Author: roovari

ಬೆಂಗಳೂರು : ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 08-12-2023ರಂದು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡುತ್ತಾ, “ಬಡತನದ ಬೇಗುದಿಯಲ್ಲಿ ಬೆಂದು ಬಂಗಾರವಾಗಿ, ಸಮಾಜದಲ್ಲಿಯ ಮೌಢ್ಯವನ್ನು ದೂರಮಾಡುವುದರ ಜೊತೆಗೆ ಜೀವನದ ವಾಸ್ತವಿಕತೆಯನ್ನು ಮಾರ್ಮಿಕವಾಗಿ ತಿಳಿಸಿಕೊಟ್ಟವರು ಡಾ. ಸಿದ್ದಲಿಂಗಯ್ಯನವರು. ಕವಿ, ಸಾಹಿತಿಗಳನ್ನು ಜಾತಿ ಧರ್ಮಕ್ಕೆ ಸೀಮಿತಗೊಳಿಸಬಾರದು. ಬದಲಿಗೆ ಸಾಹಿತ್ಯದಿಂದಲೇ ಅವರು ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನು ಗೌರವಿಸುವ ಮೂಲಕ ಸಾಹಿತ್ಯಕ್ಕೆ ಸಾಹಿತ್ಯವೇ ಸಾಟಿ ಎನ್ನುವ ತತ್ವವನ್ನು ಹೊಂದಿದೆ. ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಡಾ. ಸಿದ್ದಲಿಂಗಯ್ಯ ಅವರನ್ನು ದಲಿತ ಕವಿ ಎಂದೇ ಗುರುತಿಸಿದ್ದರು. ಅದರ ಜೊತೆಯಲ್ಲಿ ಬಹುಮುಖ ಪ್ರತಿಭೆಯ ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯವನ್ನು ರಚಿಸಿದ್ದು ಮಾತ್ರವಲ್ಲದೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ…

Read More

ಸುರತ್ಕಲ್ : ಶ್ರೀ ವಿನಾಯಕ ಯಕ್ಷಗಾನ ಮಂಡಲಿ ತಡಂಬೈಲ್ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಯೋಗದೊಂದಿಗೆ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ, ಸಂಸ್ಮರಣೆ ಮತ್ತು ಸಭಾ ಕಾರ್ಯಕ್ರಮವು ದಿನಾಂಕ 28-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ವೇದಮೂರ್ತಿ ಸೀತಾರಾಮ ಆಚಾರ್ಯ ಪಚ್ಚನಾಡಿ ಇವರು ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ, ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಷಿಯವರು ಮಾತನಾಡಿ “ಯಕ್ಷಗಾನ ಕಲಾವಿದ, ಸಂಘಟಕ, ಮಹಿಳಾ ಯಕ್ಷಗಾನ ತಾಳಮದ್ದಳೆಗಳ ಸಂಯೋಜಕ ವಾಸುದೇವ ರಾವ್ ಅವರು ಯಕ್ಷಗಾನ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಅವರ ಕ್ರಿಯಾಶೀಲ ಗುಣ, ಆಸಕ್ತಿ, ಇತರರಿಗೆ ಮಾದರಿ” ಎಂದು ನುಡಿದರು. ಪ್ರಸಂಗಕರ್ತ, ಸಾಹಿತಿ ಶ್ರೀಧರ ಡಿ.ಎಸ್‌. ಅವರು “ವೇದಿಕೆಯು ನಿರಂತರವಾಗಿ ಹೊಸ ಹೊಸ ಯಕ್ಷಗಾನ ಕಲಾವಿದರ ಆವಿಷ್ಕಾರದ ಕೇಂದ್ರವಾಗಲಿ” ಎಂದರು. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣ ಮೂರ್ತಿ, ಶ್ರೀಮತಿ ಸುಲೋಚನಾ…

