Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಬ್ಯಾರಿ ಬರಹಗಾರರ ನಡುವೆ ಪರಸ್ಪರ ಸಮನ್ವಯ ಏರ್ಪಡಿಸುವ ನಿಟ್ಟಿನಲ್ಲಿ ಬ್ಯಾರಿ ಬರಹಗಾರರ ಸ್ನೇಹಕೂಟವನ್ನು ದಿನಾಂಕ 14 ಫೆಬ್ರವರಿ 2025 ರಂದು ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಸಂಜೆ 4.30ರಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು ಕಾರ್ಯಕ್ರಮದ ಸದಸ್ಯ ಸಂಚಾಲಕ ಯು.ಎಚ್. ಖಾಲಿದ್ ಉಜಿರೆ -9845499527 ಅವರನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದಾರೆ
ಉಡುಪಿ : ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ಜಂಟಿ ಆಶ್ರಯದಲ್ಲಿ ಶಿವರಾತ್ರಿ ಪ್ರಯುಕ್ತ ದಿನಾಂಕ 02 ಮಾರ್ಚ್ 2025 ರವಿವಾರದಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಆಯ್ದ ತಂಡಗಳ ಭಜನೆ ಜುಗಲ್ ಬಂದಿ ಸ್ಪರ್ಧೆಯನ್ನು ಮಲ್ಪೆ ಪಡುಕೆರೆಯ ಶ್ರೀ ದೇವಿ ಭಜನಾ ಮಂದಿರದ ಆವರಣದ ಕಡಲ ತಡಿಯಲ್ಲಿ ಆಯೋಜಿಸಲು ಉದ್ದೇಶಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತ ತಂಡಗಳು ದಿನಾಂಕ 12 ಫೆಬ್ರವರಿ 2025ನೇ ತಾರೀಖಿನೊಳಗೆ ತಮ್ಮ ತಂಡ ಹಾಡಿರುವ ಭಜನೆಯ ವಿಡಿಯೋವನ್ನು 9900408243, 9743579059, 9743493177 ಮೊಬೈಲ್‌ಗೆ ವಾಟ್ಸಾಪ್ ಮಾಡಬೇಕಾಗಿ ವಿನಂತಿಸಲಾಗಿದೆ. ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು ಬಹುಮಾನ ಪ್ರಥಮ ರೂ.25,000/-, ದ್ವಿತೀಯ ರೂ.20,000/-, ತೃತೀಯ ರೂ.15,000/- ಹಾಗೂ ಉತ್ತಮ ಹಾಡುಗಾರ, ತಬಲಾ, ಹಾರ್ಮೋನಿಯಂ ವಾದಕರಿಗೆ ಪ್ರತ್ಯೇಕ ಬಹುಮಾನವಿದೆ.
ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 278ನೇ ಕಾರ್ಯಕ್ರಮವು ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಸುರ್ ಸೊಭಾಣ್ ಶಾಸ್ತ್ರೀಯ ಗಾಯನ ತರಬೇತಿಯ 65 ವಿದ್ಯಾರ್ಥಿಗಳು ‘ಸುರಾಂಗಾಣಿಂ’ (ಸುಮಧುರ ಹಾಡುಗಳು) ಸಂಗೀತ ರಸಮಂಜರಿಯನ್ನು ನಡೆಸಿಕೊಟ್ಟರು. ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಗಂಟೆ ಬಾರಿಸಿ ಈ ಕಾರ್ಯಕ್ರಮಕ್ಕೆ ಚಲಾವಣೆ ನೀಡಿದರು. ಹಿಂದೂಸ್ತಾನಿ ಗಾಯನದಲ್ಲಿ ಪದವಿ ಪಡೆದ ಕೊಂಕಣಿ ಗಾಯಕಿ ಶಿಲ್ಪಾ ಕುಟಿನ್ಹಾ ಇವರ ನಿರ್ದೇಶನದಲ್ಲಿ ಈ ಸಂಗೀತ ಸಂಜೆ ಪ್ರಸ್ತುತವಾಯಿತು. ಮಕ್ಕಳು ಕೊಂಕಣಿಯ 6 ಹಾಡುಗಳು ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ 4 ಹಾಡುಗಳನ್ನು ಉತ್ಸಾಹದಿಂದ ಸಾದರಪಡಿಸಿದರು. ಮಕ್ಕಳ ಪೋಷಕರೂ ಒಂದು ಹಾಡನ್ನು ಹಾಡಿದರು. ಹದಿನಾಲ್ಕು ಮಕ್ಕಳು ಹಾಡುಗಳ ಬಗ್ಗೆ, ತಮ್ಮ ಕಲಿಕೆಯ ಬಗ್ಗೆ ಮಾಹಿತಿ ನೀಡಿ ನಿರೂಪಿಸಿದರು. ಆರಂಭದಲ್ಲಿ ಕ್ಲಾರಾ ಡಿಕುನ್ಹಾ ಇವರಿಂದ ಕೊಳಲು ವಾದನ ನಡೆಯಿತು. ಸಂಗೀತದಲ್ಲಿ ಸಹಕರಿಸಿದ ರಸೆಲ್ ರೊಡ್ರಿಗಸ್ (ಬೇಸ್ ಗಿಟಾರ್), ಆಶ್ವಿಲ್ ಕುಲಾಸೊ (ಕೀ ಬೋರ್ಡ್), ಗ್ಲೆನನ್ ಡಿಸೋಜ…
ಚನ್ನರಾಯಪಟ್ಟಣ : ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಇದರ ‘ಪ್ರತಿಮೋತ್ಸವ – 2025’ ಕಾರ್ಯಕ್ರಮವಿ ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರದ ಉಪವಿಭಾಗಾಧಿಕಾರಿಗಳಾದ ಶ್ರೀನಿವಾಸಗೌಡ ಕೆ. ಆರ್. ಮಾತನಾಡಿ “ಮಕ್ಕಳನ್ನು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿದಷ್ಟು ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ದೈಹಿಕವಾಗಿ ಸದೃಢರಾಗುತ್ತಾರೆ. ಕಲೆ ಸಾಹಿತ್ಯ ನಾಟಕಗಳಲ್ಲಿ ತೊಡಿಸಿವುದರಿಂದ ಮಕ್ಕಳಿಗೆ ಸಾಮಾಜಿಕ ಕಾಳಜಿ ಹೆಚ್ಚುತ್ತದೆ. ಅದು ಇವತ್ತಿನ ಕಾಲ ಘಟ್ಟದ ಮಕ್ಕಳಿಗೆ ತುಂಬಾ ಅಗತ್ಯ ಇದೆ. ನಮ್ಮ ಭಾಷೆ, ಜಲ ಸಂಸ್ಕೃತಿ ದೇಶಾಭಿಮಾನ, ನಾಯಕತ್ವದ ಗುಣಗಳು ಇಂತಹ ಕಡೆ ಮಕ್ಕಳನ್ನು ಸೇರಿಸಿದಾಗ ಮಾತ್ರ ಬೆಳೆಯ ಸಾಧ್ಯ ಎಂದರು. ಮಕ್ಕಳ ಕೈಯಲ್ಲಿ ಗಿಡ ನೆಡಿಸಿ ಪರಿಸರ ಕಾಳಜಿ ಬೆಳಸಿ, ಈ ದೇಶದ ನಾಯಕರ ಪುಸ್ತಕಗಳನ್ನು ಓದಿಸಿ, ಆಗ ನಾಯಕನ ಗುಣಗಳು ಬರುವುದು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಮೊದಲು ಟೀವಿ ಮೊಬೈಲ್‌ನಿಂದ ದೂರ ಬಂದು ವಾರಕ್ಕೆ ಒಂದು ಪುಸ್ತಕ ಓದಿ. ನಿಮ್ಮನ್ನು ನೋಡಿ ಮಕ್ಕಳು…
