Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಕ್ಕಳಿಗೆ ಯಕ್ಷಗಾನ ಕಲಿಸುವ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಮಹತ್ವಾಕಾಂಕ್ಷೆಯ ನಿಟ್ಟಿನಲ್ಲಿ ಯಕ್ಷಧ್ರುವ- ಯಕ್ಷಶಿಕ್ಷಣವು ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ದಿನಾಂಕ 04 ಜುಲೈ 2025ರಂದು ಉದ್ಘಾಟನೆಗೊಂಡಿತು. ಮೂರನೇ ವರ್ಷದ ಯಕ್ಷ ಶಿಕ್ಷಣವನ್ನು ಮಂಗಳೂರು ಪಟ್ಲ ಪೌಂಡೇಶನ್ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್ ದೀಪ ಬೆಳಗಿಸಿ ಉದ್ಘಾಟಿಸಿ “ಯಕ್ಷಗಾನವು ಪಠ್ಯದ ಒಂದು ಅಧ್ಯಾಯವಾಗಿ ಮಕ್ಕಳಿಗೆ ಭೋದನೆಯಾಗಬೇಕು” ಎಂದು ಆಗ್ರಹಿಸಿದರು. ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ, ರುವಾರಿ ಪಣಂಬೂರು ಶ್ರೀ ವಾಸುದೇವ ಐತಾಳ್ ಪ್ರಸ್ತಾವನೆಗೈದು, “ಯಕ್ಷಗಾನ ಮಕ್ಕಳ ಮಾನಸಿಕ ದೃಡತೆಯೊಂದಿಗೆ ಏಕಾಗ್ರತೆ ಹೆಚ್ಚಿಸಿ ಮಕ್ಕಳು ಉತ್ತಮ ಅಂಕ ಪಡೆಯಲು ಸಹಕಾರಿಯಾಗುತ್ತದೆ. ಮುಲ್ಲಕಾಡು ಶಾಲೆಯಲ್ಲಿ ಯಕ್ಷ ಶಿಕ್ಷಣ ಪಡೆದು ಶಾಲಾ ವ್ಯಾಸಂಗದಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಬಾಲಕಿ ಕುಮಾರಿ ಸುಜಾತ ಮಾದರಿ” ಎಂದು ತಿಳಿಸಿದರು. ಸಭೆಯ ಅಧ್ಯಕ್ಷೆ ಹಾಗೂ ಶಾಲಾ ಎಸ್.ಡಿ.ಸಿ. ಅಧ್ಯಕ್ಷೆ ಶ್ರೀಮತಿ ಗೀತಾ ಶೆಟ್ಟಿ ಮಾತನಾಡಿ ಯಕ್ಷ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಸಹಕರಿಸುತ್ತಿರುವ ಶಾಲಾ…
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಹಾಗೂ ಜೇನುಗೂಡು ಕಲಾ ಬಳಗ ಕೆಂಗೇರಿ ಇದರ ವತಿಯಿಂದ ಸಾಹಿತಿ ಶ್ರೀ ರಾಂ.ಕೆ. ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ, ಯುವ ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಇವರ ಪುಸ್ತಕ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 06 ಜುಲೈ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಎರಡನೇ ಮಹಡಿಯಲ್ಲಿರುವ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಖ್ಯಾತ ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಇವರು ಯುವ ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಇವರ ‘ದ ಕಂಪ್ಯಾರಿಟಿವ್ ಸ್ಟಡಿ ಆಫ್ ಡ್ರಮಾಟಿಕ್ ಥಿಯರೀಸ್ ಇನ್ ಟಿ.