Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಶ್ರೀನಿವಾಸ್ ಯುನಿವರ್ಸಿಟಿಯಿಂದ ಶ್ರೀ ಶ್ಯಾಮರಾವ್ ಸ್ಮರಣೆಯಲ್ಲಿ ನೀಡಲಾಗುತ್ತಿರುವ ‘ಸಾಧನಶ್ರೀ -2025’ ಪ್ರಶಸ್ತಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಭಾಗವತರಾದ ಸನ್ಮಾನ್ಯ ಶ್ರೀ ರಾಮಕೃಷ್ಣ ಮಯ್ಯ ಇವರನ್ನು ಆಯ್ಕೆ ಮಾಡಲಾಗಿದ್ದು, ದಿನಾಂಕ 14 ಫೆಬ್ರವರಿ 2025ರಂದು ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
ಕಾಸರಗೋಡು : ದ್ರಾವಿಡ ಭಾಷಾ ಅನುವಾದಕರ ಸಂಘ ಹಾಗೂ ಕಾಸರಗೋಡು ನುಳ್ಳಿಪ್ಪಾಡಿ ಕನ್ನಡ ಭವನ ಗ್ರಂಥಾಲಯದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 09 ಮಾರ್ಚ್ 2025ರಂದು ಒಂದು ದಿನದ ಭಾಷಾಂತರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕನ್ನಡ ಭವನ ಗ್ರಂಥಾಲಯದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಖ್ಯಾತ ಭಾಷಾಂತರಕಾರರು ಮಲಯಾಳದಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮಲಯಾಳಂಗೆ ಭಾಷಾಂತರ ಮಾಡುವಾಗ ಎದುರಿಸಬೇಕಾದ ಸಮಸ್ಯೆಗಳನ್ನು ಕುರಿತು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಕನ್ನಡ ಮತ್ತು ಮಲಯಾಳಂ ಓದಲು ಮತ್ತು ಬರೆಯಲು ತಿಳಿದಿರುವ ಮತ್ತು ಅನುವಾದದಲ್ಲಿ ಆಸಕ್ತಿಯುಳ್ಳವರು ದಿನಾಂಕ 28 ಫೆಬ್ರವರಿ 2025ರೊಳಗೆ ಈ ಕೆಳಗಿನ ಸಂಖ್ಯೆಗಳಲ್ಲಿ ಒಂದನ್ನು ಸಂಪರ್ಕಿಸಬೇಕು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು. ಕಾರ್ಯಾಗಾರಕ್ಕೆ ಯಾವುದೇ ನೋಂದಣಿ ಶುಲ್ಕವಿಲ್ಲ ಹಾಗೂ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್, ಗ್ರಂಥಾಲಯ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಡಿಬಿಟಿಎ ಮಲಯಾಳಂ ಸಂಯೋಜಕ ರವೀಂದ್ರನ್ ಪಾಡಿ ಮಾಹಿತಿ ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ…
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಶ್ರೀಮತಿ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2025’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಪ್ರಶಸ್ತಿಯನ್ನು ತುಳು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಅನನ್ಯ ಸೇವೆಗಾಗಿ ನವೀನ್ ಡಿ. ಪಡೀಲ್ ಇವರಿಗೆ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸದಾನಂದ ಸುವರ್ಣ ಇವರ ನಿರ್ದೇಶನದಲ್ಲಿ ಮಂಗಳೂರಿನ ಸುವರ್ಣ ಪ್ರತಿಷ್ಠಾನದವರು ‘ಕೋರ್ಟ್ ಮಾರ್ಷಲ್’ ನಾಟಕ ಪ್ರದರ್ಶನ ನೀಡಲಿದ್ದಾರೆ.
