Author: roovari

ಮಣೂರು: ಮಣೂರು ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇಗುಲದ 2ನೇ ವರ್ಷದ ಪ್ರತಿಷ್ಠಾ ವರ್ದಂತಿ ಕಾರ್ಯಕ್ರಮದ ಅಂಗವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ದ 30ನೆಯ ಕಾರ್ಯಕ್ರಮವಾಗಿ ಮಕ್ಕಳ ‘ಯುಗಳ ಸಂವಾದ’ವು ದಿನಾಂಕ 29-05-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಭಾಗವತರಾದ ಹರೀಶ್ ಕಾವಡಿ ಮಾತನಾಡಿ “ಸಾಂಸ್ಕೃತಿಕ ಲೋಕದ ಭವಿಷ್ಯದ ರೂವಾರಿಗಳು ತೆಕ್ಕಟ್ಟೆ ಸಂಸ್ಥೆಯಲ್ಲಿ ದಿನದಿನವೂ ವೃದ್ಧಿಗೊಳ್ಳುತ್ತಿದ್ದಾರೆ. ಯಕ್ಷಕಲೆಯಲ್ಲಿನ ವಿವಿಧ ಆಯಾಮಗಳಲ್ಲಿ ಕರಗತಗೊಂಡಿರುವ ಯಶಸ್ವಿ ಸಂಸ್ಥೆಯ ಪುಟಾಣಿಗಳು ಕರಾವಳಿ ಭಾಗದಲ್ಲಿ ಮನೆ ಮಾತಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುತ್ತದೆ. ರಂಗ ಒದಗುತ್ತಾ ಹೋದಾಗ ಮಕ್ಕಳಲ್ಲಿನ ಕಲೆ ಪ್ರಬುದ್ಧಗೊಳ್ಳುತ್ತದೆ. ಹಲವಾರು ರಂಗದಲ್ಲಿ ಮಿಂಚುತ್ತಾ ಕಳೆಕಟ್ಟುವ ಮಕ್ಕಳು ಕಲಾ ವಲಯದಲ್ಲಿ ಸೈ ಎನಿಸಿಕೊಂಡಿರುವುದಂತೂ ನಿಜ.” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ರಘುರಾಮ ಶೆಟ್ಟಿಯವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಅತಿಥಿಗಳಾಗಿ ವಿಜಯ್ ಶೆಟ್ಟಿ, ಸುರೇಶ್, ಚಂಡೆಯ ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು. ಲಂಕಾದಹನದ ಹನುಮಂತ-ಲಂಕಿಣಿ, ದ್ರೌಪದಿ ಪ್ರತಾಪದ ದ್ರೌಪದಿ-ಅರ್ಜುನ, ಕೃಷ್ಣಾರ್ಜುನದ…

Read More

ಬೆಂಗಳೂರು : ಬೆಂಗಳೂರಿನ ‘ಅಂತರಂಗ’ ಪ್ರಸ್ತುತಪಡಿಸುವ ನೂತನ ನಾಟಕ ‘ಕಾಯುವ ಕಾಯಕ’ವು ದಿನಾಂಕ 05-06-2024 ರಂದು ಬೆಂಗಳೂರಿನ ರಂಗ ಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವನ ಕವಿ ಹೆಚ್. ಡುಂಡಿರಾಜ್ ವಿರಚಿತ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಖ್ಯಾತ ನಿರ್ದೇಶಕಿ ಅರ್ಚನಾ ಶ್ಯಾಮ್ ನಿರ್ವಹಿಸಿದ್ದಾರೆ. ನಾಟಕವು ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕತೆ ಇವೆಲ್ಲವುಗಳನ್ನು ಒಳಗೊಂಡಿದೆ. ವೀಕ್ಷಕರು ‘ಬುಕ್ ಮೈ ಶೋ’ ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಂಕಲ್ ಶ್ಯಾಮ್- 98809 14509 ಮತ್ತು ಮುರಳೀಧರ್ – 99869 11321 ಇವರನ್ನು ಸಂಪರ್ಕಿಸಬಹುದು.