Read More

ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಮಂಗಳೂರು ಗಮಕ ಕಲಾ ಪರಿಷತ್ತು ಆಯೋಜಿಸಿದ ಮನೆಮನೆ ಗಮಕ 13ನೇ ಪಲ್ಲವ ಕಾರ್ಯಕ್ರಮವು ದಿನಾಂಕ 29-11-2023ರ ಬುಧವಾರದಂದು ಸಾಯಂಕಾಲ ನಡೆಯಿತು. ತಲಪಾಡಿ ದೇವಿ ನಗರದ ಶಾರದಾ ವಿದ್ಯಾನಿಕೇತನ ಇಲ್ಲಿನ ಶಿಕ್ಷಕರ ವಸತಿನಿಲಯದಲ್ಲಿರುವ ಉಪನ್ಯಾಸಕಿ ಶ್ರೀಮತಿ ಸುಮನ ಭಟ್ ಮತ್ತು ಶ್ರೀಯುತ ಜಿ. ಆರ್. ಪ್ರಸನ್ನ ಇವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನಕ ದಾಸರ ನಳಚರಿತ್ರೆಯ ಭಾಗವಾದ ‘ದಮಯಂತಿ ಸ್ವಯಂವರ’ದ ವಾಚನ ನಡೆಯಿತು. ವಾಚನಕಾರರಾಗಿ ಶ್ರೀ ಸುರೇಶ್ ರಾವ್ ಅತ್ತೂರು ಹಾಗೂ ವ್ಯಾಖ್ಯಾನಕಾರರಾಗಿ ಶ್ರೀ ಶುಭಕರ ಕೆ. ತಲಪಾಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Read More

ಕೊಣಾಜೆ : ಕೈರಂಗಳದ ಶಾರದಾ ಗಣಪತಿ ವಿದ್ಯಾ ಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ಹಿರಿಯ ಸಾಹಿತಿ ಶ್ರೀನಿವಾಸ ಭಟ್ ಸೇರಾಜೆ ಅವರ ಸರ್ವಾಧ್ಯಕ್ಷತೆಯಲ್ಲಿ ‘ಸಾಹಿತ್ಯ ಸಮಾವೇಶ-2023’ವು ದಿನಾಂಕ 01-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಸ್. ನಾಯಕ್ ಮಾತನಾಡಿ “ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಅಭಿರುಚಿ ಇಲ್ಲದ ವ್ಯಕ್ತಿ ಪಶುವಿಗೆ ಸಮಾನ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಬೇಕು” ಎಂದು ಹೇಳಿದರು. ಸರ್ವಾಧ್ಯಕ್ಷತೆ ವಹಿಸಿದ ಸಾಹಿತಿ, ಶಾರದಾ ಗಣಪತಿ ವಿದ್ಯಾಕೇಂದ್ರದ ಹಿಂದಿ ಶಿಕ್ಷಕ ಶ್ರೀನಿವಾಸ ಭಟ್ ಸೇರಾಜೆ ಮಾತನಾಡಿ, “ವಿಚಾರಗಳಿಂದ ಚರ್ಚೆ ಆಗಬೇಕೇ ಹೊರತು ಚರ್ಚೆಯೇ ವಿಚಾರ ಆಗಬಾರದು. ಅಧ್ಯಯನಶೀಲತೆ ಮುಖ್ಯ. ಜ್ಞಾನವನ್ನು ಪಡೆದು ಪಸರಿಸಬೇಕು. ಹಾಗಾಗಿ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರದ ಸೇವೆಗೆ ನಾವು ಸಿದ್ಧಪಡಿಸಬೇಕು” ಎಂದರು. ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ. ರಾಜಾರಾಮ್ ಭಟ್ ಮಾತನಾಡಿ “ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ದಾಖಲಾರ್ಹವಾಗಿರುತ್ತವೆ.…

