈರಪ್ಪರವರಿಗೆ ಸಂದ ಪ್ರಶಸ್ತಿಗಳು : ಭಾರತ ಸರ್ಕಾರದಿಂದ ನೀಡಲಾದ ದೊಡ್ಡ ಗೌರವ ‘ಪದ್ಮ ಭೂಷಣ’-2023, ಕೇಂದ್ರ ಸರಕಾರದ ‘ಪದ್ಮಶ್ರೀ’- 2016, ಮಮೋನಿ ರೈಸೊಂ ಗೋಸ್ವಾಮಿ ರಾಷ್ಟ್ರೀಯ ಸಾಹಿತ್ಯ…
ಮಂಗಳೂರು : ಕಲ್ಕೂರ ಪ್ರತಿಷ್ಠಾನ (ರಿ.) ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 10 ಅಕ್ಟೋಬರ್ 2025ರಂದು ಹಿರಿಯ ಸಾಹಿತಿ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವ ಸಮಾರಂಭವು ಜರಗಲಿದ್ದು, ಇದರ ಸಲುವಾಗಿ ಅಂಚೆ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ.ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪೆನ್ಸಿಲ್ ನಿಂದ ‘ಕಪ್ಪು-ಬಿಳುವು’ ಚಿತ್ರಗಳನ್ನು ಮಾತ್ರ ರಚಿಸಬೇಕು. ಇದು ರಾಜ್ಯ ಮಟ್ಟದ ಸ್ಪರ್ಧೆಯಾಗಿದ್ದು, ವಿಜೇತರಿಗೆ ಬಹುಮಾನವನ್ನು ಮಂಗಳೂರಿನಲ್ಲಿ ಜರಗಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು. ಅಂಚೆ ಕಾರ್ಡ್ ಗಳನ್ನು ಸ್ವ-ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ದಿನಾಂಕ 06 ಅಕ್ಟೋಬರ್ 2025ರೊಳಗಾಗಿ ಜಾನ್ ಚಂದ್ರನ್ (ಸಂಚಾಲಕರು), ಅಂಚೆ ಕಾರ್ಡ್ ನಲ್ಲಿ ಚಿತ್ರ ರಚನಾ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಈ ವಿಳಾಸಕ್ಕೆ ತಲಪುವಂತೆ ಕಳುಹಿಸಬೇಕೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ…
ದೇರಳಕಟ್ಟೆ : ತುಳುವ ಮಹಾಸಭೆ ಉಳ್ಳಾಲ ತಾಲೂಕು ಇವರ ವತಿಯಿಂದ ತುಳುವ ಮಹಾಸಭೆ 97 ದಿನಾಂಕ 26 ಸೆಪ್ಟೆಂಬರ್ 2025ರಂದು ದೇರಳಕಟ್ಟೆಯಲ್ಲಿರುವ ನಿಟ್ಟೆ ವಿಶ್ವ ವಿದ್ಯಾನಿಲಯದ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ದಿ. ಮೋನಪ್ಪ ತಿಂಗಳಾಯೆರ್ ಬರೆದ ‘ಜಯ ಜಯ ಜಯ ತುಳುವ ಸೀಮೆ ಅಪ್ಪೆನಾಡ್ ಗ್’ ತುಳು ನಾಡಗೀತೆಗೆ 125 ವರ್ಷವಾದ ಪ್ರಯುಕ್ತ ತುಳು ನಾಡಗೀತೆ ಗಾಯನ ನಡೆಯಲಿದೆ.