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಕರಪತ್ರ ಬಿಡುಗಡೆ ಕಾರ್ಯಕ್ರಮವು ದಿನಾಂಕ 02 ಫೆಬ್ರವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಇವರು ಲಕ್ಷ ಗ್ರಂಥಾಲಯ ಯೋಜನೆ, ಮನೆಗೊಂದು ಗ್ರಂಥಾಲಯದ ರೂಪುರೇಷೆಯನ್ನು ವಿವರಿಸುತ್ತಾ “ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪಡೆದಿದೆ. ಈ ಹೆಗ್ಗಳಿಕೆಯ ಜೊತೆಗೆ ಕನ್ನಡ ಪುಸ್ತಕಗಳನ್ನು ಖರೀದಿಸಿ, ಓದುವವರ ಕೊರತೆಯೂ ಇದೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷ ಮನೆಗಳಲ್ಲಿ ತಲಾ ಒಂದು ಲಕ್ಷ ಮೌಲ್ಯದ ಪುಸ್ತಕ ಇರುವ ಗ್ರಂಥಾಲಯ ಸೃಷ್ಟಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕನ್ನಡಿಗರಲ್ಲಿ ಪುಸ್ತಕಗಳನ್ನು ಖರೀದಿಸಿ ಓದುವ ಮನೋಭಾವ ಜಾಗೃತವಾಗಬೇಕು. ಕನ್ನಡ ಭಾಷೆಯಲ್ಲಿ ಅನೇಕ ಉತ್ತಮ ಬರಹಗಾರರಿದ್ದು, ಈ ನಾಡಿನಾದ್ಯಂತ…
ಮುರ್ಡೇಶ್ವರ : ಉತ್ತರಕೊಪ್ಪ ಗೋಳಿಕುಂಬ್ರಿ ಇಲ್ಲಿರುವ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಯಕ್ಷಸಪ್ತಾಹ ಮುರುಡೇಶ್ವರ – 2025’ 11ನೆಯ ವರ್ಷದ ಸಂಭ್ರಮವನ್ನು ದಿನಾಂಕ 08 ಫೆಬ್ರವರಿ 2025ರಿಂದ 14 ಫೆಬ್ರವರಿ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ಮುರ್ಡೇಶ್ವರ ಬಸ್ತಿಮಕ್ಕಿ, ನೀರಗದ್ದೆ ಬೈಲೂರು, ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದಲ್ಲಿ ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕೊಂಡದಕುಳಿ, ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷೋತ್ಸವ ನಡೆಯಲಿದೆ.
ಬಾಗಲಕೋಟೆ : ಹಿರಿಯ ಸಂಸ್ಕೃತ ವಿದ್ವಾನ್, ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಕುಲಪತಿಯೂ ಆಗಿರುವ ಕರ್ನಾಟಕ ಮೂಲದ ಡಾ. ವಾದಿರಾಜಾಚಾರ್ಯ ರಾಘವೇಂದ್ರಾಚಾರ್ಯ ಪಂಚಮುಖಿಯವರು ದೇಶದ ಅತ್ಯುನ್ನತ ‘ಪದ್ಮಶ್ರೀ’ ಗೌರವಕ್ಕೆ ಭಾಜನರಾಗಿದ್ದಾರೆ. ಆಚಾರ್ಯಕೊಪ್ಪ ಗ್ರಾಮ ಮೂಲದ ಡಾ. ಪಂಚಮುಖಿಯವರ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲೇ ಬಾಗಲಕೋಟೆಗೆ ಬಂದು ನೆಲೆಸಿದ್ದರು. 