Read More

ಕುಶಾಲನಗರ : ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ಮೈಸೂರು, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರಕಾರ ಮಾನಸಗಂಗೋತ್ರಿ, ಮೈಸೂರು ಹಾಗೂ ಕೊಡಗು ವಿಶ್ವವಿದ್ಯಾಲಯ, ಕೊಡಗು ಜ್ಞಾನಕಾವೇರಿ ಕ್ಯಾಂಪಸ್, ಚಿಕ್ಕ ಅಳವಾರ, ಕುಶಾಲನಗರ, ಕೊಡಗು ಜಿಲ್ಲೆ ಇವರ ಸಹಯೋಗದಲ್ಲಿ ‘ಭಾರತೀಯ ಭಾಷಾ ಉತ್ಸವ’ದ ಪ್ರಯುಕ್ತ ‘ಭಾರತೀಯ ಭಾಷೆಗಳು-ಸಾಹಿತ್ಯ: ವೈವಿಧ್ಯತೆ ಹಾಗೂ ಐಕ್ಯತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 08-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಉದ್ಘಾಟಿಸಿ ಮಾತನಾಡಿ “ತನ್ನದೇ ಆದ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಭಾಷೆ ಕನ್ನಡ. ಇಂತಹ ಭಾಷೆಯ ಉಳಿವು, ಬೆಳವಣಿಗೆ ಮತ್ತು ಪ್ರಸರಣ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಮಾತೃಭಾಷೆಯಾಗಿರುವ ಕನ್ನಡ ಭಾಷೆಯ ಅಸ್ಮಿತೆ ಮತ್ತು ಶ್ರೀಮಂತಿಕೆಯನ್ನು ಕಾಪಾಡುವ ಹೊಣೆಗಾರಿಕೆ ಕನ್ನಡಿಗರದ್ದಾಗಿದೆ. ಕನ್ನಡ ಭಾಷೆಯ ವಿಚಾರಕ್ಕೆ ಬಂದಾಗ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳಬಾರದು. ಬಹಳ ಹೆಮ್ಮೆಯಿಂದ…

Read More

ಉಡುಪಿ : ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ‘ಕಿಶೋರ ಯಕ್ಷಗಾನ ಸಂಭ್ರಮ -2023’ನ್ನು ದಿನಾಂಕ 07-12-2023ರಂದು ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡುತ್ತಾ “ಯಕ್ಷಗಾನ ವಾಚಿಕ, ಆಂಗಿಕ, ಆಹಾರ್ಯ ಹಾಗೂ ಸಾತ್ವಿಕ ಈ ನಾಲ್ಕೂ ಅಂಶಗಳನ್ನು ಒಳಗೊಂಡಿರುವ ಒಂದು ಪರಿಪೂರ್ಣ ಕಲಾಪ್ರಕಾರ. ಈ ಕಲಾಪ್ರಕಾರವನ್ನು ಬೆಳೆಸುವಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಮಹತ್ವದ ಪಾತ್ರವಹಿಸಿದೆ” ಎಂದು ಹೇಳಿದರು. ಯಕ್ಷಶಿಕ್ಷಣ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಕೆ. ರಘುಪತಿ ಭಟ್ರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಡಾ. ಕೆ. ಅಶೋಕ್ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಉದ್ಯಮಿ ಪಿ. ಗೋಕುಲ್ನಾಾಥ್ ಪ್ರಭು, ಖ್ಯಾತ ವೈದ್ಯ ಡಾ. ಜೆ.ಎನ್. ಭಟ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಮುರಲಿ ಕಡೆಕಾರ್ ಸಂಯೋಜಿಸಿದ ಕಾರ್ಯಕ್ರಮವನ್ನು ನಾರಾಯಣ ಎಂ. ಹೆಗಡೆ ನಿರೂಪಿಸಿ,…