ಎಸ್. ಎಲಿಯಟ್ಸ್ ಪ್ಲೇಸ್’ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ಣಾಟಕ ಗಾಂಧಿ ಸ್ಮಾರಕ ನಿಧಿ ಇವರ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು 2023-24ರ ಸಾಲಿನ ಸಾಹಿತಿ ಶ್ರೀ ರಾಂ.ಕೆ. ಹನುಮಂತಯ್ಯ ದತ್ತಿ ಪುಸ್ತಕ ಪ್ರಶಸ್ತಿಯನ್ನು ಶ್ರೀಮತಿ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ಪುತ್ತೂರಿನಲ್ಲಿ ಪ್ರಾರಂಭವಾಗಿ ಮೂವತ್ತು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ಯೋಜಿತಗೊಂಡವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎಂಬ ಶೀರ್ಷಿಕೆಯೊಂದಿಗೆ ಪ್ರಸ್ತುತಗೊಳ್ಳಲಿರುವುದು. ದಿನಾಂಕ 22 ಜೂನ್ 2025ರಂದು ಪ್ರಾರಂಭದ ಉದ್ಘಾಟನಾ ಕಾರ್ಯಕ್ರಮವಾಗಿ ನೃತ್ಯಾಂತರಂಗ 130ನೇ ಸರಣಿ ಆಯೋಜಿಸಿ ಸಂಸ್ಥೆಯ ನಿರ್ದೇಶಕರು ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರೀತಿಕಲಾರವರು ಮಹಾಲಿಂಗೇಶ್ವರ ದೇವರ ಕುರಿತಾದ ವಿದುಷಿ ಸುಮಂಗಲಾ ರತ್ನಾಕರ ಮಂಗಳೂರು ಇವರು ಬರೆದ ಪದವರ್ಣವನ್ನು ಪ್ರಸ್ತುತಪಡಿಸಿದರು. ವಿದ್ವಾಂಸರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತು ಅವರ ಪತ್ನಿ ಶ್ರೀಮತಿ ಸುಧಾ ಎಸ್. ಭಟ್ ಕಶೆಕೋಡಿ ಇವರು ಅಭ್ಯಾಗತರಾಗಿ ಶುಭ ಹಾರೈಸಿದರು. ಕುಮಾರಿ ಮಂದಿರ ಕಜೆ ನಿರೂಪಣೆ ಮಾಡಿ, ಕುಮಾರಿ ಮಾತಂಗಿ ಪ್ರಾರ್ಥನೆ, ಕುಮಾರಿ ಲಾಸ್ಯ ಸಂತೋಷ್ ಪರಿಚಯ ಮತ್ತು ವವಿದುಷಿ ಅಕ್ಷತಾ ಕೆ. ವಿಷಯ ಮಂಡನೆ ಮಾಡಿದರು.
ನಾವೆಲ್ಲ ಯಾವ ವಯಸ್ಸಿನಲ್ಲಿ, ಎಂತಹ ಕತೆ, ಕಾದಂಬರಿಗಳನ್ನು ಓದಬೇಕು? ಓದಿ ಏನು ಮಾಡಬೇಕು? ಎಂಬುದನ್ನು ವಿಕಾಸ ಹೊಸಮನಿ ಎಂಬ ಯುವ ಬರಹಗಾರರು ತೋರಿಸಿಕೊಟ್ಟಿದ್ದಾರೆ. ಅವರ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’, ‘ವೀತರಾಗ’, ‘ಮಿಂಚಿನ ಬಳ್ಳಿ’, ‘ಹೃದಯದ ಹಾದಿ’ ಎಂಬ ಗಟ್ಟಿ ಕೃತಿಗಳಲ್ಲಿ ವಿಮರ್ಶೆಯ ಓಘವಿದ್ದರೆ, ‘ಮಂದಹಾಸ’ ಎಂಬ ಸಂಪಾದಿತ ಕೃತಿಯಲ್ಲಿ ಸಮಕಾಲೀನ ಬರಹಗಾರರ ಲಲಿತ ಪ್ರಬಂಧಗಳ ಕಂಪು ತುಂಬಿ ತುಳುಕಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಓದಿನ ಸಾರ್ಥಕ್ಯವನ್ನು ‘ಜೀವ ಸಂವಾದ’ ಎಂಬ ಕೃತಿಯಲ್ಲಿ ಕಾಣುತ್ತೇವೆ. ಕಳೆದ 50 ವರ್ಷಗಳಲ್ಲಿ (1973 -2023) ಕನ್ನಡದ ಕಾದಂಬರಿಯ ಬೆಳೆಯನ್ನು ಸುಮಾರು ನೂರಕ್ಕೂ ಹೆಚ್ಚು ಕೃತಿಗಳ ಕಥೆ ಮತ್ತು ಇತಿಮಿತಿಗಳನ್ನು ಟ್ರೇಲರಿನಂತೆ ಕೊಟ್ಟಿದ್ದಾರೆ. ಕಥಾಸಾರ, ಹೋಲಿಕೆ, ವಿಶ್ಲೇಷಣೆ, ವಿಮರ್ಶಾತ್ಮಕ ಒಳನೋಟ, ಆಯಾ ಕಾದಂಬರಿಗಳಿಂದಾದ ಪ್ರೇರಣೆಗಳ ಬಗ್ಗೆ ಅಧಿಕೃತವಾಗಿ ಬರೆದಿದ್ದಾರೆ. ಆರಂಭದ ಮಾತುಗಳು ಹೀಗಿವೆ. “70ರ ದಶಕದ ಹೊತ್ತಿಗೆ ಕನ್ನಡ ಕಾದಂಬರಿ ಪ್ರಬುದ್ಧಾವಸ್ಥೆಯನ್ನು ತಲುಪಿತ್ತು. ಕಥಾವಸ್ತು, ತಂತ್ರ, ಭಾಷೆ, ಶೈಲಿ, ನಿರೂಪಣೆ ಮತ್ತು ನಾವೀನ್ಯತೆ ಸೇರಿದಂತೆ…
ಪಾದರಸದಂತೆ ಚಟುವಟಿಕೆಯ ಗಾಂಧಿವಾದಿ, ಕನ್ನಡದ ಶಕ್ತಿ ಸಿದ್ದವನಹಳ್ಳಿ ಕೃಷ್ಣಶರ್ಮರು ಒಬ್ಬ ಅಪರೂಪದ ಸಾಹಿತಿ. ಉತ್ತಮ ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ, ಗಾಂಧೀ ವಿಚಾರವಾದಿ, ಸಹಕಾರಿ ಕ್ಷೇತ್ರದ ಹರಿಕಾರ ಮಾತ್ರವಲ್ಲದೆ ಶ್ರೇಷ್ಠ ಪತ್ರಕರ್ತರಾಗಿ ಕನ್ನಡ ನಾಡು ನುಡಿಯ ಬಗ್ಗೆ ಅಪೂರ್ವ ಸೇವೆ ಸಲ್ಲಿಸಿದ ಒಬ್ಬ ಮೇರು ವ್ಯಕ್ತಿ. ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯಲ್ಲಿ 1904 ಜುಲೈ 04ರಂದು ರಂಗಾಚಾರ್ ಮತ್ತು ಶೇಷಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದರು. ಮೈಸೂರು ಪರಕಾಲ ಮಠದ ಸ್ವಾಮಿಗಳಾಗಿದ್ದ ಪ್ರಕಾಂಡ ಪಂಡಿತ ಶ್ರೀ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದರು. ಕೃಷ್ಣಶರ್ಮರು ಇವರ ವಂಶಸ್ಥರು. ಆದ್ದರಿಂದಲೇ ಸಂಸ್ಕಾರ ಹಾಗೂ ವಿದ್ವತ್ತು ಇವರಿಗೆ ರಕ್ತಗತವಾಗಿ ಬಂದಿದ್ದವು. ಹುಟ್ಟೂರಿನಲ್ಲಿಯೇ ಬಾಲ್ಯದ ವಿದ್ಯಾಭ್ಯಾಸವನ್ನು ಪೂರೈಸಿದ ಶರ್ಮರು ಶಾಲೆಯ ಉಪಾಧ್ಯಾಯ ಸೂರಪ್ಪನವರು ಸಂಜೆಯ ವೇಳೆಗೆ ಓದುತ್ತಿದ್ದ ಮಹಾಭಾರತ ವಾಚನಕ್ಕೆ ಮಾರುಹೋದರು. ಚಿತ್ರದುರ್ಗದಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದಾಗ ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದ ಗರಣಿ ರಂಗಾಚಾರ್ಯರ ಪ್ರೋತ್ಸಾಹ ಕೃಷ್ಣಶರ್ಮರಿಗೆ ದೊರೆತಾಗ ಕನ್ನಡದ ಬಗ್ಗೆ…