Read More

ಉಡುಪಿ : ರಾಗ ಧನ ಉಡುಪಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ರಾಗರತ್ನ ಮಾಲಿಕೆ’ -25 ಸಂಗೀತ ಕಾರ್ಯಕ್ರಮವು ದಿನಾಂಕ 02-06-2024ರಂದು ಸಂಜೆ 7-00 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ವಿದ್ವಾನ್ ಪ್ರಣವಶ್ರೀ ಯಶಸ್ವಿ ಸುಬ್ಬರಾವ್ ಮತ್ತು ಇವರ ಶಿಷ್ಯ ಚಿರಂಜೀವಿ ಮೋಕ್ಷಿತ್ ಎಸ್. ಇವರ ದ್ವಂದ್ವ ವಯೊಲಿನ್ ವಾದನಕ್ಕೆ ಡಾ. ಅಕ್ಷಯ ನಾರಾಯಣ ಕಾಂಚನ ಇವರ ಮೃದಂಗದಲ್ಲಿ ಹಾಗೂ ಮೈಸೂರಿನ ವಿದ್ವಾನ್ ಮಂಜುನಾಥ್ ಇವರು ಘಟಂನಲ್ಲಿ ಸಹಕರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9964140601 ಇವರನ್ನು ಸಂಪರ್ಕಸಿರಿ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿ ತಿಳಿಸಿರುತ್ತಾರೆ.

Read More

ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜು ವತಿಯಿಂದ ಕಾಲೇಜಿನ ತುಳು ಸಂಘ ಹಾಗೂ ಉಡುಪಿ ತುಳು ಕೂಟ ಆಶ್ರಯದಲ್ಲಿ ತುಳು ಸಂಸ್ಕೃತಿ ಹಬ್ಬ, ಸಾಂಪ್ರದಾಯಿಕ ದಿನದ ಅಂಗವಾಗಿ ‘ತುಳು ಐಸಿರಿ 2024’ ಕಾರ್ಯಕ್ರಮವು ದಿನಾಂಕ 28-05-2024ರಂದು ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗೂ ನಟ ಕಾಸರಗೋಡು ಚಿನ್ನಾ “ನಾವಾಡುವ ಭಾಷೆ ಬಾಂಧವ್ಯವಾಗಿ ಗಟ್ಟಿಗೊಳ್ಳಬೇಕು. ಭಾಷೆಗಳನ್ನು ಮನೆಮನೆಗಳಲ್ಲಿ ಸಂಭ್ರಮಿಸಬೇಕು. ಈ ನಿಟ್ಟಿನಲ್ಲಿ ಫರ್-ಫರ್ ಕೊಂಕಣಿ ಕಾರ್ಯಕ್ರಮ ರೂಪಿಸಲಾಯಿತು. ಇದೇ ಮಾದರಿಯಲ್ಲಿ ಮನೆಮನೆಗಳಲ್ಲಿ ತುಳು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಸಾಕಷ್ಟು ಹೋರಾಟಗಳು, ಪ್ರಯತ್ನಗಳು ನಡೆಯುತ್ತಿದ್ದರೂ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗದ ತುಳು ಸಾಹಿತ್ಯ. ತುಳು ಲಿಪಿ ಬರವಣಿಗೆ ಮತ್ತು ಓದು ಪರಿಣಾಮಕಾರಿಯಾಗಿ ನಡೆಯಬೇಕು. ಲಿಪಿಯ ಬಳಕೆಗೆ ಒತ್ತು ನೀಡಬೇಕು. ಮಾತೃ ಭಾಷೆ ಜತೆಗೆ ಇತರ ಭಾಷೆಗಳನ್ನು ಕಲಿಯುವ, ಮಾತನಾಡುವ ಆಸಕ್ತಿ…