Read More

ಸಿದ್ದಾಪುರ : ಕೊಡಗು ಜಿಲ್ಲಾ, ವಿರಾಜಪೇಟೆ ತಾಲೂಕು ಮತ್ತು ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚೆನ್ನಯ್ಯನ ಕೋಟೆ ಸರಕಾರಿ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಆಯೋಜಿತ ಸಾಹಿತಿ ದಿ. ಎ.ಎನ್‌. ರಾಮಕೃಷ್ಣ ಮತ್ತು ದಿ. ಬಿ.ಜಿ. ರಘುನಾಥ್ ನಾಯಕ್‌ ಜ್ಞಾಪಕಾರ್ಥ ‘ದತ್ತಿನಿಧಿ ಕಾರ್ಯಕ್ರಮ’ವು ಚೆನ್ನಯ್ಯನ ಕೋಟೆ ಸರಕಾರಿ ಪ್ರೌಢ ಶಾಲೆಯಲ್ಲಿ ದಿನಾಂಕ 02-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಕಿ ಕೆ.ಎ. ಕಾವೇರಮ್ಮ ಮಾತನಾಡಿ “ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಯೊಂದಿಗೆ ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ಮುನ್ನಡೆಯಬೇಕು. ಶಾಲೆಗಳಲ್ಲಿ ಇಂತಹ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಪರಿಷತ್‌ ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬಿತ್ತಿ, ಕನ್ನಡ ಸಾಹಿತ್ಯದತ್ತ ಆಸಕ್ತಿ ಮೂಡಿಸುವ ಪ್ರಯತ್ನ ನಡೆಸುತ್ತಿರುವುದು ಮೆಚ್ಚುಗೆಯ ವಿಚಾರ” ಎಂದು ಹೇಳಿದರು. ಮಾಜಿ ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷರಾದ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, “ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ.…

Read More

ಬಂಟ್ವಾಳ : ನೃತ್ಯ ಗುರು ವಿದುಷಿ ವಿದ್ಯಾ ಮನೋಜ್ ಇವರ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ ಭರತನಾಟ್ಯ ಸಂಸ್ಥೆಯ ಕಲ್ಲಡ್ಕ ಮತ್ತು ಬಿ.ಸಿ.ರೋಡ್ ಶಾಖೆಗಳ ವಿದ್ಯಾರ್ಥಿಗಳಿಂದ ‘ಕಲಾ ಪರ್ವ 2023’ವು ದಿನಾಂಕ 30-11-2023ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆ್ಯಂಡ್ ಕಲ್ಚರ್, ಪುತ್ತೂರು ಇದರ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನೃತ್ಯ ಕಲಿಯುವಿಕೆಗೆ ಮಕ್ಕಳಲ್ಲಿ ಶ್ರದ್ಧೆ ಹಾಗೂ ಹೆತ್ತವರ ನಿರಂತರ ಪ್ರೋತ್ಸಾಹ ಎಷ್ಟು ಮುಖ್ಯ ಎಂಬುದನ್ನು ತಿಳಿಸಿ ಹೇಳಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಹರೀಶ್ ಮಾಂಬಾಡಿ ಇವರು ಪಾಲ್ಗೊಂಡು ಯಾವುದೇ ಕಲೆಯನ್ನಾದರೂ ಕಲಿಯಬೇಕಾದರೇ ಆಸಕ್ತಿ ಎಷ್ಟರ ಮಟ್ಟಿಗೆ ಪ್ರಮುಖವಾಗುತ್ತದೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯವೆಂದು ಹೇಳಿದರು. ಕಲಾ ಶಾಲೆಯ ಗುರುಗಳಾದ ವಿದ್ಯಾ ಮನೋಜ್ ಇವರು ಸ್ವಾಗತಿಸಿದರು. ನೃತ್ಯ ಶಾಲೆಯ ಸುಮಾರು 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮವನ್ನು ನೀಡಿದರು.…