1936ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದ ಪಂಚಮುಖಿಯವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದಿದ್ದರು. ಬಳಿಕ ಧಾರವಾಡಕ್ಕೆ ಸ್ಥಳಾಂತರಗೊಂಡಿದ್ದರು ಕುಟುಂಬದ ಕೆಲವರು ಈಗಲೂ ಬಾಗಲಕೋಟೆಯಲ್ಲಿದ್ದಾರೆ. ಪಂಚಮುಖಿಯವರ ತಂದೆ ರಾಘವೇಂದ್ರ ಆಚಾರ್ಯ ಕೂಡ ಇತಿಹಾಸ ಮತ್ತು ವೇದಾಂತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ‘ವಿದ್ಯಾರತ್ನ’ ಬಿರುದಿಗೆ ಪಾತ್ರರಾಗಿದ್ದರು. ಡಾ. ಪಂಚಮುಖಿ ಅವರು ಹಲವು ವರ್ಷಗಳ ಕಾಲ ರೇಡಿಯೋದ ಸಂಸ್ಕೃತ ಭಾಷೆಯ ವಾರ್ತಾ ವಾಚಕರಾಗಿದ್ದರು. 40 ವರ್ಷಗಳ ಹಿಂದೆ ಅವರ ಸಂಸ್ಕೃತ ವಾರ್ತೆ ಕೇಳಿದವರು ಇಂದಿಗೂ ಅವರ ಧ್ವನಿಯನ್ನು ಸ್ಮರಿಸುತ್ತಾರೆ. ಡಾ. ಪಂಚಮುಖಿಯವರು ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕ, ಮುಂಬಯಿ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ವಿದ್ವತ್ತಿಗೆ ಕುಲಪತಿಗಳ ಚಿನ್ನದ ಪದಕವೂ…
ಬೆಂಗಳೂರು : ಮೂರು ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿರುವ ರಿಕ್ಕಿ ಕೇಜ್ ಹೆಸರಾಂತ ಗಾಯಕ, ಜನಪ್ರಿಯ ಸಂಗೀತ ನಿರ್ದೇಶಕ. ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಕರೊಲಿನಾದಲ್ಲಿ ಜನಿಸಿರುವ ರಿಕ್ಕಿ ಕೇಜ್ ಮೂಲತಃ ಭಾರತದವರು. ಎಂಟನೆ ವರ್ಷದಲ್ಲಿ ಹೆತ್ತವರೊಂದಿಗೆ ಬೆಂಗಳೂರಿಗೆ ವಲಸೆ ಬಂದು ನೆಲೆಸಿರುವ ರಿಕಿ ಕೇಜ್ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರ್ಣಗೊಳಿಸಿ, ಆಕ್ಸ್ ಫರ್ಡ್ ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತ ಚಿಕಿತ್ಸಾ ವ್ಯಾಸಂಗವನ್ನು ಪೂರ್ಣಗೊಳಿಸಿದರು. ಆದರೆ ದಂತ ಚಿಕಿತ್ಸಾ ವೃತ್ತಿಯನ್ನು ಆಯ್ದುಕೊಳ್ಳದೆ ಸಂಗೀತವನ್ನು ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡ ಇವರು ‘ವಿಂಡ್ಸ್ ಆಫ್ ಸಂಸಾರ’, ‘ಶಾಂತಿ ಸಂಸಾರ’, ‘ಡಿವೈನ್ ಟೈಡ್ಸ್’ ಮತ್ತು ‘ಬ್ರೇಕ್ ಆಫ್ ಡಾನ್’ ಧ್ವನಿಸುರಳಿಗಳಿಗೆ ಪ್ರಶಸ್ತಿ ಪಡೆದಿರುವ ರಿಕ್ಕಿ ಕೇಜ್ ಕನ್ನಡದ ಐದು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಈವರೆಗೆ 21 ಆಲ್ಬಂಗಳನ್ನು ಇವರು ಸಂಯೋಜಿಸಿದ್ದು, ಭಾರತೀಯ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಸಂಗೀತ ಎಲೆಕ್ಟ್ರಾನಿಕ್ ಸಂಗೀತಗಳ ಮಿಶ್ರಣ ಫ್ಯೂಜನ್ ಜಾನರ್ ಗೆ ಹೆಸರುವಾಸಿಯಾಗಿದ್ದಾರೆ.…