ಸುಳ್ಯ : ಶ್ರೀ ಶಾರದಾಂಬ ಸಮೂಹ ಸಮಿತಿ ಸುಳ್ಯ ಇದರ ವತಿಯಿಂದ ಮಕ್ಕಳ ದಸರಾ 2025 ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ದಿನಾಂಕ 03 ಅಕ್ಟೋಬರ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಚೆನ್ನಕೇಶವ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಳ್ಯ ತಾಲೂಕಿನ ಹಾಗೂ ಗಡಿನಾಡ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿ/ ವಿದ್ಯಾರ್ಥಿನಿ ದೀಪ ಬೆಳಗಿಸುವುದರೊಂದಿಗೆ ಈ ಸ್ಪರ್ಧಾ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಛದ್ಮವೇಷ, ಭಕ್ತಿಗೀತೆ, ಭಾವಗೀತೆ, ಭರತನಾಟ್ಯ, ವಿಜ್ಞಾನ ಮಾಡೆಲ್ ತಯಾರಿಕೆ, ಸಮೂಹ ಜನಪದ ಗೀತೆ, ಸಮೂಹ ಜನಪದ ನೃತ್ಯ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9611355496, 9481178541 ಮತ್ತು 8747820115 ಸಂಖ್ಯೆಯನ್ನು ಸಂಪರ್ಕಿಸಿರಿ.
ಸೊರಬ : ವಿಜಯ ಸೇವಾ ಟ್ರಸ್ಟ್ (ರಿ.), ಯಕ್ಷಶ್ರೀ ಸಾಗರ ಮತ್ತು ವಿನಾಯಕ ಕಲ್ಯಾಣ ಮಂದಿರ ವಿಶ್ವಸ್ಥ ಸಮಿತಿ ಕೋಡನಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷ ಗಾಯನ ವೈವಿಧ್ಯ’ ಯಕ್ಷಗಾನ ಹಿಮ್ಮೇಳ ಕಾರ್ಯಕ್ರಮವನ್ನು ದಿನಾಂಕ 29 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಸೊರಬ ತಾಲೂಕಿನ ಕೋಡನಕಟ್ಟೆಯಲ್ಲಿರುವ ವಿನಾಯಕ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಮಕೃಷ್ಣ ಹೆಗಡೆ ಹಿಲ್ಲೂರು, ಸೃಜನ್ ಗಣೇಶ್ ಹೆಗಡೆ ಗುಂಡೂಮನೆ, ಅನಿರುದ್ಧ ಹೆಗಡೆ ವರ್ಗಾಸರ ಮತ್ತು ಗಣೇಶ್ ಗಾಂವಕರ್ ಇವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಡಾ. ಎಚ್.ಎಸ್. ಮೋಹನ್ ಹೊಸಬಾಳೆ ಇವರು ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣೆ ಮಾಡಲಿದ್ದಾರೆ.
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ). ಸಿದ್ಧನಹಳ್ಳಿ ಇದರ ವತಿಯಿಂದ ಅನಿಕೇತನ ಕನ್ನಡ ಬಳಗ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿರುವ ಗಾಂಧಿ ವಿವೇಕಾನಂದ ಪ್ರಣಿತಾ ರಾಜ್ಯ ಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ದಿನಾಂಕ 28 ಸೆಪ್ಟೆಂಬರ್ 2025ರಂದು ಬೆಳಗ್ಗೆ 9-15 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಕವಿಗಳು, ಕೃಷಿಕರು, ಕನ್ನಡ ಉಪನ್ಯಾಸಕರು ಆಗಿರುವ ಡಾ. ಎಂ.ಆರ್.