Read More

ಬೆಂಗಳೂರು : ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ ಕುಮಾರ ಇವರ ಮೊಮ್ಮಗಳು ಹಾಗೂ ವಿದ್ವಾನ್ ಪಿ. ಪ್ರವೀಣ ಕುಮಾರ್ ಇವರ ಶಿಷ್ಯೆ ಕುಮಾರಿ ಗೌರಿ ಮನೋಹರಿ ಎಚ್. ಇವರ ಭರತನಾಟ್ಯ ರಂಗಪ್ರವೇಶ ‘ರಂಗಾಭಿವಂದನೆ’ ಕಾರ್ಯಕ್ರಮವು ದಿನಾಂಕ 30-05-2024ರಂದು ಸಂಜೆ ಗಂಟೆ 6-15ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ. ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ್, ಶ್ರೀ ಶಂಕರ್ ಕಂದಸ್ವಾಮಿ ಹಾಗೂ ರುಕ್ಮಿಣಿ ವಿಜಯಕುಮಾರ್ ಇವರುಗಳು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಶ್ರೀಮತಿ ವಿದ್ಯಾಲಕ್ಷ್ಮಿ ಎಂ.ಎಸ್. ಮತ್ತು ಶ್ರೀ ಕಿರಣ್ ಎಚ್.ಎಸ್. ಇವರು ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More

ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ನಾಲ್ಕನೇ ದಿನದ ಕಾರ್ಯಕ್ರಮವು ದಿನಾಂಕ 28-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಿಮರ್ಶಕ ಡಾ. ಎಂ.ಪ್ರಭಾಕರ ಜೋಷಿ “ವಿಶ್ವದ ರಂಗಭೂಮಿ ಅದ್ಭುತವಾಗಿ ಬೆಳೆದಿದೆ. ಅಂತೆಯೇ ಯಕ್ಷಗಾನ ರಂಗಭೂಮಿಯೂ ತನ್ನನ್ನು ತಾನು ತೆರೆದುಕೊಂಡು ವಿಶಾಲ ಭಾವದಿಂದ ವಿಕಾಸಗೊಳ್ಳಬೇಕಾಗಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಹೀಗೆಲ್ಲಾ ಎಗ್ಗೆಗಳು ಆರಂಭವಾಗಿದೆ ಆ ದೃಷ್ಟಿಯಲ್ಲಿ ರಜತ ವರ್ಷದ ಹೊಸ್ತಿಲಲ್ಲಿರುವ ಸರಯೂ ಮಕ್ಕಳ ಮೇಳವೂ ಯೋಚಿಸಬೇಕು. ಪ್ರಬುದ್ಧ ಕಾರ್ಯಕ್ರಮಗಳ ಮೂಲಕ ಬೆಳೆಯಬೇಕು. ಹಿರಿಯರ ಮಾರ್ಗದರ್ಶನ, ಕಿರಿಯರ ಬಾಗೀದಾರಿಕೆಯಿಂದ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿ ಸರಯೂ ಮನೆ ಮಾತಾಗಲಿ.” ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಪ್ರೋತ್ಸಾಹಕ ಹಾಗೂ ತೆಂಕು-ಬಡಗಿನ ಸಮನ್ವಯಕಾರ ಕೆರೆಮನೆ ಶ್ರೀಶಿವಾನಂದ ಹೆಗಡೆ…