ಬಾಗಲಕೋಟೆ : ಜಾನಪದ ಲೋಕದಲ್ಲಿ ಕೇಳಿ ಬರುವ ಹೆಸರು ವೆಂಕಪ್ಪ ಸುಗತೇಕರ್ ಇವರಿಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದೆ. 81 ವರ್ಷದ ಸುಗತೇಕರ ಅನಕ್ಷರಸ್ಥರಾಗಿದ್ದು, ಬಾಲ್ಯದಿಂದ ಹಾಡುತ್ತಿದ್ದಾರೆ. ಕಳೆದ ಆರುವರೆಯಿಂದ ಏಳು ದಶಕಗಳ ಕಾಲ ಒಂದು ಸಾವಿರಕ್ಕೂ ಅಧಿಕ ಗೋಂಧಳಿ (ಜಾನಪದ) ಹಾಡುಗಳನ್ನು ಹಾಡಿದ್ದೂ ಅಲ್ಲದೇ 150ಕ್ಕೂ ಹೆಚ್ಚು ಗೋಂಧಳಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಕಥೆಗಳ ಬಗ್ಗೆ ಆಸಕ್ತಿ ಮೂಡಿಸಿದ ಗಾರುಡಿಗ. ಮೂಲೆ ಗುಂಪಾಗುತ್ತಿರುವ ಗೋಂಧಳಿ ಹಾಡುಗಳ ಕುರಿತು ಉಚಿತವಾಗಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಜಾನಪದ ಲೋಕಕ್ಕೆ ಸುಗತೇಕರ್ ನೀಡಿದ್ದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕೊಂಡಾಡಿದ್ದರು. ಈಚೆಗೆ ಹಾವೇರಿಯ ಜಾನಪದ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ‘ಪದ್ಮಶ್ರೀ ಪ್ರಶಸ್ತಿ’ಗೆ ಆಯ್ಕೆಯಾದ ಜಾನಪದ ಗಾಯಕ ವೆಂಕಪ್ಪ ಸುಗತೇಕರ್ “ದೇವಿ ಆಶೀರ್ವಾದದಿಂದ ಒಳ್ಳೆಯದು ಆಗಿದೆ. ಸೇವಾ ಮಾಡಿದ್ದಕ್ಕೂ ಮನ್ನಣೆ ದೊರೆತಿದೆ. ಗೋಂಧಳಿ ಪದಗಳನ್ನು ಉಳಿಸುವುದಕ್ಕಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ಪೀಳಿಗೆಗೆ ಹಸ್ತಾಂತರಿಸುವ…
ಹಾಸನ : ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿ ಡಾ. ಅರಕಲಗೂಡು ಸೂರ್ಯಪ್ರಕಾಶ್, ಹಾಸನ ಜಿಲ್ಲೆಯ ಅರಕಲಗೂಡಿನವರಾದ ಸೂರ್ಯಪ್ರಕಾಶ್ ಹೆಸರಾಂತ ಪತ್ರಕರ್ತರು. ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಮೈಸೂರು ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ತುಮಕೂರು ವಿವಿಯಲ್ಲಿ ಡಿ.ಲಿಟ್ ಪಡೆದ ಸೂರ್ಯಪ್ರಕಾಶ್ ಝೀ ನ್ಯೂಸ್, ದಿ ಪಯೋನಿರ್, ಏಷ್ಯಾ ಟೈಮ್ಸ್, ಇಂಡಿಯನ್ ಎಕ್ಸ್ ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. ರಾಜಕೀಯ ವಿಶ್ಲೇಷಣೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಪಾರ ಜ್ಞಾನವುಳ್ಳವರು. ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಬಲು ಜನಪ್ರಿಯರು.