ಉಪೇಂದ್ರ ಕುಮಾರ್ ಇವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶಿಕ್ಷಣ ತಜ್ಞ, ಗಾಂಧಿ ಭವನದ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ ಉದ್ಘಾಟಿಸಲಿದ್ದು, ಪ್ರಸಿದ್ಧ ವಿದ್ವಾಂಸರಾದ ಡಾ. ವಿಜಯಾ ಸುಬ್ಬರಾಜ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಗಾಂಧೀಜಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಾಲಾ ಶಿಕ್ಷಕರ ಸಂಘದ ಎಂ.ಆರ್. ಮಲ್ಲಿಕಾರ್ಜುನಯ್ಯ, ವಕೀಲರಾದ ನಂಜಪ್ಪ ಕಾಳೇಗೌಡ್ರು, ಹಿರಿಯ ಸಾಹಿತಿಗಳಾದ ಸುರೇಶ್ ಕೋರಕೊಪ್ಪ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಶಾಂತರಾಜು, ಪತ್ರಕರ್ತ…
ಉಡುಪಿ : ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಮಣಿಪಾಲ ಮತ್ತು ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಣಿಪಾಲದ ರತ್ನ ಸಂಜೀವ ಕಲಾ ಮಂಡಲ ವೇದಿಕೆಯಲ್ಲಿ ದಿನಾಂಕ 22 ಸೆಪ್ಟೆಂಬರ್ 2025ರಂದು ನಡೆದ ನವರಸಗಳಲ್ಲಿ ನವರಾತ್ರಿ ಎಂಬ ಕವಿಗೋಷ್ಠಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಧ್ಯಕ್ಷರಾದ ಮಹೇಶ್ ಠಾಕೂರ್ ಮಾತನಾಡಿ “ತೆರೆಮರೆಯಲ್ಲಿರುವ ಹೂವನ್ನು ಶಿವನ ಮುಕುಟಕ್ಕೆ ಅರ್ಪಿಸಿದಾಗ ಅದು ಶ್ರೇಷ್ಠವಾಗುತ್ತದೆ. ಅದೇ ರೀತಿ ನಾವು ರತ್ನ ಸಂಜೀವ ಕಲಾಮಂಡಲದ ವತಿಯಿಂದ ತೆರೆಮರೆಯ ಸಾಹಿತಿಗಳನ್ನು ಮುನ್ನೆಲೆಗೆ ತರುವ ಪ್ರಯತ್ನಕ್ಕೆ ಮುಂದಡಿ ಇಡುತ್ತಿದ್ದೇವೆ. ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕಲ್ಲಚ್ಚು ಪ್ರಕಾಶನ ಹಾಗೂ ರತ್ನ ಸಂಜೀವ ಕಲಾಮಂಡಲದ ಸಹಯೋಗದೊಂದಿಗೆ ಕಲೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡಲು ಹಾಗೂ ಹೊಸ ಸಾಹಿತಿಗಳಿಗೆ ವೇದಿಕೆ ಸೃಷ್ಟಿಸಲು ಈ ಪ್ರಬುದ್ಧರ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಾವು ತಬಲಾ, ಹಾರ್ಮೋನಿಯಂ, ಕರ್ಣಾಟಕ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಯೋಗವನ್ನು ಪ್ರತಿದಿನ ಬೆಳಗ್ಗೆ ಉಚಿತವಾಗಿ ಹೇಳಿ ಕೊಡುತ್ತಿದ್ದೇವೆ. ಇದೇ ರೀತಿ…
ಬೆಂಗಳೂರು : ಕಾವ್ಯ ಸಂಜೆ ಮತ್ತು ಲಡಾಯಿ ಪ್ರಕಾಶನ ಇವುಗಳ ಸಹಯೋಗದಲ್ಲಿ ಡಾ. ಎಚ್.ಎಸ್. ಅನುಪಮಾ ಇವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 27 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಲಕ್ಷ್ಮಿ ಚಂದ್ರಶೇಖರ್ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ಮಮತಾ ಸಾಗರ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಡುಗಡೆಗೊಳ್ಳಲಿರುವ ಪುಸ್ತಕಗಳಾದ ‘ಎರಡಳಿದು’ ಮತ್ತು ‘ಅಮ್ಮಮ್ಮನ ಕವಿತೆಗಳು’ ಕುರಿತು ಕವಿಗಳಾದ ಎಚ್.