Read More

ಬಂಟ್ವಾಳ : ಮಕ್ಕಳ ಕಲಾ ಲೋಕ ಕ.ಸಾ.ಪ. ಬಂಟ್ವಾಳ ತಾಲೂಕು 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ಮಿತ್ತಿಮಾರು ಭುಜಂಗ ಶೆಟ್ಟಿ ಸಭಾಂಗಣದ ಪಲಿಮಾರು ಜನಾರ್ದನ ಪೈ ವೇದಿಕೆಯಲ್ಲಿ ದಿನಾಂಕ 06-12-2023ರಂದು ಸಂಪನ್ನಗೊಂಡಿತು. ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ರಾವ್ ಮೆರವಣಿಗೆ ಉದ್ಘಾಟಿಸಿದರು. ಎಸ್.ಡಿ.ಎಸ್.ಸಿ. ಅಧ್ಯಕ್ಷ ಹರಿಶ್ಚಂದ್ರ ಎಮ್. ಕನ್ನಡ ಧ್ಜಜಾರೋಹಣವನ್ನು ಮತ್ತು ಕ.ಸಾ.ಪ.ದ ಪಾಣೆಮಂಗಳುರು ಹೋಬಳಿ ಅಧ್ಯಕ್ಷ ಮಹಮ್ಮದ್ ಪಿ. ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಮಾಡಿದರು. ತನ್ವಿ ಮತ್ತು ಬಳಗ ನಾಡಗೀತೆ ಹಾಡಿದ್ದು, ದೈಹಿಕ ಶಿಕ್ಷಕ ಭಾಸ್ಕರ ನಾಯ್ಕ, ಪೀರಾಜ್ ವಾಬಳೆ ಮೆರವಣಿಗೆ ವ್ಯವಸ್ಥೆಗೊಳಿಸಿದ್ದರು. ಚೆಂಡೆ ಸಹಿತ ಕೊಂಬು ವಾದನದೊಂದಿಗೆ ಮಕ್ಕಳು ಪಾಲ್ಗೊಂಡ ಮೆರವಣಿಗೆಯು ನಯನ ಮನೋಹರವಾಗಿತ್ತು. ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಬಾಯಾರು ಪ್ರಸ್ತಾವನೆ ಗೈದು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮತ್ತು ಓದುವ ಹವ್ಯಾಸವನ್ನು ಬೆಳೆಸುವ ದೃಷ್ಠಿಯಿಂದ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಗತ ಸಮಿತಿಯವರ ಸಹಕಾರದಿಂದ ಉತ್ತಮ ರೀತಿಯಲ್ಲಿ…

Read More

ಮಂಗಳೂರು : ಎಕ್ಕಾರು ಬಂಟರ ಭವನದಲ್ಲಿ ನಡೆದ ವಾರ್ಷಿಕ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರನ್ನು ಎಕ್ಕಾರು ಬಂಟರ ಸಂಘದ ಆಶ್ರಯದಲ್ಲಿ ದಿನಾಂಕ 26-11-2023ರಂದು ಸನ್ಮಾನಿಸಲಾಯಿತು. ಎಕ್ಕಾರು ಸುಜಾತಾ ಶೆಟ್ಟಿ ಹಾಗೂ ಕನ್ಯಾನ ಸದಾಶಿವ ಶೆಟ್ಟಿ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಬಯಲು ರಂಗ ಮಂದಿರವನ್ನು ಕನ್ಯಾನ ಸದಾಶಿವ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ದಂಪತಿ ಉದ್ಘಾಟಿಸಿದರು. ತಲಾ 2 ಬಾರಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಕಳೆದ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾ ಪಕ, ಸಾಹಿತಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಹಾಗೂ ಹಿರಿಯ ಕೃಷಿ ಸಾಧಕ ಮುರಾ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕರಾಟೆ ಕ್ರೀಡೆಯಲ್ಲಿ ರಾಷ್ಟ್ರ ರಾಜ್ಯ ಮಟ್ಟದಲ್ಲಿ 7 ಬಾರಿ ಚಾಂಪಿಯನ್‌ಷಿಪ್ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಎಕ್ಕಾರಿನ ಪ್ರತಿಭೆ ಸಮೃದ್ಧಿ ಶೆಟ್ಟಿ ಸಹಿತ 9 ಮಂದಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಎಕ್ಕಾರು ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ…

Read More