ಬೆಂಗಳೂರು : ರಂಗ ಸಂಸ್ಥಾನ ಬೆಂಗಳೂರು ಗಾಯಕರಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಹಿಂದೂಸ್ತಾನಿ ಸಂಗೀತ ಸ್ಪರ್ಧೆ ಏರ್ಪಡಿಸಿದ್ದು, ಆಸಕ್ತ 16 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು 06 ರಿಂದ 07 ನಿಮಿಷಗಳ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡನ್ನು ವಾದ್ಯಜೊತೆಗೂಡಿ ಅಥವಾ ಬರೀ ಹಾಡುಗಾರಿಕೆಯ ವಿಡಿಯೋ ಮಾಡಿ 9110879907 ಈ ಸಂಖ್ಯೆಗೆ ವಾಟ್ಸ್ಆಪ್ ಮಾಡಬಹುದಾಗಿದೆ. ಸ್ಪರ್ಧೆಯ ಪ್ರವೇಶ ಶುಲ್ಕ ರೂಪಾಯಿ 300 ಆಗಿದ್ದು, 03 ಆಗಸ್ಟ್ 2025 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 9110879907 ಸಂಖ್ಯೆಯನ್ನು ಸಂಪರ್ಕಿಸಬಹುದು.
ಕೊಪ್ಪಳ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ನಗರಸಭೆ ಮತ್ತು ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಾ. ಫ. ಗು. ಹಳಕಟ್ಟಿ ಜನ್ಮದಿನ ‘ವಚನ ಸಂರಕ್ಷಣಾ ದಿನಾಚರಣೆ’ಯು ದಿನಾಂಕ 02 ಜುಲೈ 2025ರ ಬುಧವಾರದಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಮಾತನಾಡಿ “ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳಿಗೆ ಬಹಳ ವಿಶೇಷ ಸ್ಥಾನವಿದ್ದು, ಡಾ. ಫ.ಗು. ಹಳಕಟ್ಟಿಯವರು ವಚನಗಳ ರಕ್ಷಣೆಗೆ ಶ್ರಮಿಸಿದವರಾಗಿದ್ದರು. ಇಂದಿನ ಜನ ಸಮುದಾಯಕ್ಕೆ ನಟ, ನಟಿಯರು ಆದರ್ಶ ವ್ಯಕ್ತಿಗಳಾಗಿದ್ದಾರೆ. ಆದರೆ, ನಿಜವಾಗಲು ಆದರ್ಶವಾಗಬೇಕಿರುವುದು ಡಾ. ಫ. ಗು. ಹಳಕಟ್ಟಿ ಅವರಂತಹ ಮಹನೀಯರು. ಹಳಕಟ್ಟಿಯವರು ವಚನಗಳ ಸಂಗ್ರಹಣೆ ಮಾಡದೇ ಹೋಗಿದ್ದರೆ, ನಮಗೆ ವಚನ ಸಾಹಿತ್ಯ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಭಾರತದ ಸಂವಿಧಾನದಲ್ಲಿರುವ ಎಲ್ಲಾ ಆಶಯಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದರು.…
ಕೋಲ್ಕತಾ : ಸಮ ಕಲ್ಚರಲ್ ಟ್ರಸ್ಟ್ ಪ್ರಸ್ತುತ ಪಡಿಸುವ ಶ್ರೀ ಸುಪ್ರಿಯೊ ಮಲ್ಲಿಕ್ ಮತ್ತು ಶ್ರೀಮತಿ ರತ್ನ ಮೈತ್ರ ಇವರ ಸ್ಮರಣಾರ್ಥ ‘ಸಮ’ ಸಂಗೀತ ಕಛೇರಿಯನ್ನು ದಿನಾಂಕ 06 ಜುಲೈ 2025ರಂದು ಕೋಲ್ಕತಾ ಇಲ್ಲಿರುವ ಸತ್ಯಜಿತ್ ರಾಯ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಮೂಲ್ಕಿ: ಕಿನ್ನಿಗೋಳಿಯ ದಿವಂಗತ ಕೊ. ಅ. ಉಡುಪ ಅವರ ಸಂಸ್ಮರಣಾರ್ಥ ಪ್ರತಿ ವರ್ಷ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಆಯ್ಕೆಯಾಗಿದ್ದಾರೆ. ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ತಿಳಿಸಿದ್ದಾರೆ. ಪ್ರಶಸ್ತಿಯು ರೂಪಾಯಿ 10 ಸಾವಿರ ನಗದು ಹಾಗೂ ಗೌರವ ಫಲಕ ಹೊಂದಿದೆ. 24 ಜುಲೈ 2025ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅರ್ಥಶಾಸ್ತ್ರದ ಕನ್ನಡೀಕರಣದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರಾಗಿರುವ ಶಿಶಿಲರು ಇದುವರೆಗೆ 165 ಅರ್ಥಶಾಸ್ತ್ರ ಕನ್ನಡ ಕೃತಿ, 10 ಅರ್ಥಶಾಸ್ತೆ ಕೃತಿ ಇಂಗ್ಲೀಷ್‌ನಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ 52 ಸೃಜನಶೀಲ ಕೃತಿ, ತುಳುವಿನಲ್ಲಿ 4 ಕೃತಿ ರಚಿಸಿರುವ ಇವರು ಕನ್ನಡದಲ್ಲಿ 10 ಕಾದಂಬರಿ ಮತ್ತು 10 ಸಣ್ಣ ಕಥಾ ಸಂಕಲನ ರಚಿಸಿದ್ದಾರೆ. ಇವರ ಆತ್ಮಕಥನ ‘ಬೊಗಸೆ ತುಂಬಾ ಕನಸು’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದು, ನಾಲ್ಕು ಆವೃತ್ತಿಗಳನ್ನು ಕಂಡಿದೆ. ಯುರೋಪ್ ಸುತ್ತಿ ಇವರು ರಚಿಸಿದ…
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ತಾಲೂಕು ಇದರ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಮತ್ತು ಫಣಿಗಿರಿ ಪ್ರಶಸ್ತಿ ಪ್ರದಾನ -2025 ಕಾರ್ಯಕ್ರಮವನ್ನು ದಿನಾಂಕ 06 ಜುಲೈ 2025ರಂದು ಬೆಳಗ್ಗೆ ಗಂಟೆ 9-30ಕ್ಕೆ ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟನೆ ಮಾಡಲಿದ್ದು, ಹಿರಿಯ ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ‘ಫಣಿಗಿರಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಶ್ರೀಧರ ಡಿ.ಯಸ್. ಕಿನ್ನಿಗೋಳಿ ಮತ್ತು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರಿಂದ ಪ್ರಸಂಗ ಕರ್ತರಿಗೆ ಯಕ್ಷಗಾನ ಪ್ರಸಂಗ ರಚನೆಯ ಮಾರ್ಗದರ್ಶನ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಭಾಗವಹಿಸಲಿರುವರು 9448344380 ಸಂಖ್ಯೆಯನ್ನು ಸಂಪರ್ಕಿಸಿರಿ. ಯಕ್ಷಗಾನ ಪ್ರಸಂಗ ರಚನಾ ಶಿಬಿರಗಳ ಅವಶ್ಯಕತೆ ಶಾಸ್ತ್ರಬದ್ಧ ವಿನ್ಯಾಸದ ಅಗತ್ಯತೆ : ಇಂದಿನ ಯಕ್ಷಗಾನ ಪ್ರಪಂಚದಲ್ಲಿ ನವೀನತೆ ಮತ್ತು ಪ್ರಾಕೃತಿಕತೆಯ ಸಮನ್ವಯವನ್ನು…