ಎನ್. ಆರತಿ ಮತ್ತು ಯುವ ಬರಹಗಾರರಾದ ದಾದಾಪೀಠ್ ಜೈಮನ್ ಇವರು ಮಾತನಾಡಲಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಸಮ್ಮೇಳನ ಸಮಿತಿ ಮಂಗಳೂರು ಇವರ ವತಿಯಿಂದ ನವೆಂಬರ್ ತಿಂಗಳ 09 ತಾರೀಖಿನಂದು ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಒಂದು ದಿನದ ಸಮ್ಮೇಳನ ‘ವರ್ಣ ಯಾನ 2025’ ಇದರ ಲಾಂಛನ ಹಾಗೂ ಶೀರ್ಷಿಕೆ ಬೆಡುಗಡೆ ಸಮಾರಂಭವು ದಿನಾಂಕ 22 ಸೆಪ್ಟೆಂಬರ್ 2025ರಂದು ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ನಡೆಯಿತು. ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆ ಕೊಡಿಯಾಲ್ ಬೈಲು ಇಲ್ಲಿ ವಿವಿಧ ಕಾರ್ಯ ಚಟುವಟಿಕೆಗಳೊಂದಿಗೆ ನಡೆಯಲಿದ್ದು, ಈ ಕಾರ್ಯಕ್ರಮದ ಲಾಂಛನವನ್ನು ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ.ಫಾ. ಮೆಲ್ವೀನ್ ಪಿಂಟೋ ಎಸ್.ಜೆ. ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರೆ.ಫಾ. ಜಾನ್ಸನ್ ಪಿಂಟೋ ಎಸ್.ಜೆ. ಬಿಡುಗಡೆಗೊಳಿಸಿದರು. ಸಮ್ಮೇಳನದ ಶೀರ್ಷಿಕೆಯನ್ನು ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಮಹಾಲಸಾ ಕಲಾ ಶಾಲೆಯ ಪ್ರಾಚಾರ್ಯರಾದ ಮೋಹನ್ ಕುಮಾರ್ ರವರು ಬಿಡುಗಡೆಗೊಳಿಸಿದರು. ಮಂಗಳೂರು ಉತ್ತರ ಚಿತ್ರಕಲಾ ಶಿಕ್ಷಕರ ಘಟಕದ ಅಧ್ಯಕ್ಷರಾದ ರಾಜೇಶ್ವರಿ ಸಮ್ಮೇಳನ ಸಮಿತಿಯ ಕೋಶಾಧಿಕಾರಿ ದಿನೇಶ್ ಶೆಟ್ಟಿಗಾರ್,…
ಉಪ್ಪಿನಕುದ್ರು : ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ನಿರಂತರ 111ನೇ ತಿಂಗಳ ಕಾರ್ಯಕ್ರಮವು ದಿನಾಂಕ 21 ಸೆಪ್ಟೆಂಬರ್ 2025ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಅದ್ದೂರಿಯಾಗಿ ನಡೆಯಿತು. ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದಲ್ಲಿ ಸತೀಶ್ ನಾಯಕ್ ಗುಡ್ಡೆಯಂಗಡಿ, ರಾಧಾಕೃಷ್ಣ ಪ್ರಭು, ಡಾ. ಕಾಶೀನಾಥ್ ಪೈ ಗಂಗೊಳ್ಳಿ, ಗಿರೀಶ್ ನಾಗೇಶ್ ಪ್ರಭು, ಗಣೇಶ್ ಭಟ್, ಕೀರ್ತನಾ ಭಟ್, ಜಯಂತಿ ಗಣಪತಿ ಸೇರುಗಾರ್ ಮತ್ತು ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು. ಮಂಗಳೂರಿನ ಕುಮಾರಿ ಪಂಚಮಿ ಭಟ್ ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಗಿರೀಶ್ ನಾಗೇಶ್ ಪ್ರಭು ನೇತೃತ್ವದಲ್ಲಿ ಪಂಚಮಿ ಭಟ್ ಇವರು ಭಜನ್ ಸಂಧ್ಯಾ ಕಾರ್ಯಕ್ರಮವನ್ನು ಅದ್ಭುತವಾಗಿ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ರವರು ಕಾರ್ಯಕ್ರಮ ನಿರ್ವಹಿಸಿದರು. ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ಇವರು ವಂದಿಸಿದರು.