Read More

ಮಂಗಳೂರಿನ ದುರ್ಗಾಮಹಿ ಪ್ರಕಾಶನ ಪ್ರಕಟಿಸಿರುವ ಕವಯಿತ್ರಿ ಮತ್ತು ಸಂಘಟಕಿ ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ (ಪ್ರಕಾಶನ: 2023) ಮೂವತ್ತು ಕವನಗಳಿರುವ ಒಂದು ತುಳು ಕವನ ಸಂಕಲನ. ಪುಟದ ಎಡಭಾಗದಲ್ಲಿ ತುಳುಲಿಪಿಯಲ್ಲಿ ಕವನವನ್ನು ಮುದ್ರಿಸಲಾಗಿದ್ದು ಪುಟದ ಬಲಗಡೆ ಅದೇ ಕವನವನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ತುಳುಲಿಪಿಯನ್ನು ಪ್ರಚುರಪಡಿಸುವುದು ಕೂಡ ತನ್ನ ಉದ್ದೇಶಗಳಲ್ಲೊಂದು ಎಂದು ಕವಯಿತ್ರಿ ಹೇಳಿಕೊಂಡಿದ್ದಾರೆ. ಅದು ನಿಜವೂ ಹೌದು; ಈ ಕೃತಿಯಲ್ಲಿ ತುಳುಲಿಪಿಯ ಪರಿಚಯ ಕೂಡ ಮಾಡಿಕೊಡಲಾಗಿದೆ. ತುಳುವಿನ ಸ್ವರಾಕ್ಷರಗಳು, ವ್ಯಂಜನಗಳು, ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳನ್ನು ನೀಡಲಾಗಿದ್ದು ತುಳುಲಿಪಿಯನ್ನು ಕಲಿಯುವವರಿಗೆ ಅನುಕೂಲವಾಗಲಿದೆ. ‘ಪೆರ್ಗದ ಸಿರಿ’ ಎಂದರೆ ಸ್ವರ್ಗದ ಶ್ರೀಮಂತಿಕೆ ಎಂದು ಅರ್ಥ. ನಮ್ಮ ಈ ತುಳುನಾಡು ಸ್ವರ್ಗದಂತಹ ಭೂಮಿ ಎಂದು ಕವಯಿತ್ರಿ ಹೇಳುತ್ತಾರೆ. ನಂದಿನಿ ನದಿಯ ತಟದಲ್ಲಿ ಕಟೀಲಿನ ದುರ್ಗಾಂಬಿಕೆಯ ವರದಹಸ್ತದ ನೆರಳಿನಲ್ಲಿ ಸಮೃದ್ಧಿಯ ಜೀವನ ನಡೆಸುತ್ತಿರುವ ನಾವು ಪುಣ್ಯವಂತರು ಎಂದು ಜನ್ಮ ನೀಡಿದ ತಾಯಿಯನ್ನು ಮತ್ತು ಪೊರೆಯುವ ಭೂಮಿಯನ್ನು ನೆನೆಯುತ್ತಾರೆ: ‘ಪೈರುಪಚ್ಚೆಗಳಿಲ್ಲಿ ಉಕ್ಕುತ್ತದೆ ಹಾಲಿನ…

Read More

ಬಂಟ್ವಾಳ: ‘ಅಭಿರುಚಿ’ ಜೋಡುಮಾರ್ಗ ಆಯೋಜಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಒಂದು ಸಂಜೆ ಎಂಬ ವಿನೂತನ ಕಾರ್ಯಕ್ರಮ ಬಿ. ಸಿ. ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 26-05-2024ರ ಭಾನುವಾರ ಸಂಜೆ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಮಹಾಭಾರತ ಯಾತ್ರೆ’ ಕುರಿತು ಅವಲೋಕನ, ಸಂವಾದ, ಗೌರವಾರ್ಪಣೆ ನಡೆಯಿತು. ಈ ಸಂದರ್ಭ ಮಹಾಭಾರತದ ಪಾತ್ರಗಳ ವ್ಯಕ್ತಿತ್ವ ವಿಸ್ತಾರದ ಕುರಿತು ಮೂಡಿದ ಜಿಜ್ಞಾಸೆಗಳಿಗೆ ಉತ್ತರಿಸಿದ ಲಕ್ಷ್ಮೀಶ ತೋಳ್ಪಾಡಿ “ಮಹಾಭಾರತ ದಟ್ಟ ಲೌಕಿಕತೆಯೊಂದಿಗೆ ಅಷ್ಟೇ ಆಧ್ಯಾತ್ಮಿಕವಾಗಿರುವ ಕೃತಿಯಾಗಿದೆ. ಸೃಷ್ಟಿಶೀಲವಾದುದು ಮಹಾಭಾರತ ಎಂದರು. ಬಿ. ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷರಾದ ಕಜೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕ ಪೃಥ್ವಿರಾಜ್ ಕವತ್ತಾರ್ ಭಾಗವಹಿಸಿ ಮಾತನಾಡಿದರು. ಸಂವಾದದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ಟ, ರಂಗಕರ್ಮಿ ಮೂರ್ತಿ ದೇರಾಜೆ, ಕೃಷಿಕ ಹಾಗೂ…