ಮಂಗಳೂರು: ರಾಷ್ಟ್ರೀಯ ಸಾಂಸ್ಕೃತಿಕ ಸಂಘಟನೆಯಾದ ‘ಸ್ಪಿಕ್ ಮೆಕೆ’ಯ ಪ್ರಾದೇಶಿಕ ಕೇಂದ್ರಗಳಲ್ಲಿ ಒಂದಾದ ಎನ್. ಐ. ಟಿ. ಕೆ. ಸುರತ್ಕಲ್ ಇಲ್ಲಿನ ವಿದ್ಯಾರ್ಥಿಗಳು ಆಯೋಜಿಸುವ ‘ಆರಾಧನ 2025’ರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಚಿನ್ಮಯೀ ಕೋಟಿಯಾನ್ ಇವರಿಂದ ಭರತನಾಟ್ಯ ಕಾರ್ಯಕ್ರಮ ದಿನಾಂಕ 06 ಫೆಬ್ರವರಿ 2025 ರಂದು ನಡೆಯಿತು. ಈಕೆ ಡಾ. ಭ್ರಮರಿ ಶಿವಪ್ರಕಾಶ್ ನೇತೃತ್ವದ ‘ನಾದನೃತ್ಯ ಕಲಾಸಂಸ್ಥೆ’ಯಲ್ಲಿ 7 ವರ್ಷಗಳಿಂದ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿರುವ ಶಾರದಾ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಈಕೆ ಸಂಗೀತ, ಭರತನಾಟ್ಯ, ಭಾಗವದ್ಗೀತ ಕಂಠಪಾಠ, ಮೂಕಾಭಿನಯ, ಪ್ರಬಂಧ ಸ್ಪರ್ಧೆ ಮುಂತಾದವುಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆದ್ದಿರುತ್ತಾಳೆ. ಸಂಗೀತದಲ್ಲೂ ಆಸಕ್ತಿ ಹೊಂದಿರುವ ಈಕೆ ಸಂಗೀತದ ಆರಂಭಿಕ ಶಿಕ್ಷಣವನ್ನು ವಿದುಷಿ ಸಾವಿತ್ರಿ ರಾವ್ ಇವರಿಂದ ಪಡೆದು ಇದೀಗ ಸೀನಿಯರ್ ಹಂತದ ಶಿಕ್ಷಣವನ್ನು ವಿದುಷಿ ಶಿಲ್ಪಾ ರಾವ್ ಇವರ ಬಳಿ ಮುಂದುವರಿಸುತ್ತಿದ್ದಾಳೆ. ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 96% ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ ಈಕೆ ವೀಣಾ ವಾದನದಲ್ಲೂ ಆಸಕ್ತಿ ಹೊಂದಿದ್ದು, ಗುರು…
ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ದಿನಾಂಕ 08 ಫೆಬ್ರವರಿ 2025ರಂದು ನಡೆಯಿತು ಹಿರಿಯ ರಂಗಕರ್ಮಿ ಗುಲ್ವಾಡಿ ರಾಮದಾಸ್ ದತ್ತಾತ್ರೇಯ ಭಟ್ ಇವರಿಗೆ ‘ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪುರಸ್ಕಾರ’ ಹಾಗೂ ಹಿರಿಯ ಸಾಹಿತಿ, ಅನುವಾದಕಿ ಡಾ. ಗೀತಾ ಶೆಣೈಯವರಿಗೆ ‘ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಪ್ರಸ್ತಾವಿಕವಾಗಿ ಮಾತನಾಡಿ, “ಡಾ. ಪಿ. ದಯಾನಂದ ಪೈಯವರು ಒಂದು ಕೋಟಿ ರೂ. ದೇಣಿಗೆಯನ್ನು ವಿಶ್ವ ಕೊಂಕಣಿ ಕೇಂದ್ರಕ್ಕೆ ನೀಡಿದ್ದು, ಇದನ್ನು ಬಳಸಿಕೊಂಡು ಪ್ರತಿ ವರ್ಷ…
ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಯೋಗದೊಂದಿಗೆ ಯಕ್ಷಗಾನ ಕೇಂದ್ರ ಇಂದ್ರಳಿ ಇದರ 52ನೇ ವಾರ್ಷಿಕೋತ್ಸವ ಹಾಗೂ ದಿ. ಎಂ. ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08 ಫೆಬ್ರವರಿ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ “ಯಕ್ಷಗಾನ ಕಲೆ ಬಹಳ ಪ್ರಾಚೀನವಾದ ರಂಗಕಲೆ. ಯಕ್ಷಗಾನದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಬರುತ್ತದೆ. ವಿದ್ಯಾರ್ಥಿಗಳು ಶಾಲಾಶಿಕ್ಷಣದ ಜೊತೆಗೆ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಂದ್ರಾಳಿ ಯಕ್ಷಗಾನ ಕೇಂದ್ರದ ಮೂಲಕ ವಿಶೇಷ ಪ್ರಯತ್ನ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ. ಮಾಹೆ ವಿ. ವಿ. ಈ ಕಾರ್ಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ” ಎಂದು ಹೇಳಿದರು. ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಮಾತನಾಡಿ “ಶಿಕ್ಷಣದ ಜೊತೆಗೆ ಯಕ್ಷಗಾನವೂ ವಿದ್ಯಾರ್ಥಿ ಜೀವನದಲ್ಲಿ ಸಿಕ್ಕರೆ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಪೂರಕವಾಗಲಿದೆ. ಇಂದ್ರಾಳಿ…
ಬೆಂಗಳೂರು : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-108’ರ ಕಾರ್ಯಕ್ರಮ ದಿನಾಂಕ 08 ಫೆಬ್ರವರಿ 2025 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಿರೀಟಕ್ಕೆ ನವಿಲಗರಿಯನ್ನು ಇಡುವ ಮೂಲಕ ಉದ್ಘಾಟಿಸಿದ ರಂಗಭೂಮಿ, ಚನಚಿತ್ರ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆಯಾದ ಡಾ. ಉಮಾಶ್ರೀ ಮಾತನಾಡಿ “ಕರಾವಳಿಯ ಜೀವಂತ ಕಲೆಯಲ್ಲಿ ಜೀವಿಸುವ ಭಾಗ್ಯ ಸಿಕ್ಕಿದೆ. ಬಹುವಾಗಿ ಪಾಂಡಿತ್ಯ ಉಳ್ಳವರು ಶಾಸ್ತೀಯವಾಗಿ ಕಲಿತು, ಪರಿಪೂರ್ಣತೆಯನ್ನು ಸಾಧಿಸಿದ ಸಾವಿರ ಸಾವಿರ ಸಂಖ್ಯೆಗೂ ಮೀರಿದ ಕಲಾವಲಯವಾಳಿದ ಲೋಕಕ್ಕೆ ನಾನು ನನ್ನ ಸಂತೋಷಕ್ಕಾಗಿ ಬಂದಿದ್ದೇನೆ. ಯಶಸ್ವೀ ಕಲಾವೃಂದದ ಶ್ವೇತಯಾನದ ನೂರೆಂಟರಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಪುಣ್ಯ. ಶಾಸ್ತ್ರೀಯವಾಗಿ ಕಲಿತ ಪಂಡಿತರ ಟೀಕೆ ಟಿಪ್ಪಣಿಗಳಿಂದ ಹೊರತಾದವರು ನಾವು. ಯಾಕೆಂದರೆ ಯಕ್ಷ ಕಲೆಯೊಳಗೆ ಬೆರೆಯುವ ಅವಕಾಶಕ್ಕೆ ಖುಷಿ ಪಟ್ಟು ಬಂದವಳು ನಾನು. ಈ ಕಲೆಯನ್ನು ಗೌರವಿಸುತ್ತಾ ಒಪ್ಪಿದ್ದೇನೆ, ಅಪ್ಪಿದ್ದೇನೆ ಎಂದರು. ಪ್ರೊ. ಪವನ್ ಕಿರಣ್‌ಕೆರೆ ಮಾತನಾಡಿ ಮಕ್ಕಳಿಗೆ ಕಲೆಯನ್ನು ಕಲಿಸುತ್ತಾ ಕಲೆಯನ್ನು ಕೈ ದಾಟಿಸುವ…
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಶೇಖರ್ ಡಿ. ಶೆಟ್ಟಿಗಾರ್ ಯಕ್ಷಗಾನ ಕಲೆಯಲ್ಲಿ ಕೇಳಿ ಬರುವಂತಹ ಪ್ರಸಿದ್ಧ ಹೆಸರು. 11.02.1966ರಲ್ಲಿ ಪ್ರಸಿದ್ಧ ವೇಷಧಾರಿ, ವೇಷಭೂಷಣ ಪ್ರಸಾದನ ತಜ್ಞ, ಮೋಹಿನೀ ಕಲಾ ಸಂಪದ ಕಿನ್ನಿಗೋಳಿ ಸಂಸ್ಥೆಯ ಸ್ಥಾಪಕರಾದಂತಹ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಮತ್ತು ಮೋಹಿನೀ ಡಿ ಶೆಟ್ಟಿಗಾರ್ ದಂಪತಿಯ ಸುಪುತ್ರನಾಗಿ ಜನನ. ಪ್ರಸ್ತುತ ದುಬಾಯಿ-ಯುಎಇಯ ಎನ್‌ಎಂಸಿ ಗ್ರೂಪ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಉಚ್ಚಿಲದ ಮಹಾಲಕ್ಷ್ಮಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶಾಂತಾ ಅವರನ್ನು ವಿವಾಹವಾಗಿ, ಸ್ವತಃ ಹಿಮ್ಮೇಳ-ಮುಮ್ಮೇಳದ ಕಲಾವಿದರಾಗಿ ರೂಪು ಪಡೆಯುತ್ತಿರುವ, ಹೃಷಿಕೇಶ್ ಮತ್ತು ವಿಘ್ನೇಶ್ ಎಂಬ ಇಬ್ಬರು ಗಂಡು ಮಕ್ಕಳನ್ನು ಇವರು ಹೊಂದಿದ್ದಾರೆ. ಶೆಟ್ಟಿಗಾರ್ ಅವರ ಕುಟುಂಬವು ಏಳೆಂಟು ದಶಕಗಳಿಗೂ ಹೆಚ್ಚು ಕಾಲ ಈ ಸಾಂಪ್ರದಾಯಿಕ ಪ್ರಾಚೀನ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡಿದೆ. ಅಜ್ಜ ವೀರಯ್ಯ ಶೆಟ್ಟಿಗಾರ್ ಶನಿ ಪೂಜೆಯ ಪ್ರಸಿದ್ಧ ಪ್ರವಚನಕಾರರಾಗಿದ್ದರೆ, ತಂದೆ ದಾಮೋದರ್ ಶೆಟ್ಟಿಗಾರ್ ಮೂರು ದಶಕಗಳಿಗೂ ಹೆಚ್ಚು ಕಾಲ ನಟ, ನೃತ್ಯ ಸಂಯೋಜಕ,…
ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಆಯೋಜನೆಯ ‘ಡಾ.ಪಿ ದಯಾನಂದ ಪೈ ಎಸ್. ಬಿ. ಎಫ್. ಯುವ ಮಹೋತ್ಸವ್-2025’ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 09 ಫೆಬ್ರವರಿ 2025ರ ಭಾನುವಾರ ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ ನಡೆಯಿತು. ಉಸ್ತಾದ್ ರಫೀಕ್ ಖಾನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಎಂ. ಆರ್. ಪಿ. ಎಲ್. ಇದರ ಕೃಷ್ಣ ಹೆಗ್ಡೆ, ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿ ಅಂಕುಶ್ ಎನ್. ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಸ್ವಾಗತಿಸಿ, ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಪನ್ಯಾಸಕಿ ಧೃತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಸಂಗೀತ ಭಾರತಿ ಪ್ರತಿಷ್ಠಾನದ ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರುಳೀಧರ ಜಿ. ಶೆಣೈ, ಡಾ.ರಮೇಶ್ ಕೆ.ಜಿ, ಉಪನ್ಯಾಸಕಿ ಉಜ್ವಲ್ ಪ್ರದೀಪ್ ಮೊದಲಾದವರು ಸಹಕರಿಸಿದರು. ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರೊ.…
ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ (ರಿ) ಉರ್ವಸ್ಟೋರ್ ಮಂಗಳೂರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸುವ ‘ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 16 ಫೆಬ್ರವರಿ 2025ರ ರವಿವಾರದಂದು ಸಂಜೆ 4.30ರಿಂದ ಮಂಗಳೂರಿನ ವಿ. ಟಿ. ರಸ್ತೆ ಯಲ್ಲಿರುವ ಶ್ರೀ ಕೃಷ್ಣಮ೦ದಿರ ಸಭಾ೦ಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ಬಾನ್ಸುರಿ ವಾದಕ ಶ್ರೀ ಸಮೀರ್ ರಾವ್ ಮೈಸೂರು ಇವರಿಂದ ಬಾನ್ಸುರಿ ವಾದನ, ಮೈಸೂರಿನ ಶ್ರೀ ಭೀಮಾಶಂಕರ್ ಬಿದನೂರು ಮತ್ತು ಕು. ಪಂಚಮಿ ಬಿದನೂರು ಇವರಿಂದ ತಬ್ಲಾ, ಮೈಸೂರಿನ ಪಂಡಿತ್ ವೀರಭದ್ರಯ್ಯ ಹಿರೇಮಠ ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ಗಾಯನ ಕಾರ್ಯಕ್ರಮಕ್ಕೆ ಸಹ ಕಲಾವಿದರಾಗಿ ತಬಲದಲ್ಲಿ ಶ್ರೀ ಆದರ್ಶ ಶೆಣೈ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಶ್ರೀರಾಮ ಭಟ್ ಸಹಕರಿಸಲಿದ್ದಾರೆ.