Read More

ಮಂಗಳೂರು : ಸೋಮೇಶ್ವರದ ಕೊಲ್ಯ ಇಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ಕರ್ನಾಟಕ ರಾಜ್ಯೋತ್ಸವ ಮತ್ತು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯಶ್ರೀ ಸರಣಿ – ಮಾಲಿಕೆ 5ರಲ್ಲಿ ‘ನಾಟ್ಯ ಮೋಹನ ನವತ್ಯೋತ್ಸವ’ ಕಾರ್ಯಕ್ರಮವು ದಿನಾಂಕ 31-05-2024ರಂದು ಸಂಜೆ ಗಂಟೆ 5-00ಕ್ಕೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪುಣೆಯ ನೃತ್ಯನಿಕೇತನದ ನಿರ್ದೇಶಕರು ಹಾಗೂ ಕೊಲ್ಯದ ನಾಟ್ಯನಿಕೇತನ ಹಿರಿಯ ವಿದ್ಯಾರ್ಥಿನಿಯಾದ ಶ್ರೀಮತಿ ಕವಿತಾ ತೋಳ್ಪಾಡಿ ನೃತ್ಯ ಪ್ರಸ್ತುತಿ ನೀಡಲಿದ್ದಾರೆ. ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದು, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಉರ್ವಸ್ಟೋರ್ ಇದರ ಅತಿಥಿ ಉಪನ್ಯಾಸಕಿ ಹಾಗೂ ಭರತನಾಟ್ಯ ಕಲಾವಿದೆ ಶ್ರೀಮತಿ ಅರುಣಾ ಸುರೇಶ್ ಇವರು ಭಾಗವಹಿಸಲಿದ್ದಾರೆ.

Read More

ಉಳ್ಳಾಲ : ದ.ಕ. ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಸಂಘಟನೆಯು ತ್ರಿವಳಿ (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು) ಜಿಲ್ಲಾ ಮಟ್ಟದ ‘ಸುಗಿತ್ ನಲಿಪುಗ 2024’ ಕುಣಿತ ಭಜನಾ ಸ್ಪರ್ಧೆಯನ್ನು ದಿನಾಂಕ 19-05-2024ರಂದು ಅಂಬಿಕಾ ರಸ್ತೆಯ ಗಟ್ಟಿ ಸಮಾಜ ಭವನದಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು “ಹಿಂದೆ ಭಜನೆ ಮತ್ತು ಯಕ್ಷಗಾನವನ್ನು ತಾತ್ಸಾರವಾಗಿ ನೋಡುತ್ತಿದ್ದು, ಇಂದು ಶಿಕ್ಷಣ, ಪದವಿ ಪಡೆದವರೇ ಈ ಕ್ಷೇತ್ರದತ್ತ ಬರುತ್ತಿದ್ದಾರೆ. ಭಜನೆ ಎನ್ನುವುದು ಧರ್ಮ ಶಿಕ್ಷಣದ ಪಠ್ಯ, ಅಸ್ಪೃಶ್ಯತೆಯ ಘಾಟು ಇದರಲ್ಲಿಲ್ಲ, ಇಹ ಪರದ ಸೇರುವಿಕೆಯಾಗಿರುವ ಭಜನೆಯ ಮೂಲಕ ಬದುಕು‌ ಕಟ್ಟಿಕೊಳ್ಳಬಹುದು. ಹತ್ತು ಮಂದಿಗೆ ಜಾಗೃತಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧೆ ಅಗತ್ಯ” ಎಂದು ನುಡಿದರು. ಈ ವೇಳೆ ಸಾಯಿ ಪರಿವಾರ್ ಟ್ರಸ್ಟಿನ ಮಹಾಪೋಷಕರಾದ ಪ್ರವೀಣ್ ಶೆಟ್ಟಿ ಪಿಲಾರು ಮೇಗಿಮನೆ ಇವರಿಗೆ ‘ಸಾಯಿ…

Read More